ಢವಳೇಶ್ವರ ಹಾದಿಬಸವೇಶ್ವರ ಜಾತ್ರೆ: ವಿವಿಧ ಕಾರ್ಯಕ್ರಮ, ಟ್ರ್ಯಾಕ್ಟರ ಜಗ್ಗಿಸುವ ಸ್ಪರ್ಧೆ
Dhavaleshwar Hadibasaveshwara Fair: Various programs, tractor pulling competition
ಢವಳೇಶ್ವರ ಹಾದಿಬಸವೇಶ್ವರ ಜಾತ್ರೆ: ವಿವಿಧ ಕಾರ್ಯಕ್ರಮ, ಟ್ರ್ಯಾಕ್ಟರ ಜಗ್ಗಿಸುವ ಸ್ಪರ್ಧೆ
ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ನಿಮಿತ್ಯವಾಗಿ ಹಾದಿಬಸವೇಶ್ವರ ಜಾತ್ರಾಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದ ವಿವರಗಳು: ಅಗಷ್ಟ 10 ರಂದು ರವಿವಾರ ರಾತ್ರಿ 9:30 ಗಂಟೆಗೆ ಢವಳೇಶ್ವರದ ರಾಮಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಪದಗಳು. ಅಗಷ್ಟ 11 ರಂದು ಮುಂಜಾನೆ 8 ಗಂಟೆಗೆ ಹಾದಿ ಬಸವೇಶ್ವರರಿಗೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ. ಮಧ್ಯಾಹ್ನ 12 ಗಂಟೆಗೆ ಅನ್ನ ಪ್ರಸಾದ ನಡೆಯುವುದು. ಇದೆ ದಿವಸ ಸೋಮವಾರದಂದು ಮಧ್ಯಾಹ್ನ 02 ಗಂಟೆಗೆ ಟ್ರ್ಯಾಕ್ಟರ ಜಗ್ಗಿಸುವ ಸ್ಪರ್ಧೆ ಇರುತ್ತದೆ.
ಪ್ರಥಮ ಬಹುಮಾನ : ಎ.ಪಿ.ಎಂ.ಸಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲರಿಂದ 20 ಸಾವಿರ ನಗದು, ದ್ವಿತೀಯ ಬಹುಮಾನ: ಢವಳೇಶ್ವರ ಗ್ರಾಮದ ಚನ್ನಪ್ಪ ಶಿವಾಪೂರ ಇವರಿಂದ 15 ಸಾವಿರ ನಗದು, ಗುತ್ತಿಗೆದಾರರು ಮಹಾದೇವ ಪಟ್ಟಣಶೆಟ್ಟಿ ತೃತೀಯ ಬಹುಮಾನ 10 ಸಾವಿರ ನಗದು, ವಕೀಲರು ಬಾಬು ದಡ್ಡೆನ್ನವರ ಇವರಿಂದ ಚತುರ್ಥ ಬಹುಮಾನ : 5 ಸಾವಿರ ಹೀಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ.
ಟ್ರ್ಯಾಕ್ಟರ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸೂಚನೆ; ವಿ.ಸೂ : ಸ್ಥಳ : ಹಾದಿ ಬಸವೇಶ್ವರ ದೇವಸ್ಥಾನ, ಮುಧೋಳ ರೋಡ, ಢವಳೇಶ್ವರ. 1) ಢವಳೇಶ್ವರ ಗ್ರಾಮದ ಟ್ರ್ಯಾಕ್ಟರಗಳಿಗೆ ಅವಕಾಶ,10 ವಾಹನಗಳು ಕೂಡಿದರೆ ಮಾತ್ರ ಸ್ಪರ್ಧೆ ನಡೆಸಲಾಗುವುದು, 2) ತಮ್ಮ ವಾಹನಗಳಿಗೆ ತಾವೇ ಜವಾಬ್ದಾರರು. 3 ) ಖ.ಅ.ಬುಕ್ ಕಡ್ಡಾಯ. 4) ಕಮೀಟಿ ನಿರ್ಣಯವೇ ಕೊನೆಯ ನಿರ್ಣಯ. 6) 55 ಊ.ಕ ಟ್ರ್ಯಾಕ್ಟರಗಳಿಗೆ ಮಾತ್ರ ಅವಕಾಶ. 7) 4.5 ಟನ್ ವೇಟಿನ ಟ್ರ್ಯಾಕ್ಟರಗಳಿಗೆ ಮಾತ್ರ ಅವಕಾಶ, (ತೂಕ ಮಾಡಿಸಿ ಆಡಿಸಲಾಗುವುದು.) 6) ನಂಬರಾದ ವಾಹನಗಳನ್ನು ಮರಳಿ ತೂಕ ಮಾಡಿಸಿ ಬಹುಮಾನ ಕೊಡಲಾಗುವುದು. 7) 24 ಇಂಚಿನ ಹುಕ್ಕಾ ಇರಬೇಕು. 8) ಇನ್ನೂಳಿದ ಸೂಚನೆಗಳನ್ನು ಸ್ಥಳದಲ್ಲಿಯೇ ಹೇಳಲಾಗುವುದು. 9) ದಾಂಧಲೆ ವಗೈರೆ ದಯವಿಟ್ಟು ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ; ಹಣಮಂತ ಪಾಟೀಲ -9008062779, ನಾಗಪ್ಪ ಕಾಮಗೌಡ- 8088891462, ಪರಸಪ್ಪ ಮೊರಬದ -9019042698, ಮಹೇಶ ಪಾಟೀಲ-6362216665,ವಿಠ್ಠಲ ಮುತ್ತಪ್ಪಗೋಳ-9743621115 3.566, ಶಿವಪ್ಪ ಮೊರಬದ-9901462647, ,ಸದಾಶಿವ ಹೊಸೂರ- 9449713588 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 