ನವಜಾತ ಶಿಷುಗಳಿಗೆ ಜಾನ್ಸನ್‌ಬೇಬಿ ಕಿಟ್ ವಿತರಣೆ

ನವಜಾತ ಶಿಷುಗಳಿಗೆ ಜಾನ್ಸನ್‌ಬೇಬಿ ಕಿಟ್ ವಿತರಣೆ Distribution of Johnson's Baby Kits for Newborns

ನವಜಾತ ಶಿಷುಗಳಿಗೆ ಜಾನ್ಸನ್‌ಬೇಬಿ ಕಿಟ್ ವಿತರಣೆ 

ಕಾರವಾರ, 04 ; ರೋಟರಿ ಸಂಸ್ಥೆಯವರು ನಗರದ ಸಿವಿಲ್ ಆಸ್ಪತ್ರೆಯ ಬಾಣಂತಿ ವಾರ್ಡಿಗೆ ಭೇಟಿ ನೀಡಿ ಅಲ್ಲಿರುವ 15 ನವಜಾತ ಶಿಷುಗಳಿಗೆ ‘ಜಾನ್ಸನ್‌ಬೇಬಿ ಕಿಟ್‌’ ವಿತರಿಸಿದರು. ಅದರಲ್ಲಿ ಪೌಡರ್, ಎಣ್ಣೆ, ಸಾಬೂನು ಇನ್ನಿತರ ಸಾಮಾನುಗಳು ಇದ್ದವು.  ಈ ಸಮಯದಲ್ಲಿ ರೋಟರಿ ಅಧ್ಯಕ್ಷ ಡಾಽಽ ಅರ್ಜುನ್ ಉಪಾಧ್ಯಾಯ ರವರು ಬರೆದಿರುವ “ಕಣ ಓಚಿಣಚಿಟ ಚಿಟಿಜ ಆಜಣ ಓಣಣಡಿಣಠ” ಪುಸ್ತಕವನ್ನು  ಕ್ರಿಮ್ಸ್‌ ನಿರ್ದೇಶಕರಾದ ಡಾಽಽ ಪೂರ್ಣಿಮಾ ಆರ್‌.ಜೆ. ರವರು ಬಿಡುಗಡೆಗೊಳಿಸಿ, ಪುಸ್ತಕದಲ್ಲಿರುವ ‘ತಾಯಿ ಮತ್ತು ಮಗುವಿನ ಆರೈಕೆಯ ಕುರಿತು ಮತ್ತು ಪ್ರಸವ ಪೂರ್ವದಲ್ಲಿ ಅಥವಾ ನಂತರದಲ್ಲಿ ಮಹಿಳೆಯರಿಗೆ ಅಗತ್ಯವಾದ ವ್ಯಾಯಾಮಗಳು, ಜೀವಸತ್ವಗಳು ಮತ್ತು ಪೋಷಕಾಂಶಗಳು’  ಇವುಗಳ ಕುರಿತು ತುಂಬಾ ಸುಂದರವಾಗಿ ವಿವರಿಸಿದರು.  

ಡಾಽಽ ಅರ್ಜುನ ಉಪಾಧ್ಯಾಯ ಮತ್ತು ಡಾಽಽ ಪೂಜಾ ನಾಯ್ಕ ಇವರು ತಾಯಿಯ ಮತ್ತು ಮಕ್ಕಳ ಅರೋಗ್ಯ ಸೇವೆಗಳು ಗರ್ಭಿಣಿಯರು, ತಾಯಂದಿರು ಮತ್ತು ಚಿಕ್ಕ ಮಕ್ಕಳಿಗೆ ಸಮಗ್ರ ಅರೋಗ್ಯ ರಕ್ಷಣೆಯ ಅರಿವು ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ  ರೋಟರಿ ಕಾರ್ಯದರ್ಶಿ ವಿನೋದ ಕೊಠಾರಕರ ಸದಸ್ಯರಾದ ಶೈಲೆಶ ಹಳದಿಪೂರ, ರಾಜೇಶ ವೆರ್ಣೇಕರ, ಗುರುದತ್ತ ಬಂಟ, ಮೋಹನ ನಾಯ್ಕ, ಅಮರನಾಥ ಶೆಟ್ಟಿ, ಸಾತಪ್ಪಾ ತಾಂಡೇಲ, ಗುರು ಹೆಗಡೆ, ಅನಮೋಲ ರೇವಣಕರ, ಯೊಗೇಶ ಭಂಡಾರಕರ, ಆನಂದ ನಾಯ್ಕ, ಅರ್ಚನಾ ಶೆಟ್ಟಿ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.