ದೇವರ ಕೊಂಡ ಜ್ಜನವರ 99ನೇ ಮಹಾ ಶಿವರಾತ್ರಿ ಸಪ್ತಾಹಕ್ಕೆ ಚಾಲನೆ ಓಂ ನಮಃ ಶಿವಾಯ ಮಂತ್ರದಲ್ಲಿ ಬ್ರಹ್ಮಾಂಡ ಅಡಗಿದೆ : ಧರ್ಮಟ್ಟಿ
ಹಾರೂಗೇರಿ 21 : ಓಂ ನಮಃ ಶಿವಾಯ ಮಂತ್ರದಲ್ಲಿ ಇಡೀ ಬ್ರಹ್ಮಾಂಡವೇ ಅಡಗಿದೆ. ನಿತ್ಯ ಭಗವಂತನ ನಾಮಸ್ಮರಣೆ ಓಂ ನಮಃ ಶಿವಾಯ ಮಂತ್ರ ಪಠಣದಿಂದ ಆತ್ಮ ಪರಿಶುದ್ದವಾಗುತ್ತದೆ ಎಂದು ಚನ್ನವೃಷಭೇಂದ್ರ ಮಹಾರಾಜರ ಲೀಲಾಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ ಹೇಳಿದರು ಪಟ್ಟಣದ ಗುರುಚನ್ನವೃಷಭೇಂದ್ರ (ದೇವರಕೊಂಡಜ್ಜನವರ) ಮಹಾರಾಜರ ಲೀಲಾಮಠದಲ್ಲಿ ಶುಕ್ರವಾರದಿಂದ ಏಳು ದಿನಗಳವರೆಗೆ ನಡೆಯುತ್ತಿರುವ 99ನೇ ವರ್ಷದ ಮಹಾಶಿವರಾತ್ರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಕ್ತರು ಓಂ ನಮಃ ಶಿವಾಯ ಮಂತ್ರ ಭಜನೆಯಲ್ಲಿ ಪಾಲ್ಗೊಳ್ಳುವುದರಿಂದ ವೈಜ್ಞಾನಿಕ ಮತ್ತು ಧಾರ್ಮಿಕವಾಗಿ ಮನಸ್ಸು ಶಾಂತ ಮತ್ತು ಪರಿಪೂರ್ಣಗೊಳ್ಳುತ್ತದೆ. ಉತ್ತಮ ಮಾನಸಿಕ ಆರೋಗ್ಯದ ಜೊತೆಗೆ ಭಗವಂತನ ನಾಮಸ್ಮರಣೆಯು ಕೌಟುಂಬಿಕ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಿದರು. ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಮಾತನಾಡುತ್ತ ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಲೀಲಾಮೂರ್ತಿಗಳು. ಶತಮಾನಗಳ ಕಾಲ ಭೂಮಿಯ ಮೇಲಿನ ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸಿ ಧರ್ಮವನ್ನು ರಕ್ಷಿಸಿ ಪವಾಡಗಳನ್ನು ಮಾಡಿ ಭಕ್ತರ ಆರಾಧ್ಯ ದೈವರಾದ ಪವಾಡ ಪುರುಷರು. ಏಳು ದಿನಗಳ ಕಾಲ ಶಿವರಾತ್ರಿಯಲ್ಲಿ ಶಿವನನ್ನು ನೆನೆಯುತ್ತ ತನು ಮನ ಶುದ್ಧ ಮಾಡಿಕೊಳ್ಳಬೇಕೆಂದು ಹೇಳಿದರು.
ಗುರುಚನ್ನವೃಷಭೇಂದ್ರ ಮಹಾಸ್ವಾಮಿಗಳ ಹಾಗೂ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಮೂರ್ತಿಗಳಿಗೆ ಮಹಾಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಏಳು ದಿನಗಳವರೆಗೆ ನಡೆಯುತ್ತಿರುವ 99ನೇ ವರ್ಷದ ಮಹಾಶಿವರಾತ್ರಿ ಸಪ್ತಾಹಕ್ಕೆ ದೇವರಕೊಂಡಜ್ಜನವರ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು. ಏಳು ದಿನಗಳವರೆಗೆ ನಿರಂತರ ಹಗಲು ರಾತ್ರಿ ಭಕ್ತರಿಂದ ಓಂ ನಮಃ ಶಿವಾಯ ಮಂತ್ರ ಭಜನೆ ನಡೆಯಲಿದೆ. ಅಲ್ಲದೇ ನಿತ್ಯ ಅಂಬಲಿ ಅನ್ನಸಂತರೆ್ಣ ಹಮ್ಮಿಕೊಳ್ಳಲಾಗಿದೆ. ಶ್ರೀಮಠದ ಸದ್ಭಕ್ತರಾದ ವಿಠ್ಠಲರಾವ ಬಂತಿ ಬಾಬು ಪರಮಗೌಡರ ನೇಮಿನಾಥ ಕೊತ್ತಲಗಿ ವಿಜಯ ಬಂತಿ ಲಾಲಸಾಬ ಜಮಾದಾರ ಜ್ಯೋತೆಪ್ಪ ಉಮರಾಣಿ ಅಮರ ಬಂತಿ ಚನ್ನಬಸು ಗಾಳಿ ಭುಜಪ್ಪ ಸದಲಗಿ ನರಸಪ್ಪ ದಟವಾಡ ಸುರೇಶ ಅರಕೇರಿ ಮನ್ವಿತ್ ಅರಕೇರಿ ಹನಮಂತ ನಾಗನೂರ ಗೋಪಾಲ ಧರ್ಮಟ್ಟಿ ಶ್ರೀಶೈಲಗೌಡ ಉಮರಾಣಿ ಮಲ್ಲಿಕಾರ್ಜುನ ಮಠಪತಿ ರಾಘವೇಂದ್ರ ದೇಶಪಾಂಡೆ ರಾಜು ಕರ್ಣವಾಡಿ ತಮ್ಮಣ್ಣಿ ಕುರಿ ಸುಭಾಸ ಸಂಗನಗೌಡರ ಜಿನ್ನಪ್ಪ ಸುಬ್ಬಣ್ಣವರ ಮಾರುತಿ ಹಾಡಕಾರ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.