ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನೂಕೂಲ: ಮೋಹಿತೆ
ರಾಯಬಾಗ 15: ಸರಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯನ್ನು ಮಾಡುತ್ತಿದೆ ಇದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನೂಕೂಲವಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೋಹಿತೆ ಹೇಳಿದರು.
ಅವರು ಸಮೀಪದ ಮಂಟೂರ ಗ್ರಾಮದ ಸಿದ್ದಾರೂಢ ಮಠದಿಂದ ಪಂಚಾಯತಿವರೆಗೆ ಪ್ರಿಯಂಕಾ ಜಾರಕಿಹೊಳಿ ಅವರು ಸಂಸದರ ಅನುದಾನದಲ್ಲಿ ನೀಡಿದ 10 ಲಕ್ಷ.ರೂ.ಗಳ ರಸ್ತೆ ಅಭಿವೃದ್ದಿ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು. ಗ್ರಾಮದಲ್ಲಿ ಸಿದ್ದಾರೂಡ ಮಠದ ಜಾತ್ರಾ ಉತ್ಸವದ ನಿಮಿತ್ಯ 10 ಲಕ್ಷ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಯು ಕೆ.ಪಿ.ಸಿ.ಸಿ. ಪ್ರಧಾನಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ ಹಾಗೂ ಸಚಿವರ ಆಪ್ತರಾದ ಶಿವು ಪಾಟೀಲ ಇವರುಗಳ ಸತತ ಪ್ರಯತ್ನದ ಫಲವಾಗಿದೆ ಎಂದು ಮಾಜಿ ಕೆ.ಡಿ.ಪಿ.ಸದಸ್ಯ ಸದಾಶಿವ ಚೌಗಲಾ ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೋಹಿತೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಶಿವು ಪಾಟೀಲ, ಹಾಜಿ ಮುಲ್ಲಾ, ಅರ್ಜುನ ಬಂಡಗರ, ಇಲಾಯಿ ಶೇಖ, ಸಿದ್ರಾಮ ಪೂಜೇರಿ, ಶಿವಾನಂದ ಪಾಟೀಲ, ನಾಗಪ್ಪ ಮೇಟಿ, ಯಲ್ಲಗೌಡ ಪಾಟೀಲ, ಶಿವಪುತ್ರ ಕಾಲತಿಪ್ಪಿ, ಸದಾಶಿವ ಹಂಜಿ, ಪರಗೌಡ ಪಾಟೀಲ ಆನಂದ ಚೌಗಲಾ ಉಪಸ್ಥಿತರಿದ್ದರು.