ಆರ್‌ಎಂಎಸ್‌ಎ ಶಾಲೆಗೆ 10 ಡೆಸ್ಕ್ಗಳ ವಿತರಣೆ

ಆರ್‌ಎಂಎಸ್‌ಎ ಶಾಲೆಗೆ 10 ಡೆಸ್ಕ್ಗಳ ವಿತರಣೆ  Distribution of 10 desks to RMSA school


ಪಾಲಬಾವಿ 21: ಸಮೀಪದ ಸುಲ್ತಾನಪುರ ಗ್ರಾಮದ ಆರ್‌ಎಂಎಸ್‌ಎ ಸರ್ಕಾರಿ ಪ್ರೌಢಶಾಲೆಗೆ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಡೆಸ್ಕ್ಗಳನ್ನು ಮಂಜೂರು ಮಾಡಲಾಗಿದೆ ಎಂದು ಗ್ರಾಮ ಮಾಜಿ ಸದಸ್ಯ ರಾಜು ಹುಕ್ಕೇರಿ ತಿಳಿಸಿದರು. ಸೆ.21ರಂದು ಶಾಲಾ ಆವರಣದಲ್ಲಿ ಮಂಜೂರಾದ ಡೆಸ್ಕ್ಗಳಿಗೆ ಹಿರಿಯರಾದ ದುಂಡಪ್ಪ ಖಾನಗೌಡ ಪೂಜೆ ನೆರವೇರಿಸಿದರು.  

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಶೋಕ ಚೌಗಲಾ, ದುಂಡಪ್ಪ ಪಾಟೀಲ, ಅದ್ರಶಪ್ಪ ಪಾಟೀಲ, ಚಿದಾನಂದ ಚೌಗಲಾ, ಮಲ್ಲಪ್ಪ ಪಾಟೀಲ, ರೇವಪ್ಪ ಹೊನ್ನಳಿ, ಬಸವರಾಜ ಚೌಗಲಾ, ಮುಖ್ಯೋಪಾಧ್ಯಾಯ ಎಸ್‌.ಕೆ. ಮುಲ್ಲಾ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಬಿ. ಭೋಜಣ್ಣವರ, ಸಹ ಶಿಕ್ಷಕರಾದ ವಿ.ಡಿ. ರಾಯಬಾಗಕರ, ವೈ.ಎಂ. ವ್ಯಾಪಾರಿ, ಸಿ.ಪಿ. ಉಪ್ಪಾರ, ಅತಿಥಿ ಶಿಕ್ಷಕ ಕಲ್ಮೇಶ ತೇರದಾಳ, ಸಂಗೀತಾ ಮಾದರ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.