ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮ

ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮ	Development works program of various departments

ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮ

ಬ್ಯಾಡಗಿ  31: ಬ್ಯಾಡಗಿ ವಿಧಾನ ಸಭಾ ಮತಕ್ಷೆತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮಗಳು ನ.  3 ರಂದು  ಮುಂಜಾನೆ 10 ಘಂಟೆಯಿಂದ ಪ್ರಾರಂಭವಾಗಲಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.  ನ.3 ರಂದು ಮುಂಜಾನೆ 10 ಘಂಟೆಗೆ ಚಿಕ್ಕಬಾಸೂರ ಗ್ರಾಮದಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ದೇವಸ್ಥಾನದ ಶಂಕುಸ್ಥಾಪನೆ ಮತ್ತು ಅದೇ ಗ್ರಾಮದಲ್ಲಿ ಪದವಿ ಕಾಲೇಜಿನಲ್ಲಿ ಆಡಿಟೋರಿಯಂ ಕಟ್ಟಡದ ಉದ್ಘಾಟನೆಯನ್ನು ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ನೆರವೇರಿಸಲಿದ್ದಾರೆ. 

ಮಧ್ಯಾಹ್ನ 2 ಘಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಲಘು ಸರಕು ಸಾಗಣೆಕೆ ವಾಹನಗಳ ನಿಲುಗಡೆಯ ಬಹುಮಹಡಿ ಕಟ್ಟಡದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದಾರೆ. ಪುರಸಭೆ ವತಿಯಿಂದ ಲೈನ್ಸ್‌ ಶಾಲಾ ಆವರಣದಲ್ಲಿ ಮೊದಲ ಹಂತದ ಆಶ್ರಯ ನಿವೇಶನ ಹಕ್ಕು ಪತ್ರಗಳನ್ನು ವಸತಿ ಸಚಿವ ಬಿ.ಝಡ್‌.ಜಮೀರ್ ಅಹ್ಮದ್ ಖಾನ್ ವಿತರಿಸಲಿದ್ದಾರೆ. ತಾಲೂಕಿನ ಹಿರೇಅಣಜಿ ಗ್ರಾಮದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆ ಉದ್ಘಾಟನೆ ಹಾಗೂ ಕಾರ್ಮಿಕ ಕಿಟ್ ಹಾಗೂ ವಿವಿಧ ಸೌಲಭ್ಯಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿತರಣೆ ಮಾಡಲಿದ್ದಾರೆಂದರು. 

ಅಂದು ನಡೆವ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶಾಸಕ ಬಸವರಾಜ ಶಿವಣ್ಣನವರ ವಹಿಸಲಿದ್ದಾರೆ. ಕಾರ್ಯಕ್ರಮಗಳಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ರುದ್ರ​‍್ಪ ಲಮಾಣಿ,  

ಸರ್ಕಾರಿ ಮುಖ್ಯ ಸಚೇತಕ ಸಲಿಂ ಅಹ್ಮದ್, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಶಾಸಕರು  ಇತರರು ಆಗಮಿಸಲಿದ್ದಾರೆಂದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತಕೋಟಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ, ಕೆಸಿಸಿ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಧುರೀಣರಾದ ಬೀರ​‍್ಪ ಬಣಕಾರ, ಸುರೇಶ ಹುಳಬುತ್ತಿ, ಮಜೀದ್ ಮುಲ್ಲಾ, ದುರ್ಗೇಶ ಗೊಣೆಮ್ಮನವರ, ಗೀರೀಶ ಇಂಡಿಮಠ, ಹನುಮಂತಪ್ಪ ಬಂಬಲಾಪುರ ಸೇರಿದಂತೆ ಇತರರಿದ್ದರು.