ಡಿಜಿ ಫೋಟೋ ಎಕ್ಸ್ಪೋ ಯಶಸ್ವಿಯಾಗಿ ಮುಕ್ತಾಯ

ಡಿಜಿ ಫೋಟೋ ಎಕ್ಸ್ಪೋ ಯಶಸ್ವಿಯಾಗಿ ಮುಕ್ತಾಯ Digi Photo Expo concludes successfully

ಹುಬ್ಬಳ್ಳಿ 02: ಎರಡು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಡಿಜಿ ಫೋಟೋ ಎಕ್ಸೊ-್ಪಹಿ2026 ಪ್ರದರ್ಶನ ನಿನ್ನೆ ಸಂಜೆ 6 ಗಂಟೆಗೆ ಯಶಸ್ವಿಯಾಗಿ ತೆರೆ ಬಿದ್ದಿತು. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಛಾಯಾಗ್ರಾಹಕರು ಮತ್ತು ವೀಡಿಯೋಗ್ರಾಫರ್ಗಳು ಈ ಪ್ರದರ್ಶನದ ಸದುಪಯೋಗ ಪಡೆದುಕೊಂಡರು.ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಕ್ಷೇತ್ರದಲ್ಲಿ ದಿನೇ ದಿನೇ ಆಗುತ್ತಿರುವ ತಾಂತ್ರಿಕ ಬದಲಾವಣೆಗಳು, ನೂತನ ಕ್ಯಾಮೆರಾಗಳು, ಲೆನ್ಸ್ಗಳು, ಡ್ರೋನ್ಗಳು, ಲೈಟಿಂಗ್ ಸಾಧನಗಳು, ಅಲ್ಬಮ್ ಡಿಸೈನಿಂಗ್ ಹಾಗೂ ಆಧುನಿಕ ತಂತ್ರಜ್ಞಾನಗಳ ಕುರಿತು ಈ ಎಕ್ಸ್ಪೋದಲ್ಲಿ ಸಮಗ್ರ ಮಾಹಿತಿಯನ್ನು ಒದಗಿಸಲಾಗಿತ್ತು.

ಇದರಿಂದ ವೃತ್ತಿಪರ ಛಾಯಾಗ್ರಾಹಕರಿಗೆ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಉತ್ತಮ ಅವಕಾಶ ದೊರಕಿತು. ಎಕ್ಸ್ಪೋ ನಡೆಯುವ ಪ್ರತಿದಿನ ಸುಮಾರು ನಾಲ್ಕು ಸಾವಿರದಿಂದ ಐದು ಸಾವಿರ ಛಾಯಾಗ್ರಾಹಕರು ಭಾಗವಹಿಸಿದ್ದು, ಒಟ್ಟಾರೆ ಎರಡು ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡಿದರು. ಪ್ರದರ್ಶನದಲ್ಲಿ ವಿವಿಧ ಕಂಪನಿಗಳ ಸ್ಟಾಲ್ಗಳು, ತಾಂತ್ರಿಕ ಮಾಹಿತಿ, ನೇರ ಪ್ರದರ್ಶನಗಳು ಹಾಗೂ ಮಾರಾಟ-ಖರೀದಿ ಚಟುವಟಿಕೆಗಳು ಹೆಚ್ಚಿನ ಗಮನ ಸೆಳೆದವು. ಡಿಜಿ ಫೋಟೋ ಎಕ್ಸ್ಪೋಗೆ ಉತ್ತರ ಕರ್ನಾಟಕದ ಛಾಯಾಗ್ರಾಹಕರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಸಂತೋಷ ತಂದಿದೆ ಎಂದು ಅಧ್ಯಕ್ಷ ಕಿರಣ್ ಬಾಕಳೆ ತಿಳಿಸಿದ್ದಾರೆ. ಇಂತಹ ಪ್ರದರ್ಶನಗಳು ಛಾಯಾಗ್ರಫಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.