ಆರ್ಎಂಎಸ್ಎ ಶಾಲೆಗೆ 10 ಡೆಸ್ಕ್ಗಳ ವಿತರಣೆ
Distribution of 10 desks to RMSA school
ಪಾಲಬಾವಿ 21: ಸಮೀಪದ ಸುಲ್ತಾನಪುರ ಗ್ರಾಮದ ಆರ್ಎಂಎಸ್ಎ ಸರ್ಕಾರಿ ಪ್ರೌಢಶಾಲೆಗೆ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಡೆಸ್ಕ್ಗಳನ್ನು ಮಂಜೂರು ಮಾಡಲಾಗಿದೆ ಎಂದು ಗ್ರಾಮ ಮಾಜಿ ಸದಸ್ಯ ರಾಜು ಹುಕ್ಕೇರಿ ತಿಳಿಸಿದರು. ಸೆ.21ರಂದು ಶಾಲಾ ಆವರಣದಲ್ಲಿ ಮಂಜೂರಾದ ಡೆಸ್ಕ್ಗಳಿಗೆ ಹಿರಿಯರಾದ ದುಂಡಪ್ಪ ಖಾನಗೌಡ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಶೋಕ ಚೌಗಲಾ, ದುಂಡಪ್ಪ ಪಾಟೀಲ, ಅದ್ರಶಪ್ಪ ಪಾಟೀಲ, ಚಿದಾನಂದ ಚೌಗಲಾ, ಮಲ್ಲಪ್ಪ ಪಾಟೀಲ, ರೇವಪ್ಪ ಹೊನ್ನಳಿ, ಬಸವರಾಜ ಚೌಗಲಾ, ಮುಖ್ಯೋಪಾಧ್ಯಾಯ ಎಸ್.ಕೆ. ಮುಲ್ಲಾ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಬಿ. ಭೋಜಣ್ಣವರ, ಸಹ ಶಿಕ್ಷಕರಾದ ವಿ.ಡಿ. ರಾಯಬಾಗಕರ, ವೈ.ಎಂ. ವ್ಯಾಪಾರಿ, ಸಿ.ಪಿ. ಉಪ್ಪಾರ, ಅತಿಥಿ ಶಿಕ್ಷಕ ಕಲ್ಮೇಶ ತೇರದಾಳ, ಸಂಗೀತಾ ಮಾದರ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 