ಯಡೂರನಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ

ಯಡೂರನಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ Dharma Jagruti Program in Yadur

ಯಡೂರನಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ 

ಮಾಂಜರಿ 16: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಹಲವಾರು ಕುಟುಂಬಗಳ ಆರಾಧ್ಯ ಹಾಗೂ ಇತಿಹಾಸ ಪ್ರಸಿದ್ಧ ತೀರ್ಥಕ್ಷೇತ್ರವಾದ ಚಿಕ್ಕೋಡಿ ತಾಲೂಕಿನ  ಯಡೂರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ರಾಜಗೋಪುರಗಳ ಲೋಕಾರೆ​‍್ಣ, ಮಹಾಕುಂಭಾಭಿಷೇಕಲಕ್ಷ ದೀಪೋತ್ಸವ, ಕೃಷ್ಣಾರತಿ ಮತ್ತು ಶ್ರೀಶೈಲ ಜಗದ್ಗುರುಗಳ ಧರ್ಮ ಜಾಗೃತಿ ಯಾತ್ರೆ 14 ಜಾನೇವರಿ 26 ರಿಂದ 6 ಮಾರ್ಚ್‌ 26 ವರೆಗೆ ನಡೆದಿರುವ ವಿವಿಧ ಧಾರ್ಮಿಕ ಮತ್ತು ಸಂಸ್ಕೃತಿ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮದ ಮಾಹಿತಿ ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಇವರು ಇಂದು ಯಡೂರು ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನೀಡಿದರು. 


ಈ ಪೂರ್ವಭಾವಿ ಸಭೆಗೆ ಮಾಜಿ ಸಚಿವ ಶಶಿಕಲಾ ಜೊಲ್ಲೆ ಮಾಜಿ ಸಂಸದ ಅಣ್ಣಸಾಹೇಬ್ ಜೊಲ್ಲೆ  ರಾಯಬಾಗ್ ಶಾಸಕ ದುರ್ಯೋಧನ ಐಹೊಳೆ ಚಿಕ್ಕೋಡಿಯ ಮುಖಂಡರಾದ ಜಗದೀಶ್ ಕವಟಿಗಿಮಠ ಮಾಜಿ ಜಿ ಪ ಸದಸ್ಯ ಮಹೇಶ್ ಬಾತೆ ಸುಭಾಷ್ ಕವಲಾಪುರೆ ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿಗಳು ಮೂಲಿನ ಗುರುಸಿದ್ಧ ಸ್ವಾಮೀಜಿಗಳು, ಜೋಡಕುರಳಿಯ ಚಿನ್ಮಯಾನಂದ ಸ್ವಾಮೀಜಿಗಳು ಗುಣದಾಳದ ವಿವೇಕಾನಂದ ದೇವರು ಇಲಕಲಿನ ಅನ್ನದಾನೇಶ್ವರ ಶಾಸ್ತ್ರಿಗಳು ಯದುರಿನ ಶ್ರೀಶೈಲ ಶಾಸ್ತ್ರಿಗಳು ಡಿಗ್ಗೇವಾಡಿಯ ಕಾಡಯ್ಯ ಶಾಸ್ತ್ರಿಗಳು ಅಥಣಿಯ ಶೆಟ್ಟರ್ ಮಠದ ಶ್ರೀಗಳು ತೆಲಸಂಗ ವೀರೇಶ್ ದೇವರು ಹಾಜರಿದ್ದರು. 


