ಭಕ್ತಿಪೂರ್ವಕವಾಗಿ ಜರುಗಿದ ಶ್ರೀ ರಂಗಾವಧೂತರ ಜೋಡು ಕಳಸದ ಮೆರವಣಿಗೆ
Devotional procession of the Shri Rangavadhuta Jodu Kalasa
ಬೆಟಗೇರಿ, 21 : ಬೆಟಗೇರಿ ನರಸಾಪೂರ ಮಧ್ಯದಲ್ಲಿರುವ ಪೂಜ್ಯ ರಂಗಾವಧೂತರ ತಪೋಭೂಮಿಯಲ್ಲಿ ಜ. 28ರಂದು ಜರುಗಲಿರುವ ಪೂಜ್ಯ ವೀರ್ಪಜ್ಜ ಹಾಗೂ ಪೂಜ್ಯ ರಂಗಪ್ಪಜ್ಜ ಗುರು ಶಿಷ್ಯರ 97ನೇ ರಥೋತ್ಸವದ ಅಂಗವಾಗಿ ಇಂದು ಬುಧವಾರ ಮುಂಜಾನೆ ಜೋಡು ಕಳಸದ ಮೆರವಣಿಗೆಯು ಡಂಬಳ ನಾಕಾದ ಹತ್ತಿರ ಇರುವ ಶ್ರೀ ನಂದಿವೇರಿ ಮಠದಿಂದ ಪ್ರಾರಂಭಗೊಂಡು ಟೆಲಿಪೋನ್ ಆಫಿಸ್, ಬಸವೇಶ್ವರ ವೃತ್ತ, ನಾಮಜೋಶಿ ರಸ್ತೆ, ಟಾಂಗಾಕೂಟ, ಮಹೇಂದ್ರಕರ್ ಸರ್ಕಲ್, ಗಾಂಧಿ ಸರ್ಕಲ್, ರಾಣಾ ಪ್ರತಾಪಸಿಂಹ ಸರ್ಕಲ್, ಪಿ. ಬಿ. ರಸ್ತೆ, ಬೆಟಗೇರಿ ಬಸ್ ನಿಲ್ದಾಣ ನರಸಾಪೂರ ಮೂಲಕ ಶ್ರೀ ರಂಗಪ್ಪಜ್ಜನವರ ಮಠಕ್ಕೆ ತಲುಪಿತು.
ದಿ. ಕಲ್ಲಪ್ಪ ಹುಯಿಲಗೋಳ ಅವರ ಸುಪುತ್ರರಿಂದ ವಿದ್ಯುತ್ ಅಲಂಕೃತಗೊಂಡ ಜೋಡು ಕಳಸದ ಮೆರವಣಿಗೆ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ನಂದಿವೇರಿಮಠ, ಡೋಣಿ-ಗದಗ ಅವರು ಚಾಲನೆ ನೀಡಿದರು.
ನೂರಾರು ಸುಮಂಗಲೆಯರು ಮಂಗಳಾರತಿ, ಭಜನೆ, ಬ್ಯಾಂಡ್, ಕಾಳಿ, ಡೊಳ್ಳು ಕುಣಿತದಿಂದ ಜರುಗಿದ ಈ ಜೋಡು ಕಳಸದ ಮೆರವಣಿಗೆಯಲ್ಲಿ ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ಎಂ.ಸಿ. ಅರಣಿ, ನಿಂಗಪ್ಪ ಚೇಗೂರ, ವಿಜಯ ಕಬಾಡಿ, ರುದ್ರ್ಪ ಬಾದರದಿನ್ನಿ, ಅಶೋಕ ಮುಳಗುಂದ, ಭೋಜಪ್ಪ ಹೆಗ್ಗಡಿ, ರಾಜು ಕಟಗಿ, ರಂಗಪ್ಪ ದ್ಯಾವಣಸಿ, ದುರ್ಗಾಸಿಂಗ್ ಕಾಟೇವಾಲ, ಎಂ.ಎನ್. ಐಲಿ, ಹೇಮಂತಗೌಡ ಬೆನಹಾಳ, ಮಾರುತಿ ಗಡಾದ, ಮಹದೇವಸಾ ಮೇರವಾಡೆ, ಕಲ್ಲಪ್ಪ ಹುಯಿಲಗೋಳ ಪರಿವಾರದವರು ಸೇರಿದಂತೆ ನೂರಾರು ಸದ್ಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 