ಐದು ವರ್ಷದ ಮಗುವಿನ ’ಥಲಸ್ಸೆಮಿಯಾ’ ಕಾಯಿಲೆಗೆ ಸ್ಪಂದಿಸಿದ ಧ್ರುವ ಆಸರೆ ಫೌಂಡೇಶನ್ ಅಧ್ಯಕ್ಷ ಎಂ.ಜಿ ಕನಕ
Dhruv Aasere Foundation President M.G. Kanaka responds to a five-year-old child's 'thalassemia' dis
ಬಳ್ಳಾರಿ 02: ನಗರದಲ್ಲಿ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಐದು ವರ್ಷದ ಪುಷ್ಪಾ ಎಂಬ ಮಗುವಿನ ಶಸ್ತ್ರಚಿಕಿತ್ಸೆಗೆ ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಎಂ.ಜಿ ಕನಕ ಅವರು ಗುಡಾರನಗರದ ಪುಷ್ಪಾ ಅವರ ನಿವಾಸಕ್ಕೆ ಭೇಟಿ ನೀಡಿ ಹತ್ತು ಸಾವಿರ ಗಳನ್ನು ಕೊಡುವದರ ಮೂಲಕ ಮಾನವೀಯತೆ ಮೆರೆದಿದ್ದಾರೆ.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪುಟ್ಟ ಮಗುವಿನ ಆರೋಗ್ಯ ಸ್ಥಿತಿ ನೋಡಿ ನನಗೆ ಅಯ್ಯೋ ಅನಿಸಿತು. ಈ ಚಿಕ್ಕ ವಯಸ್ಸಿನಲ್ಲಿ ಥಲಸ್ಸೆಮಿಯಾ ಕಾಯಿಲೆ ಎಂದರೆ ಹೇಗೆ ಎಂದು ಆಶ್ಚರ್ಯ ಕೂಡ ಆಯಿತು.
ಮಗುವಿನ ಶಸ್ತ್ರಚಿಕಿತ್ಸೆಗೆ 30ಲಕ್ಷ ಹಣ ಬೇಕಿದೆ ಎಂಬುವುದನ್ನು ಕೇಳಿ ಎಂ.ಜಿ ಕನಕ ಅವರು ಪುಷ್ಪಾ ತಂದೆ ಕುಮಾರ ಬಾದಗಿ ತಾಯಿ ಅಂಬಿಕಾ ಅವರಿಗೆ 10,000/- ಗಳನ್ನ ಮಗುವಿನ ಚಿಕಿತ್ಸೆಗಾಗಿ ನೀಡಿ, ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ ಹಾಗೂ ನನ್ನ ಸ್ನೇಹಿತರಿಗೆ, ಎಲ್ಲಾ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಹೇಳಿ ಅವರ ಕಡೆಯಿಂದ ಸಹಾಯ ಮಾಡಿಸುತ್ತೇನೆ.ನಮ್ಮ ಧ್ರುವ ಆಸರೆ ಫೌಂಡೇಶನ್ ದೀನ ದಲಿತರು, ನಿರ್ಗತಿಕರು, ಬಡವರ ಹಾಗೂ ಕಷ್ಟದಲ್ಲಿರುವವರ ಜೊತೆಗೆ ಬೆನ್ನೆಲುಬಾಗಿ ನಿಲ್ಲುತ್ತೆ ಎಂದು ಸಂಸ್ಥಾಪಕ ಎಂ.ಜಿ ಕನಕ ಹೇಳಿದರು.ಈ ಸಂದರ್ಭದಲ್ಲಿ ಬಂಡಿಹಟ್ಟಿ ಮಂಜು, ಮಾಸುಮ್ ಗುಡಾರನಗರ ಅಯ್ಯಪ್ಪ, ಹನುಮಂತ ಸೇರಿದಂತೆ ಧ್ರುವ ಸರ್ಜಾ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 