ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ; ಮಹಾಲಿಂಗಪ್ಪ ಸನದಿ
ಮಹಾಲಿಂಗಪುರ, 08 : ಹತ್ತಿರದ ಸೈದಾಪುರ ಗ್ರಾಮದ ಶ್ರೀ ಶಾಂತ ದುರ್ಗಾದೇವಿ ಜಾತ್ರೆ ನಿಮಿತ್ಯವಾಗಿ ಜೈ ಬಬಲಾದಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉದ್ಘಾಟಿಸಿ ಮಾತನಾಡಿದ ಗ್ರಾಠ ಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ,ಕ್ರೀಡೆಗಳು ದೇಶಾದ್ಯಂತ ಹೆಸರು ಮಾಡಿವೆ.ಕ್ರಿಕೆಟ್ ಜೊತೆಗೆ ಹಲವಾರು ಕ್ರೀಡೆಗಳು ನಮಗೆ ಅವಶ್ಯಕ. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಏನು ಆಗುತ್ತೋ ಬಂದಂತೆ ಸ್ವೀಕರಿಸಿ ಮುನ್ನಡೆದು ಆಟ ಆಡಿದರೆ ಯೋಗ್ಯ. ಕ್ರೀಡೆ ನಮಗೆ ಹೆಚ್ಚಿನ ಆರೋಗ್ಯದ ಜೊತೆಗೆ ಹೆಚ್ಚು ದಿನ ಬದುಕಲು ಅವಶ್ಯವಾಗಿದೆ. ಆದ್ದರಿಂದ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದ್ದರು. ನಂತರ ರಾಮನಗೌಡ ಪಾಟೀಲ ಮಾತನಾಡಿ,ಕ್ರೀಡೆ ಮನುಷ್ಯನಿಗೆ ಅವಶ್ಯಕವಾಗಿದೆ.ದೇಹ ಬಲಿಷ್ಠವಾಗಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ. ವಯಸ್ಸಿನ ಮಿತಿಯ ಮೇಲೆ ನಿಗಾವಹಿಸಿ, ಯೋಗಾಸನ ಮತ್ತು ಧ್ಯಾನ ನಿರಂತರ ಮಾಡಿ ಎಂದರು.ಚಿನ್ನಪ್ಪ ಬಾಯಪ್ಪಗೊಳ್ ಮಾತನಾಡಿ, ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಉತ್ತಮ. ಇನ್ನಷ್ಟು ಹೆಚ್ಚು ದಿನ ಈ ಕ್ರೀಡೆಗಳು ಮುಂದುವರೆಯಲಿ ನಮ್ಮ ಸಹಕಾರವಿದೆ ಎಂದರು.ಶಿವಲಿಂಗ ಪೋಳ ಮಾತನಾಡಿ,ಒಂದಿಷ್ಟು ಆಟಗಳು ಗ್ರಾಮಕ್ಕೆ ಸೀಮಿತವಾಗದೆ, ರಾಜ್ಯಾದ್ಯಂತ ಕ್ರೀಡಾಪಟುಗಳನ್ನು ತರುವಂತ ಕಾರ್ಯ ನಡೆಯಬೇಕು.ಜೊತೆಗೆ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ದೇಹ ದಂಡಿಸಿದರೆ ಬಲಿಷ್ಠರಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಹಿರಿಯರಾದ ಮಹಾಲಿಂಗಪ್ಪ ಬಾಯಪ್ಪಗೊಳ,ಬಾಳನಗೌಡ ಪಾಟೀಲ,ಶಿವಲಿಂಗ ಶಿಂದೆ, ಚಿನ್ನಪ್ಪ ಹಿರೇಕುರುಬರ,ಜಯಕುಮಾರ ತಳಗಡೆ, ಮಹಾಲಿಂಗ ಮುಗಳಖೋಡ,ಯಮನಪ್ಪ ಉಪ್ಪಾರ, ರಮೇಶ ಬಾಯಪ್ಪಗೊಳ,ಶಂಕರ ರಾಠೋಡ,ಶಿವಪ್ಪ ಬಾಯಪ್ಪಗೋಳ, ಬಸವರಾಜ ಮಾಂಗ,ಮಹೇಶ ಪಚ್ಚಾಪುರ,ಬಸು ಸಸಾಲಟ್ಟಿ, ಬಾಳ್ಳನಾಯ್ಕ ನಾಯಕ, ಕಲ್ಲನಾಯ್ಕ ನಾಯಕ, ಸುರೇಶ ಬಾಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪತ್ರಕರ್ತ ರಾಜೇಂದ್ರ ನಾವಿ ನಿರೂಪಿಸಿ,ವಂದಿಸಿದರು.