ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ
Dharmasthala Kshetra Village Development Project at Mrityunjaya High School of Kurubagonda village
ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ
ಹಾವೇರಿ 17 : ಓದು, ಸಂಗೀತ ಆಲಿಸುವುದು, ನಾಟಕದಂತಹ ಸಂಸ್ಕೃತಿಕ ಹವ್ಯಾಸಗಳಿಲ್ಲದ ಮಕ್ಕಳು ಮೊಬೈಲ್ ಫೋನ್ ವ್ಯಸನಿಗಳಾಗುತ್ತಿರುತ್ತಾರೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ತಾಲೂಕಿನ ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಏರಿ್ಡಸಿದ್ದ ಸ್ವಾಸ್ಥ-್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳಲ್ಲಿ ಸೃಜನಶೀಲ ಹವ್ಯಾಸಗಳನ್ನು ಬೆಳೆಸುವ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸುವುದು ಪ್ರತಿಯೊಬ್ಬರ ಸಾಂಸ್ಕೃತಿಕ ಜವಾಬ್ದಾರಿಯಾಗಬೇಕು, ಬದಲಾದ ಆಹಾರ ಪದ್ಧತಿ ಇಂದ, ಮೊಬೈಲ್‌ಗೀಳಿನಿಂದ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡ ಒತ್ತಡ ಮತ್ತು ಖಿನ್ನತೆಗೆ, ದುಶ್ಚಟಗಳಿಗೆ ದಾಸರಾಗಿದ್ದಾರೆ. ಇಂದಿನ ದುರ್ವೆಸನಗಳೇ ಮುಂದಿನ ರೋಗಗಳು, ಮೊಬೈಲ್ ಬಳಸುತ್ತಿರುವ ಮೂವರಲ್ಲಿ ಇಬ್ಬರು ಅದಕ್ಕೆ ದಾಸರಾಗುತ್ತಿದ್ದಾರೆಂದು ಅಧ್ಯಯನಗಳು ತಿಳಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6000 ಮಕ್ಕಳ ದೃಷ್ಟಿ ದೋಷ ಪತ್ತೆಯಾಗಿದೆ, ರಾಜ್ಯದಲ್ಲಿ 99 ರಷ್ಟು ಮೊಬೈಲ್‌ಗೀಳಿಗೆ ಒಳಗಾಗಿದ್ದಾರೆ. ನಮ್ಮ ಮಕ್ಕಳು ಮುಗ್ಧರು ಎಂಬ ಭ್ರಮೆಯಿಂದ ಪಾಲಕರು ಹೊರಬರಬೇಕು ಎಂದ ಹನುಮಂತಗೌಡ ಉದಾರಣೆ, ಸಂವಾದದ ಮೂಲಕ ತಿಳಿಸಿದರು.
ಮುಖ್ಯೋಪಾಧ್ಯಾಯ ಬಸವರಾಜ ಕೋರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ನಮ್ಮ ಶಾಲೆಗೆ ಡೆಸ್ಕ್, ಗೌರವ ಶಿಕ್ಷಕರನ್ನು ಒದಗಿಸಿದೆ. ಹಳಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಇಂದು ಅಗತ್ಯವಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣದಿಂದ ಇಂದು ಅವರು ಸ್ವಾವಲಂಬಿಗಳಾಗಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು ಎಂದರು.
ಹೊಂಬರಡಿ ವಲಯ ಮೇಲವಿಚಾರಕಿ ದೀಪಾರಾಣಿ ಮಾತನಾಡಿ, ಸ್ವಸಹಾಯ ಸಂಘ, ಬ್ಯಾಂಕುಗಳ ಮೂಲಕ ಸಾಲ, ಪ್ರಗತಿ ನಿದಿ, ಪ್ರಗತಿ ಬಂಧು, ಜ್ಞಾನವಿಕಾಸ, ಕುಟುಂಬ ಸುರಕ್ಷಾ, ಸ್ವಗೃಹ, ಮಾಶಾಸನ, ಕೆರೆಗಳ ಪುನಶ್ಚೇತನ, ವೃತ್ತಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮುಂತಾದ ಯೋಜನೆಗಳ ಮಾಹಿತಿ ನೀಡಿದರು. ವಿ.ಎಂ. ಮಲ್ಲಪ್ಪನವರ, ಎಂ.ಎಚ್. ಬಿಲ್ಲಣ್ಣವರ, ಎಚ್.ಎಫ್. ಹಲವಾಗಲ, ಬಿ.ಎಮ್. ತಾಂದಳೆ, ವೈ.ಎಸ್. ಪಾಟೀಲ್, ಸೇವಾ ಪ್ರತಿನಿಧಿ ಕಲ್ಪನಾ, ಶೋಭಾ ಹಡಗಲಿ ವೇದಿಕೆಯಲ್ಲಿದ್ದರು.ಶೋಭಾ ರಾಣಿ ಸ್ವಾಗತಿಸಿದರು. ಶೋಭಾ ಅಕ್ಕಿ ನಿರೂಪಿಸಿದರು. ಸಂಗೀತ ಪಾಟೀಲ್ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 