ರೇಲ್ವೆ ಅನುದಾನಕ್ಕಾಗಿ ಮಾಜಿ ಸಂಸದರೊಂದಿಗೆ ಚರ್ಚೆ
Discussion with former MP for railway grant
ರೇಲ್ವೆ ಅನುದಾನಕ್ಕಾಗಿ ಮಾಜಿ ಸಂಸದರೊಂದಿಗೆ ಚರ್ಚೆ
ಗಂಗಾವತಿ 13: ದರೋಜಿ, ಗಂಗಾವತಿ ಮತ್ತು ಗಂಗಾವತಿ, ಬಾಗಲಕೋಟೆ ಬ್ರಾಡಗೇಜ್ ರೇಲ್ವೆ ಮಾರ್ಗ ರಚನೆಯ ಕುರಿತು ಮಾಜಿ ಸಂಸದ ಕರಡಿ ಸಂಗಣ್ಣ ಅವರೊಂದಿಗೆ ಸೋಮವಾರದಂದು ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಚರ್ಚಿಸಿದರು.
ಅಶೋಕಸ್ವಾಮಿ ಹೇರೂರ ಅವರ ಮನೆಗೆ ಮಾಜಿ ಸಂಸದ ಸಂಗಣ್ಣನವರು ಓಪಚಾರಿಕ ಭೇಟಿ ನೀಡಿದಾಗ ಈ ವಿಷಯವಾಗಿ ಮಾತನಾಡಿದರು. ಹೇಗಾದರೂ ಮಾಡಿ ಮುಂಬರುವ ಬಜೆಟ್ ನಲ್ಲಿ ಅನುದಾನ ಒದಗಿಸಲು ರೇಲ್ವೆ ಸಚಿವರನ್ನು ಭೇಟಿಯಾಗಲು ಈ ಸಂದರ್ಭದಲ್ಲಿ ತೀರ್ಮಾನಿಸಲಾಯಿತು. ಉದ್ದೇಶಿತ ಅನುದಾನಕ್ಕೆ ರಾಜ್ಯದ ಪಾಲನ್ನು ಪಡೆಯಲು ಸಚಿವ ಶಿವರಾಜ ತಂಗಡಗಿಯವರನ್ನು ಭೇಟಿಯಾಗಿ ಅನುದಾನ ಪಡೆಯುವ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ನಗರಸಭಾ ಸದಸ್ಯ ಮನೋಹರ ಸ್ವಾಮಿ, ಬಿ.ಜೆ.ಪಿ. ಧುರೀಣ ಬಸಣ್ಣ, ವಿಶ್ವನಾಥ, ವೀರಯ್ಯಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಗಣ್ಣ ಕರಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 