ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ ವಿಜೇತರ ವಿವರ
Details of the winners of the district level government employees' sports meet attended by officers
ಗದಗ 07: ದಿನಾಂಕ:03-01-2026 ಮತ್ತು 04-01-2026 ರಂದು ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು/ ಸಿಬ್ಬಂದಿಗಳು ಭಾಗವಹಿಸಿ ವಿಜೇತರಾದ ಈ ಕೆಳಕಾಣಿಸಿದ ಸಿಬ್ಬಂದಿಗಳಿಗೆ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಡಾ. ನಂದಾ ಹಣಬರಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಡಾ. ನಂದಾ ಹಣಬರಟ್ಟಿ , ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಇವರ ಸ್ವರಚಿತ ನಾಟಕ ಗೌಡನ ಮಗಳು, ಪಾತ್ರದಾರಿಗಳು ಶ್ರೀಮತಿ ನಂದಾ ಹಣಬರಟ್ಟಿ ಮತ್ತು ಇಲಾಖೆಯ ಸಿಬ್ಬಂದಿಗಳಾದ ಬಿಎಸ್ ಗುಡಿ, ದೀಪಾ ಶೆಟ್ಟರ್, ಶ್ರೀಕಾಂತ, ವಸಂತಾ, ವಿದ್ಯಾ, ಸುಜಾತಾ, ರೋಹನ, ಪಾಪಣ್ಣವರ, ಧರ್ಮರಾಜ, ಪ್ರವೀಣ ಗಾಯಕರ. ಕಸ್ತೂರಿ ನರ್ತಿ ಇವರುಗಳು ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಾ.ನಂದಾ ಹಣಬರಟ್ಟಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗದಗ ಮತ್ತು ಇಲಾಖೆಯ ಸಿಬ್ಬಂದಿಗಳಾದ ಸುಜಾತಾ ಪಾಟೀಲ, ದೀಪಾ ಶೆಟ್ಟರ್ , ಕಸ್ತೂತಿ ನರ್ತಿ, ಶ್ರೀಕಾಂತ ಅರಹುಣಸಿ , ಬಿ.ಎಸ್.ಗುಡಿ ಮತ್ತಣ್ಣ ಸಂಕನೂರ, ಎಮ್.ಎಂ. ಪಾಪನ್ನವರ ಇವರುಗಳು ಭಾಗವಹಿಸಿ ಜಾನಪದ ಸಮೂಹ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಶ್ರೀಕಾಂತ ಅರಹುಣಸಿ ಭಾವಗೀತೆ ಸ್ಪರ್ದೆಯಲ್ಲಿ ದ್ವಿತೀಯ, ಸಿದ್ದಲಿಂಗೇಶ ಯಚ್ಚಲಗಾರ ಪುರುಷರ 800 ಮೀ ಓಟದಲ್ಲಿ ದ್ವಿತೀಯ, ಸಿದ್ಧಲಿಂಗೇಶ ಯಚ್ಚಲಗಾರ ಪುರುಷರ 100 ಮೀ ಓಟದಲ್ಲಿ ತೃತೀಯ , ಪ್ರಶಾಂತ ಸಂಗ್ರೇಶಿ ಪುರುಷರ 110 ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ, ಸಿದ್ದಪ್ಪ ಮಾದರ ಪುರುಷರ 64 ಕೆಜಿ ವೇಟ್ ಲಿಪ್ಟಿಂಗ್‌ದಲ್ಲಿ ದ್ವಿತೀಯ ಸ್ಥಾನ, ಮಂಜುನಾಥ ಮಾದರ ಪುರುಷರ 67 ಕೆಜಿ ಕುಸ್ತಿಯಲ್ಲಿ ದ್ವಿತೀಯ ಸ್ಥಾನ, ಶಿವಗಂಗವ್ವ ಕಬ್ಬೇರಹಳ್ಳಿ ಮಹಿಳೆಯರ 800 ಮೀ ಓಟದಲ್ಲಿ ತೃತೀಯ ಸ್ಥಾನ, ಮಾಬುಸಾಬ ಕರಣಿ ಪುರುಷರ 83 ಕೆಜಿ ವೆಟ್ ಲಿಪ್ಟಿಂಗ್‌ದಲ್ಲಿ ದ್ವಿತೀಯ ಸ್ಥಾನ, ಸದಾಶಿಬ ಬುದ್ನಿ ಪುರುಷರ 87 ಕೆಜಿ ಕುಸ್ತಿಯಲ್ಲಿ ಪ್ರಥಮ ಸ್ಥಾನ, ವಿಶಾಲ ಹಾದಿಮನಿ, ಬಿ.ವಿ.ಬಸವರಡ್ಡಿಯವರ, ನವೀನ ಕುಮಾರ ಹರಿಜನ, ಪ್ರಶಾಂತ ಸಂಗ್ರೇಶಿ , ನೀಲಕಂಠಯ್ಯ ಎಸ್ ಮಹಮ್ಮದರಫಿ ನದಾಫ್ ಅವರು ಪುರುಷರ ಪುಟ್ಬಾಲ್ ನಲ್ಲಿ ಪ್ರಥಮ ಸ್ಥಾನ, ಬಿ.ವಿ.ಬಸವರೆಡ್ಡಿಯವರ ಪುರುಷರ ಬಾಸ್ಕೆಟ್ ಬಾಲ್ ದಲ್ಲಿ ಪ್ರಥಮ ಸ್ಥಾನ, ಮಂಜುಳಾ ಅರಳಿಗಿಡದ ಅವರು ಮಹಿಳೆಯರ ಥ್ರೋಬಾಲ್‌ದಲ್ಲಿ ಪ್ರಥಮ , ರಾಘವೇಂದ್ರ ಗೋಕಾಕ್ ಪುರುಷರ ಹಾಕಿ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 