ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ.ಕರೀಮುನ್ನೀಸಾ ಸೈಯದ್ ಭೇಟಿ

 ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ.ಕರೀಮುನ್ನೀಸಾ ಸೈಯದ್ ಭೇಟಿ Dharwad Regional Office Joint Director Prof. Karimunneesa Syed visited

 ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ.ಕರೀಮುನ್ನೀಸಾ ಸೈಯದ್ ಭೇಟಿ 

ಮುಧೋಳ 17 : ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರೊ.ಕರೀಮುನ್ನೀಸಾ ಸೈಯದ್ ಅವರು ಗುರುವಾರ ಸಂಜೆ ಬಾಗಲಕೋಟ ಬಿವ್ಹಿವ್ಹಿ ಸಂಘದ ಮುಧೋಳದ  ಎಸ್‌.ಆರ್‌.ಕಂಠಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜುಗಳ ದಾಖಲೆ ಗಳನ್ನು ಪರೀಶೀಲಿಸಿದ ಬಳಿಕ ವಿವಿಧ ವಿಷಯಗಳ ವಿಭಾಗಗಳಿಗೆ ತೆರಳಿ ಪ್ರಾಧ್ಯಾಪಕರ ಕಾರ್ಯ ವೈಖರಿಯನ್ನು ನೋಡಿ ಮಹಾವಿದ್ಯಾಲಯಕ್ಕೆ ನ್ಯಾಕ್ ಮೌಲ್ಯಮಾಪನದಲ್ಲಿ ಎ ಗ್ರೇಡ್ ಬರುವಲ್ಲಿ ಪ್ರಾಧ್ಯಾಪಕರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿ ಇದೇ ರೀತಿ ತಾವು ವಿದ್ಯಾರ್ಥಿಗಳಿಗೆ ಇನ್ನಷ್ಟೂ ಗುಣಮಟ್ಟದ ಶಿಕ್ಷಣ ನೀಡಿದ್ದಲ್ಲಿ ನಿಮ್ಮ ಮಹಾವಿದ್ಯಾಲಯವು ಅತ್ಯುತ್ತಮ ಮಹಾ ವಿದ್ಯಾಲಯಗಳಲ್ಲಿ ಇದು ಒಂದಾಗಲಿದೆ ಎಂದು ಹೇಳಿದ ಅವರು ಈ ಕಾಲೇಜಿನಲ್ಲಿ ಕಲಿಯುವಂತ ವಿದ್ಯಾರ್ಥಿಗಳು ಪುಣ್ಯವಂತರು, ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲ ರೀತಿಯ ಸೌಕರ್ಯ ಮತ್ತು ಸೌಲಭ್ಯಗಳಿವೆ, ಒಳ್ಳೆಯ ವಾತಾವರಣ ಹೊಂದಿರುವ ಈ ಕಾಲೇಜು ಇತರೆ ಕಾಲೇಜುಗಳಿಗೆ ಮಾದರಿ ಕಾಲೇಜು ಆಗಿದೆ ಎಂದರು. 

ಕಾಲೇಜಿನ ಸುಸಜ್ಜಿತ ಡಿಜಿಟಲ್ ಲೈಬ್ರರಿ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಹಾಗೂ ಸುಂದರವಾದ ಗಾರ್ಡನ್ ನೋಡಿ ಅವರು ಅತೀ ಸಂತಸ ವ್ಯಕ್ತಪಡಿಸಿದರು, ವಿಶ್ವವಿದ್ಯಾಲಯಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಈ ಕಾಲೇಜಿನಲ್ಲಿವೆ, ಈ ಕಾಲೇಜಿನ ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಆರಂಭಿಸಿರುವ ಕಂಪ್ಯೂಟರ್ ಲ್ಯಾಬ್ ಹಾಗೂ ಸುಸಜ್ಜಿತ ಸ್ಟುಡಿಯೋ ಮಾಡಿರುವದನ್ನು ನೋಡಿ ಹರ್ಷವ್ಯಕ್ತಪಡಿಸಿ, ನಿಮ್ಮ ವಿಭಾಗದ ವಿದ್ಯಾರ್ಥಿಗಳು ಮುಂಬರುವ ದಿನಮಾನದಲ್ಲಿ ಶ್ರೇಷ್ಠ, ಗುಣಮಟ್ಟದ ಪತ್ರಕರ್ತರಾಗಿ ಹೊರಹೊಮ್ಮಿಲಿ, ಸಮಾಜದ ಸ್ವಾಸ್ಥ-್ಯವನ್ನು ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿಲಿ ಎಂದು ಶುಭ ಹಾರೈಸಿ, ಈ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕೋಧ್ಯಮ ವಿಷಯವನ್ನು ಆಯ್ಕೆಮಾಡಿಕೊಂಡು ಅಧ್ಯಯನ ಮಾಡಿ ಒಳ್ಳೆಯ ಅಂಕಗಳನ್ನು ಪಡೆದು ಕೊಳ್ಳುವದಲ್ಲದೆ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡು ಮುಂದೊಂದು ದಿನ ನಾಡಿನ ಶ್ರೇಷ್ಠ ಪತ್ರಕರ್ತರಾಗಿ ಹೊರಹೊಮ್ಮಿ ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕೆಂದರು.  

ಪ್ರಾಚಾರ್ಯ ಡಾ.ಎಂ.ಆರ್‌.ಜರಕುಂಟಿ, ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್‌.ಕಡೂರ, ಬೋಧಕ ಸಿಬ್ಬಂದಿ ಕಾರ್ಯದರ್ಶಿ ಡಾ.ಸುಭಾಷ್ ಸಬರದ, ವಿದ್ಯಾರ್ಥಿನಿಯ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ ಪ್ರೊ.ಜ್ಯೋತಿ ಕಲಾಲ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೋ.ಎಸ್‌.ಎಸ್‌.ಬಿರಾದಾರ, ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೋ.ವಿಶ್ವನಾಥ ಮುನವಳ್ಳಿ, ಜೆಡಿ ಕಛೇರಿಯ ಸಿಬ್ಬಂದಿ ರೇವಣಸಿದ್ದಯ್ಯ ಸಿರನಾಳ, ರುದ್ರಗೌಡ ಪಾಟೀಲ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯವರು ಇದ್ದರು.