ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮುಖ್ಯ: ಡಾ. ಚಿನಗುಡಿ
Discipline and culture are important in children: Dr. Chinagudi
ಧಾರವಾಡ 07: ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮುಖ್ಯ. ಮಕ್ಕಳಲ್ಲಿ ಸಕಾರಾತ್ಮಕ ಯೋಚನೆ ಜಾಗೃತವಾಗಿರಬೇಕು. ಒಂದು ಸುಂದರ ಬದುಕಿಗೆ ಸದೃಢ ಸ್ವಸ್ಥ ಸಮಾಜಕ್ಕೆ ಇಂತಹ ಸಾಂಘಿಕ ಚಟುವಟಿಕೆಗಳ ಅಗತ್ಯವಿದೆ. ಸಮಾಜದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸದಾ ಪರಿಶ್ರಮಿಗಳಾಗಿರಬೇಕು ಯಾವ ಪೋಷಕರೂ ತಮ್ಮ ಮಕ್ಕಳ ಸೋಲನ್ನು ಸಹಿಸಿಕೊಳ್ಳುವುದಿಲ್ಲ. ಮಕ್ಕಳು ಯಾವಾಗಲೂ ಗೆಲುವು ಸಾಧಿಸಬೇಕು, ಯಶಸ್ಸು ಪಡೆಯಬೇಕೆಂದು ಆಶಿಸುತ್ತಾರೆ. ಆದರೆ ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆತುಬಿಡುತ್ತಾರೆ. ಸೋಲನ್ನು ಹೇಗೆ ಎದುರಿಸಬೇಕೆಂದು ಪೋಷಕರು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳು ಸೋಲಲೇ ಬಾರದೆಂದು ಬಯಸಬಾರದು. ಸವಾಲುಗಳನ್ನು ಎದುರಿಸಿ ಮುಂದೆ ಹೋಗಲು ಪೋಷಕರು ಧೈರ್ಯ ತುಂಬಬೇಕು ಎಂದು ಖ್ಯಾತ ಪ್ರವಚನಕಾರ ಡಾ. ಬಾಳಪ್ಪ ಚಿನಗುಡಿ ಅವರು ಹೇಳಿದರು.
ಅವರು ಬಯಲು ಬಸವೇಶ್ವರ ಕಲ್ಚರಲ್ ಡೆವಲಪ್ಮೆಂಟ್ ಅಸೋಸಿಯೇಷನ್ ರಂಗ ಸಾಮ್ರಾಟ ಸಂಸ್ಥೆ ಮತ್ತು ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ ಇವರ ಸಂಹಯೋಗದಲ್ಲಿ ಆಯೋಜಿಸಿದ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು . ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕಿ ಭಾರತಿ ಬಡಿಗೇರ ಮಾತನಾಡುತ್ತಾ ಮಕ್ಕಳು ತಮ್ಮಲ್ಲಿರತಕ್ಕಂಥಹ ಪ್ರತಿಭೆಯನ್ನು ಹೊರಹಾಕಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿವುದಲ್ಲದೇ, ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಕೊಡಬೇಕು ಎಂದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರಾದ ಭೀಮನಗೌಡ ಕಟಾವಿ ಅವರಿಗೆ ಸಂತೋಷ ಕರಿಮಳ್ಳನವರ , ಭಾರತಿ ಬಡಿಗೇರ ಅವರಿಗೆ ಸನ್ಮಾನಿಸಲಾಯಿತು.
ಛದ್ಮವೇಷ ಸ್ಪರ್ಧೆಯಲ್ಲಿ ಅವನೀಷ್ ನೀಲಗುಂದ ಪ್ರಥಮ ಸ್ಥಾನ, ರೋಹನ ನಾಗೇಂದ್ರಗಡ ದ್ವಿತೀಯ ಸ್ಥಾನ, ಭಾಗ್ಯವತಿ ತೃತೀಯ ಸ್ಥಾನ ಪಡೆದರು. ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಾಲ ಬಳಗ ಶಾಲೆಯ ಮಕ್ಕಳು ಪ್ರಥಮ, ಕೆ ಇ ಬೋರ್ಡ್ ಸೆಂಟ್ರಲ್ ಸ್ಕೂಲ್ ಮತ್ತು ಚಿಲಿಪಿಲಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಮಕ್ಕಳು ದ್ವಿತೀಯ, ಗುಬ್ಬಚ್ಚಿ ಗೂಡು ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಹೆಚ್, ಅಲ್ಲಾಭಕ್ಷ ಮಕಾನದಾರ, ನಂದಪಗೌಡ ದ್ಯಾಪುರ, ಬಿ. ಆರ್. ಜಕಾತಿ , ಸಿಕಂದರ ದಂಡಿನ, ಐರಾ ದಂಡಿನ, ಶ್ರುತಿ ಹುರುಳಿಕೊಪ್ಪ, ಗೀತಾ ತುಂಬರಗುದ್ದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 