ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ : ಎಂ. ಎ. ಸ್ವಪ್ನ
Develop a sportsmanship: M. A. Swapna
ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ : ಎಂ. ಎ. ಸ್ವಪ್ನ
ಬೆಳಗಾವಿ, 30 ; ಇಂದಿನ ಒತ್ತಡದ ಜೀವನ ಶೈಲಿಯ ನಡುವೆ ನಾವು ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸದೃಢವಾದ ದೇಹ ಸಮೃದ್ಧವಾದ ಮನಸ್ಸಿನಿಂದ ಕೂಡಿರುತ್ತದೆ ಎಂಬಂತೆ ಕ್ರೀಡೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮನ್ನು ಸಶಕ್ತರನ್ನಾಗಿಸಿಕೊಳ್ಳಲು ಅಗತ್ಯವಾಗಿದ್ದು, ಒಂದು ದಿನದಲ್ಲಿ ಕನಿಷ್ಠ 1 ಗಂಟೆಯಾದರೂ ನಾವು ಮೈದಾನಕ್ಕೆ ಇಳಿದು ದೇಹ ದಂಡಿಸುವ ರೂಢಿಯನ್ನು ಅನುಸರಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಎಂದು ಬೆಳಗಾವಿ ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜಯಂತಿಯ ಅಂಗವಾಗಿ ಆಯೋಜಿಸಲಾದ ಕ್ರೀಡಾ ಜಾಗೃತಿ ರ್ಯಾಲಿಯನ್ನು ಉದ್ಘಾಟಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಶ್ರೀಮತಿ. ಎಂ.ಎ.ಸ್ವಪ್ನ ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾಂತೇಶ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಬಿ.ಪಿ. ಭಸ್ಮೆ ಅವರು ಮಾತನಾಡುತ್ತ ಯುವಕರು ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಇಂದು ಬಹಳಷ್ಟು ಯುವಕರು ದುಶ್ಚಟಗಳ ಗುಲಾಮರಾಗುತ್ತಿದ್ದಾರೆ. ಆದ್ದರಿಂದ ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ, ಸಹಕಾರ, ಸದ್ಭಾವನೆಯಿಂದ ವ್ಯಕ್ತಿತ್ವವನ್ನು ರೂಢಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಆರೋಗ್ಯವೇ ಭಾಗ್ಯ ಎಂಬಂತೆ ಉತ್ತಮ ಆರೋಗ್ಯಕ್ಕಾಗಿ ಇಂದು ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸಬೇಕೆಂದು ಕೆರೆ ನೀಡಿದರು.
ಸಮಾರಂಭದ ಅಧ್ಯಕ್ಷೆತೆಯನ್ನು ವಹಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅರ್ಜುನ ಜಂಬಗಿ ಮಾತನಾಡುತ್ತ ಮೇಜರ್ ಧ್ಯಾನ್‌ಚಂದ್ ಅವರ ಜೀವನ ಹಾಗೂ ಸಾಧನೆಗಳ ಕುರಿತು ತಿಳಿಸಿ ಇಂದು ದೇಶೀಯ ಆಟಗಳಿಗೂ ಮಾನ್ಯತೆ ದೊರೆಯಬೇಕು ನಮ್ಮ ಪರಂಪರೆಯಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳು ರೂಢಿಯಲ್ಲಿದ್ದವು. ಒಳಾಂಗಣ ಕ್ರೀಡೆಗಳು ನಮ್ಮನ್ನ ಕುಶಾಗ್ರಮತಿಗಳನ್ನಾಗಿಸಿದರೆ, ಹೊರಾಂಗಣ ಕ್ರೀಡೆಗಳು ಸದೃಢ ದೇಹ ದಾಢ್ಯತೆಯನ್ನು ಹೊಂದಲು ಸಹಕಾರಿಯಾಗಿದ್ದು ಇವುಗಳನ್ನು ಮನಗಂಡ ನಮ್ಮ ಪೂರ್ವಜರು ಹಲವಾರು ಪ್ರಕಾರದ ಕ್ರೀಡೆಗಳನ್ನು ರೂಢಿಸಿಕೊಂಡಿದ್ದು, ಅವುಗಳನ್ನು ನಾವು ತಲೆತಲಾಂತರದಿಂದ ರೂಢಿಸಿಕೊಂಡು ಬಂದಿದ್ದು, ಅವು ಇಂದು ಜಾಗತೀಕರಣದ ಅಬ್ಬರದಿಂದಾಗಿ ನಮ್ಮಿಂದ ದೂರವಾಗುತ್ತಿವೆ. ಅವುಗಳಿಗೆ ವೃತ್ತಿಪರತೆಯ ಸ್ಪರ್ಶ ನೀಡಿ ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಗದೀಶ ಗಸ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕ್ರೀಡಾ ಜಾಗೃತಿ ರ್ಯಾಲಿಯನ್ನು ಮಾನ್ಯ ಕುಲಪತಿಗಳಾದ ಪ್ರೊ.ಸಿ.ಎಂ.ತ್ಯಾಗರಾಜ ಅವರು ಕ್ರೀಡಾ ದಿನಾಚರಣೆ ಕೇವಲ ಶಾಲಾ ಕಾಲೇಜುಗಳಿಗೆ ಸೀಮಿತವಾಗದೆ, ಜನಸಾಮಾನ್ಯರಲ್ಲೂ ಕ್ರೀಡೆಯ ಮಹತ್ವದ ಅರಿವು ಮೂಡಿಸಬೇಕೆಂಬ ಸಂಕಲ್ಪದಿಂದ ಪೂರ್ವ ಯೋಜನೆಯನ್ನು ರೂಪಿಸಿ ಮಾರ್ಗದರ್ಶನ ಮಾಡಿರುವುದಾಗಿ ರ್ಯಾಲಿಯ ಉದ್ದೇಶಗಳ ಕುರಿತು ಮಾತನಾಡುತ್ತ ಸ್ಮರಿಸಿಕೊಂಡರು. ರ್ಯಾಲಿಯಲ್ಲಿ ವಿದ್ಯಾರ್ಥಿಗಳು ಹೇಳಬೇಕಾದ ಕೆಲವು ಘೋಷಣೆಗಳನ್ನು ತಿಳಿಸಿದರು. ಹಾಗೂ ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿಕೊಂಡರು. ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಿಂದ ಚನ್ನಮ್ಮ ವೃತ್ತದ ವರೆಗೆ ಹಮ್ಮಿಕೊಳ್ಳಲಾದ ರ್ಯಾಲಿಯಲ್ಲಿ ಬೆಳಗಾವಿ ನಗರದ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮವಸ್ತ್ರ ಧರಿಸಿ ಕ್ರೀಡೆಯ ಮಹತ್ವವನ್ನು ತಿಳಿಸುವ ಫಲಕಗಳನ್ನು ಪ್ರದರ್ಶಿಸುತ್ತ ಘೋಷಣೆಗಳನ್ನು ಕೂಗುತ್ತ ಸಕ್ರಿಯವಾಗಿ ಭಾಗವಹಿಸದ್ದರು. ನಗರದ ವಿವಿಧ ಮಹಾವಿದ್ಯಾಲಯಗಳ ಕ್ರೀಡಾ ನಿರ್ದೇಶಕರು ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು ರ್ಯಾಲಿಯ ಉಸ್ತುವಾರಿಯನ್ನು ನೋಡಿಕೊಂಡರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಗಿರಿಜಾಶಂಕರ ಮಾನೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ದೈಹಿಕ ನಿರ್ದೇಶಕರಾದ ಕರುಣಾ ಇವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 