ಮೂರು ತಿಂಗಳವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ನೀಡುವಾಗ ಶ್ರೀಶೈಲ್ ಜಗದ್ಗುರುಗಳು ಮಾತನಾಡುವಾಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶ್ರೀಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ಸ್ವಾಮಿ, ಭದ್ರಕಾಳಿ ಅಮ್ಮನವರು ಮತ್ತು ಶ್ರೀ ಕಾಡಸಿದ್ದೇಶ್ವರರು ನೆಲೆಸಿದ ಪವಿತ್ರ ತಾಣ. ಶಿವನ ವಿರೋಧಕ್ಕಾಗಿ ದಕ್ಷಬ್ರಹ್ಮನು ಮಾಡಿದ ಯಜ್ಞವು ಇದೇ ಸ್ಥಳದಲ್ಲಿ ಜರುಗಿದ್ದು, ಶಿವನ ಕೆಂಜೆಡೆಯಿಂದ ಜನಿಸಿದ, ಶ್ರೀ ವೀರಭದ್ರನು ದಕ್ಷನನ್ನು ಸಂಹರಿಸಿ ಶಿವನ ಆದೇಶದ ಮೇರೆಗೆ ಆ ಯಜ್ಞಕುಂಡದಲ್ಲಿಯೇ ಲಿಂಗರೂಪದಿಂದ ನಿತ್ಯ ನಿವಾಸನಾಗಿದ್ದಾನೆ ಎಂಬುದು ಇಲ್ಲಿನ ಪೌರಾಣಿಕ ಪ್ರತೀತಿ. ಅಂತೆಯೇ ಈ ದೇವಾಲಯದ ಗರ್ಭಾಲಯವು ಭಾ ಈಗಲೂ ಯಜ್ಞಕುಂಡದ ಆಕೃತಿಯಲ್ಲಿ ಕಂಗೊಳಿಸುತ್ತದೆ. ಭೂಗರ್ಭದಲ್ಲಿ ಮುಚ್ಚಿಹೋದ ಈ ಲಿಂಗವನ್ನು ಕಾಲಾಂತರದಲ್ಲಿ  ಕಾಡಸಿದ್ದೇಶ್ವರರು ತಮ್ಮ ತಪಃಶಕ್ತಿಯ ದಿವ್ಯದೃಷ್ಟಿಯಿಂದ ಪತ್ತೆ ಹಚ್ಚಿ ದೇವಾಲಯವನ್ನು ನಿರ್ಮಿಸಿ ಲೋಕವಿಖ್ಯಾತಗೊಳಿಸಿದರು. ನಂತರವೂ ಕೂಡ ಅವರ ಶಿಷ್ಯ ಪ್ರಶಿಷ್ಟ ರೂಪದಿಂದ ಇಲ್ಲಿಯವರೆಗೆ ದೇವಸ್ಥಾನವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅಂತೆಯೇ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀಗಳವರೇ ಪ್ರಾಚೀನ ಕಾಲದಿಂದ ಇಂದಿನವರೆಗೆ ಈ ದೇವಸ್ಥಾನದ ಧರ್ಮಾಧಿಕಾರಿಗಳಾಗಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುತ್ತ ಬಂದಿದ್ದಾರೆ. 


ಈ ಹಿಂದಿನ ಲಿಂ.ಶ್ರೀ ಸಿದ್ದಲಿಂಗ ಪಟ್ಟ ಚರಮೂರ್ತಿ ಶಿವಾಚಾರ್ಯರು ಶ್ರೀಮಠ ಮತ್ತು ದೇವಸ್ಥಾನಗಳ ಸಂಬಂಧವನ್ನು ಕಾನೂನಾತ್ಮಕವಾಗಿ ಗಟ್ಟಿಗೊಳಿಸಲು ತಮ್ಮ ಜೀವನವನ್ನೇ ಸವೆಸಿದ್ದಾರೆ. ಇವರ ನಂತರ ಈ ಮಠದ ಅಧಿಕಾರವನ್ನು ವಹಿಸಿಕೊಂಡು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡು ಪ್ರಸ್ತುತ ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಈ ಕ್ಷೇತ್ರದ ಸವಾಂರ್ಗೀಣ ವಿಕಾಸ ಕಾರ್ಯಗಳನ್ನು ನೆರವೇರಿಸುತ್ತ ಇದೀಗ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿರುವದು ಸರ್ವವಿಧಿತವಾಗಿದೆ. 


ಈ ಸಂದರ್ಭದಲ್ಲಿ ಪೂರ್ವ ರಾಜಗೋಪುರ ಹಾಗೂ ಭದ್ರಕಾಳಿ ಅಮ್ಮನವರ ಶಿಖರದ ರಿಪೇರಿಯ ಜೊತೆಗೆ ದೇವಸ್ಥಾನದಲ್ಲಿರುವ ಮುಖಮಂಟಪ, ಸುತ್ತುಪೋಳಿ, ಪ್ರದಕ್ಷಿಣ ಪಥ, ರಥಪಥ, ದಕ್ಷಿಣ ದ್ವಾರ ಮೊದಲಾದವುಗಳನ್ನು ಸಂಪೂರ್ಣ ಜೀರ್ಣೋದ್ದಾರ ಮಾಡಿರುವುದಲ್ಲದೇ, ಉತ್ತರ ಮಹಾದ್ದಾರ, ಉತ್ತರ ರಾಜಗೋಪುರ, ದಕ್ಷಿಣ ರಾಜಗೋಪುರ, ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಸುಂದರ ಕಲ್ಲಿನ ಕಾಂಪೌಂಡ್ ಗೋಡೆ ಇವುಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಹೀಗೆ ದೇವಸ್ಥಾನವನ್ನು ಸಂಪೂರ್ಣ ನವೀಕರಣ ಮಾಡಲಾಗಿದೆ. 


