14 ವರ್ಷ ಒಳಗಿನ ವೇಮನ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ಗೆ ಗಣ್ಯರಿಂದ ಚಾಲನೆ
Dignitaries launch Wayman Trophy Under-14 Cricket Tournament
ಮಹಾಲಿಂಗಪುರ 08: ಪಟ್ಟಣದ ಕೋಳಿಗುಡ್ಡ ಅವರ ಕ್ರಿಕೆಟ್ ಮೈದಾನದಲ್ಲಿ ರೆಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಅಂತರ ಶಿಬಿರ ಬಾಲಕರ 14 ವರ್ಷ ಒಳಗಿನ ವೇಮನ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ಗೆ ಶನಿವಾರ ಪಟ್ಟಣದ ಗಣ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣದ ಡಾ. ಅಶೋಕ ದಿನ್ನಿಮನಿ ಅವರು ಮಾತನಾಡಿ, ಸುಮಾರು ಮೂರು ದಶಕಗಳ ಹಿಂದೆ ಮಹಾಲಿಂಗಪುರ ಪಟ್ಟಣದಲ್ಲಿ ಲೆದರ್ ಬಾಲ್ ಕ್ರಿಕೆಟ್ ಆಟದ ಸೊಬಗು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತಿತ್ತು. ತದನಂತರ ಬಂದ ಟೆನಿಸ್ ಬಾಲ್ ಕಲಾತ್ಮಕ (ಶಾಸ್ತ್ರೀಯ) ಆಟವನ್ನೇ ನುಂಗಿ ಹಾಕಿತು ಎಂದರೆ ಆಶ್ಚರ್ಯವಲ್ಲ.
ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಲೆದರ್ ಬಾಲ್ ಆಟಕ್ಕಿರುವಷ್ಟು ಮಾನ್ಯತೆ ಟೆನಿಸ್ ಬಾಲ್ ಗಿಲ್ಲದೆ ಇರುವುದರಿಂದ ಸ್ಥಳೀಯ ಆಟಗಾರರು ಲೆದರ್ ಬಾಲ್ ಆಟದ ಕಡೆಗೆ ಹೆಚ್ಚಿನ ಗಮನ ಹರಿಸಿ ಮಹಾಲಿಂಗಪುರದಲ್ಲಿಯೇ ರೆಡ್ಡಿಸ್ ಕ್ರಿಕೆಟ್ ಅಕಾಡೆಮಿ ಲೆದರ್ ಬಾಲ್ ತರಬೇತಿ ನೀಡುತ್ತಿದ್ದು ಸ್ಥಳೀಯ ಪ್ರತಿಭೆಗಳು ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಬಂದು ಪಕಾಲಿ, ಸಾಗರ ಮಠದ ಅವರು ಮಾತನಾಡಿ, ಆಯೋಜಿಸಿರುವ ಇಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವರೆಗೆ ಹಚ್ಚಿದರೆ, ಮುಂದೆ ತಾವು ಮಾಡುವ ಸಾಧನೆಗೆ ಮೈಲಿಗಲ್ಲಾಗುತ್ತದೆ ಎಂದರು. ಈ ಪಂದ್ಯಾವಳಿಗೆ 08 ಅಕಾಡೆಮಿ ತಂಡಗಳಾದ ರೆಡ್ಡಿ ಕ್ರಿಕೆಟ್ ಮಹಾಲಿಂಗಪುರ, ರಾಯಲ್ ಹಾರೂಗೇರಿ, ಕೆ.ಜೆ.ಸೋಮಯ್ಯ ಸಮೀರವಾಡಿ, ಸಿಬಿಎಸ್ಸಿ ಅಂಕಲಿ,ದ ವಾಲ್ ಕ್ರಿಕೆಟ್ ರಾಯಭಾಗ, ರಾಯಲ್ ಕ್ರಿಕೆಟ್ ಕುಡಚಿ, ಎಸ್.ಕೆ. ಕ್ರಿಕೆಟ್ ಬೆಳಗಾವಿ ಮತ್ತು ಡಾ.ಸಿಧ್ಧಾಂತ ದಾನಿಗೊಂಡ ತೇರದಾಳ ತಂಡಗಳನ್ನು ಆಹ್ವಾನಿಸಲಾಗಿದ್ದು,
ವಿಜೇತ ತಂಡಗಳಿಗೆ ನಗದು ಬಹುಮಾನ ಜೊತೆಗೆ ವೇಮನ್ ಟ್ರೋಫಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ವೈಯಕ್ತಿಕ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನೂ ಸಹಿತ ಈ ಸಂದರ್ಭದಲ್ಲಿ ಗೌರವಿಸಲಾಗುವುದು. ನಿಗದಿತ 20 ಓವರ್ ಗಳದ್ದಾಗಿದ್ದು, ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತರಬೇತುದಾರ ಮಹೇಶ್ ರೆಡ್ಡಿ, ಮಹಾದೇವ ಕಡಬಲ್ಲವರ್, ಮನೋಹರ ಶಿರೋಳ, ಆನಂದ ಪಟ್ಟಣಶೆಟ್ಟಿ, ವಾಯ್.ವಾಯ್.ಗಚ್ಚನ್ನವರ, ಮೀರಾ ತಟಗಾರ, ರಾಜು ಜವಳಗಿ, ರವಿ ಖೋತ, ಮಂಜುನಾಥ ರೇಣಕೆ, ರವಿ ಕಟಗಿ, ರಾಜೇಂದ್ರ ಕಟಗಿ, ಸಂತೋಷ ಜಮಖಂಡಿ, ಆನಂದ ಮಕ್ಕಳಗೇರಿಮಠ, ವಿಶಾಲ ಹೂಗಾರ ಇದ್ದರು. ತಂಡಗಳ ತರಬೇತುದಾರರಾದ ಪ್ರವೀಣ ಜಾಧವ, ರಾಘವೇಂದ್ರ ಜಾಧವ, ಗಾಯಕ ಚನ್ನಪ್ಪ ಹುನ್ನೂರ ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. ಯುವ ಆಟಗಾರ ಪ್ರೀತಮ ಗಟ್ಟೆಪ್ಪನ್ನವರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 