ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣಾ ವೇಳಾಪಟ್ಟಿಯ ವಿವರ

ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣಾ ವೇಳಾಪಟ್ಟಿಯ ವಿವರ 

ಗದಗ 06 :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣಾ ವೇಳಾಪಟ್ಟಿಯ ವಿವರ ನಾಮಪತ್ರ ಸಲ್ಲಿಸಲು ಆರಂಭದ ದಿನಾಂಕವು ಅಕ್ಟೋಬರ್‌-28ರ ಬೆಳಿಗ್ಗೆ  11 ಗಂಟೆಯಿಂದ  ಸಂಜೆ 5 ಗಂಟೆ ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ವಿದ್ದು, ಕೊನೆಯ ದಿನಾಂಕವು ನವೆಂಬರ್‌- 07ರ ಬೆಳಿಗ್ಗೆ 11 ರಿಂದ  ಸಾಯಂಕಾಲ  5 ಗಂಟೆಯ ವರೆಗೆ ಸಮಯವನ್ನ ನಿಗದಿಪಡಿಸಿದ್ದು ಇರುತ್ತದೆ.         ಅದರಂತೆ ಇಂದು ಕಾರ್ಯಕಾರಣಿ ಸಮಿತಿಗೆ ಸಂಬಂಧಿಸಿ ರವಿ ಎಲ್ ಗುಂಜೀಕರ ಹಾಗೂ ಡಾ.ಬಸವರಾಜ ವ್ಹಿ ಬಳ್ಳಾರಿ ರವರುಗಳು ಚುನಾವಣಾಧಿಕಾರಿಗಳಿಗೆ  ಜಿಲ್ಲೆಯ ವಿವಿಧ ವೃಂದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನೌಕರ ಬಾಂಧವರು ಸೇರಿ ನಾಮಪತ್ರ ಸಲ್ಲಿಸುವ ವೇಳೆ ಇದ್ದರು.             ಚುನಾವಣಾ ನಾಮಪತ್ರಗಳನ್ನು ಪರೀಶೀಲಿಸುವ ದಿನಾಂಕ 08-11-2024 ರ ಬೆಳಿಗ್ಗೆ 11 ಗಂಟೆಯಿಂದ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ,  08-11-2024 ರ ನಾಮಪತ್ರಗಳ ಪರೀಶೀಲನೆಯ ನಂತರಉಮೇದುವಾರಿಕೆಯನ್ನು ವಾಪಸ್ಸು ಪಡೆಯಲು 11-11-2024 ಸಾಯಂಕಾಲ 4.30 ಇರುತ್ತದೆ. ಉಮೇದುವಾರಿಕೆಯನ್ನು ವಾಪಸ್ಸು ಪಡೆದ ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಪ್ರಕಟಣೆ  ಇದ್ದು, ಚುನಾವಣಾ ದಿನಾಂಕ ಸಮಯ ಮತ್ತು ಸ್ಥಳವನ್ನ ನವಂಬರ್‌-16 ರ  ಬೆಳಿಗ್ಗೆ 9.00 ರಿಂದ  ಅಪರಾಹ್ನ 4 ಗಂಟೆಯವರೆಗೆ, ಮತಗಳ ಎಣಿಕೆಯ ನಂತರ ಫಲಿತಾಂಶ ಪ್ರಕಟವಾಗುತ್ತದೆ.              ಈ ಸಂದರ್ಭದಲ್ಲಿ ವಿ.ಎಂ. ಹಿರೇಮಠ, ಎಸ್ ಎನ್ ಬಳ್ಳಾರಿ,ಎಸ್ ಆರ್ ಬಂಡಿ, ಕೆ ಎಫ್ ಹಳ್ಯಾಳ,ಡಿ ಟಿ ವಾಲ್ಮೀಕಿ, ಡಿ ಎಸ್ ತಳವಾರ, ಬಸವರಾಜ ಬಳ್ಳಾರಿ,ಕೆ ಬಿ ಕೊಣ್ಣೂರ, ಎನ್ ಎಚ್ ಪಾಟೀಲ, ಎಸ್ ಎಸ್ ಲಕ್ಷಕೊಪ್ಪ, ಎಸ್ ಎಚ್ ಹುಚ್ಚಣ್ಣಚರ, ಐ ಎ ಗಾಡಗೊಳಿ, ಕರಿಂಸಾಬ ಸುಣಗಾರ,ಬಿ ಬಿ ಹಡಪದ, ಹನಮಂತ ನಾಗರಳ್ಳಿ,ಎಸ್ ಬಿ ಪಾಟೀಲ, ಎಸ್ ಎಸ್ ಪಾಟೀಲ ಸೇರಿದಂತೆ ಇತರೆ ಇಲಾಖೆಯ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.