ಶಾಸ್ತ್ರದ ಪದ್ಧತಿಗನುಗುಣವಾಗಿ ಯಾವುದೇ ಪ್ರಾಚೀನ ದೇವಾಲಯದ ಜೀರ್ಣೋದ್ದಾರ ಮಾಡಿದ ನಂತರ ಅದನ್ನು ಸಂಪೂರ್ಣ ಶುದ್ದೀಕರಣಗೊಳಿಸಬೇಕಾಗುತ್ತದೆ. ಪ್ರಾಚೀನ ಕಾಲದಿಂದಲೂ ಇಲ್ಲಿಯ ಎಲ್ಲಾ ಪೂಜಾ ಪದ್ಧತಿಗಳು ವೀರಶೈವ ಆಗದು ಪದ್ದತಿಗೆ ಅನುಗುಣವಾಗಿ ನೆರವೇರುತ್ತ ಬಂದಿರುವುದರಿಂದ ಇದರ ಶುದ್ದೀಕರಣವನ್ನು ಕೂಡ ವೀರಶೈವ ಆಗಮ ಪದ್ಧತಿಯಂತೆ ಮಾಡಬೇಕಾಗುತ್ತದೆ. ವೀರಶೈವಾಗಮಗಳಲ್ಲಿ ದೇವಸ್ಥಾನಗಳ ಶುದ್ದೀಕರಣವನ್ನು ಮಹಾಸಂಪೋಕ್ಷಣ ಅಥವಾ ಮಹಾಕುಂಭಾಭಿಷೇಕಗಳ ಮೂಲಕ ಮಾಡುವ ಪದ್ದತಿ ಇರುತ್ತದೆ. ಆದ್ದರಿಂದ ದಿ. 3-3-2026 ರಿಂದ 6-3-2026 ರ ವರೆಗೆ ಉತ್ತರ ಮತ್ತು ದಕ್ಷಿಣ ರಾಜಗೋಪುರಗಳ ಲೋಕಾರೆ​‍್ಣ, ಅವುಗಳ ಮೇಲೆ ಕಳಸಾರೋಹಣ ಹಾಗೂ ಮಹಾ ಕುಂಭಾಭಿಷೇಕ, ಲಕ್ಷ ದೀಪೋತ್ಸವ ಮತ್ತು ಕಾಶೀಯ ಗಂಗಾ ನದಿಯ ದಡದಲ್ಲಿ ನಡೆಯುವ ಗಂಗಾರತಿಯ ಮಾದರಿಯಲ್ಲಿ ಕೃಷ್ಣಾರತಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 


ಇದೇ ಸಂದರ್ಭದಲ್ಲಿ ಮಕರ ಸಂಕ್ರಮಣ, ವಿಶಾಳಿ ಜಾತ್ರೆಯ ಕಾರ್ಯಕ್ರಮಗಳು ಕೂಡ ನೆರವೇರುವವು. ಇದಲ್ಲದೇ ಭೌತಿಕ ದೇವಾಲಯದ ಶುದ್ದೀಕರಣದ ಜೊತೆಗೆ ಈ ದೇವಾಲಯದ ಲಕ್ಷಾಂತರ ಭಕ್ತರ ದೇಹ ದೇವಾಲಯಗಳನ್ನು ಕೂಡ ಶುದ್ದೀಕರಣ ಮಾಡಿ ಲಿಂಗದೀಕ್ಷೆಯನ್ನು ನೀಡುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ "ಸಂಚಾರಿ ಧರ್ಮ ಜಾಗೃತಿ ಯಾತ್ರೆ'' ಮೊದಲಾದ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ದಿ. 14-1-2026 ರಿಂದ ದಿ. 6-3-2026 ರವರೆಗೆ ರೂಪಿಸಲಾಗಿದೆ ಎಂದು ಶ್ರೀಶೈಲ್ ಜಗದ್ಗುರುಗಳು ಹೇಳಿದರು.