ವಿಜ್ಞಾನ-ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ: ಗೀರೀಶ ಪದಕಿ
ಎಟಿಎಲ್ ನೋಡಲ್ ಅಧಿಕಾರಿ ಬಿ.ಕೆ.ಶ್ರೀನಿವಾಸ ಉಪಸ್ಥಿತರಿದ್ದರು
ವಿಜ್ಞಾನ-ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ: ಗೀರೀಶ ಪದಕಿ
ಶಿಗ್ಗಾವಿ 28: ಯಾವುದೇ ಕೆಲಸವಾಗಲಿ ಸಮರಾ್ಣ ಮನೋಭಾವದಿಂದ ಮಾಡಿದಾಗ ಯಶಸ್ಸು ಹೇಗೆ ನಿಶ್ಚಿತವೂ,ಹಾಗೇ ವಿಜ್ಞಾನ-ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹಾವೇರಿ ಜಿಲ್ಲೆ ತರಬೇತಿ ಸಂಸ್ಥೆಯ ಉಪ ನಿರ್ದೇಶಕ(ಅಭಿವೃದ್ಧಿ) ಗೀರೀಶ ಪದಕಿ ಹೇಳಿದರು.
ತಾಲೂಕಿನ ತಿಮ್ಮಾಪುರದ ಎಂಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಾಜಿ ಪಾರ್ಕ್‌ನಲ್ಲಿ ತಮ್ಮ ಸಂಸ್ಥೆಯು ‘ಅಟಲ್ ಟಿಂಕ್‌ರಿಂಗ್ ಲ್ಯಾಬ್’ಸಬಲೀಕರಣ ವಿಷಯಕ್ಕೆ ಸಂಬಂಧಿಸಿ ಮಾರ್ಗದರ್ಶಿ ಶಿಕ್ಷಕರಿಗಾಗಿ ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾನಾಡಿದ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಗ್ಗೆ ಆಸಕ್ತಿ ಹೆಚ್ಚಿಸಲು ಕೇಂದ್ರ ಸರಕಾರ ಸಾಂಪ್ರದಾಯಿಕವಾಗಿ ‘ಅಟಲ್ ಟಿಂಕ್‌ರಿಂಗ್ ಲ್ಯಾಬ್’ಗಳನ್ನು ಎಲ್ಲ ರಾಜ್ಯಗಳಿಗೆ ಕೊಡ ಮಾಡಿದೆ.ಇವುಗಳ ಸಬಲೀಕರಣದಿಂದ ಶಿಕ್ಷಣ ಕ್ಷೇತ್ರ ಸಮೃದ್ಧಿಗೊಳಿಸಲು ಸಹಕಾರಿ ಆಗುತ್ತದೆ ಎಂದು ಗೀರೀಶ ಪದಕಿ ನುಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿರುವ ಎಂಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಾಜಿ ಪಾರ್ಕ್‌ನಲ್ಲಿ ಈ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದ್ದು,ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದು,ತಾವು ಪಡೆದ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂದು ಸೂಚಿಸಿದರು.
ಶಿಗ್ಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಬಸಪ್ಪ ಹೀರೀಮಠ ಮಾತನಾಡಿ,ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಿದರೆ,ಅವರಿಂದ ವಿಜ್ಞಾನ ಕ್ಷೇತ್ರಕ್ಕೆ ಅನುಮಪ ಕೊಡುಗೆ ಕೊಡಿಸಬಹುದು.ಆದ್ದರಂದ ಶಿಬಿರಾರ್ಥಿಗಳು ಕಾರ್ಯಾಗಾರವನ್ನು ಸದ್ವಿನಿಯೋಗ ಗೊಳಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಪಾರ್ಕ್‌ನ ತಾಂತ್ರಿಕ ಸಲಹೆಗಾರ ಟಿ.ಕೆ.ಮಧು ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಹಾವೇರಿ ಜಿಲ್ಲೆಯ 35 ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿರುವರು. ವಿಜ್ಞಾನ ಶಿಕ್ಷಕ ರಾಜೀವ ಹರನಗಿರಿ ಹಾಗೂ ಶಿಗ್ಗಾಂವ ತಾಲೂಕು ಎಟಿಎಲ್ ನೋಡಲ್ ಅಧಿಕಾರಿ ಬಿ.ಕೆ.ಶ್ರೀನಿವಾಸ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 