ಆಸೆ ಮನುಷ್ಯನನ್ನು ನಾಶ ಮಾಡುವುದು : ಶ್ರೀಶೈಲಯ್ಯ ಸ್ವಾಮೀಜಿ
Desire destroys man: Srisailaya Swamiji
ಆಸೆ ಮನುಷ್ಯನನ್ನು ನಾಶ ಮಾಡುವುದು : ಶ್ರೀಶೈಲಯ್ಯ ಸ್ವಾಮೀಜಿ
ರಬಕವಿ-ಬನಹಟ್ಟಿ 02: ಆಸೆ ಮನುಷ್ಯನನ್ನು ನಾಶ ಪಡಿಸುವದಷ್ಟೆ ಅಲ್ಲದೆ ಸಂಬಂಧವನ್ನು ಹಾಳು ಮಾಡುತ್ತದೆ. ಮನುಷ್ಯ ಮನಸ್ಸನ್ನು ಹಾಗೂ ಆಸೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಶ್ರೀಶೈಲಯ್ಯ ಸ್ವಾಮೀಜಿ ಹಿರೇಮಠ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಶ್ರೀ ಜೈ ಹನುಮಾನ್ ಗಜಾನನ ಉತ್ಸವ ಕಮೀಟಿ ವತಿಯಿಂದ ಜರುಗಿದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಮಾತನಾಡುತ್ತಾ, ನಾನು ಹುಟ್ಟಿದಲ್ಲಿ ಸಂಸಾರ ಹುಟ್ಟಿತು, ಸಂಸಾರ ಹುಟ್ಟಿದಲ್ಲಿ ಆಸೆ ಹುಟ್ಟಿತು, ಆಸೆ ಎಂಬುದು ಓಡುವುದಕ್ಕೆ ಹಚ್ಚುತ್ತದೆ. ಪ್ರತಿಯೊಬ್ಬರು ಹೆಣ್ಣು, ಹೊನ್ನು, ಮಣ್ಣಿಗಾಗಿ ಕಿತ್ತಾಡಿದ್ದಾರೆ ಹೊರತು ಒಂದು ದಿನವೂ ಭಗವಂತನ ಸೇವೆಗಾಗಿ ಮುಂದಾಗಿಲ್ಲ. ಮನುಷ್ಯ ಆಸೆ ಪಡುವುದು ಸಹಜ ಆದರೆ ದುರಾಸೆ ಪಡಬಾರದು. ಒಂದು ಶ್ರಮದ ಬೆವರಿನ ಹನಿ ಹತ್ತು ತೀರ್ಥ ಕ್ಷೇತ್ರಕ್ಕೆ ಸಮಾನವಾಗಿದೆ. ಮಾನವ ಜನ್ಮ ಬಹು ದೊಡ್ಡದು ಇರುವಷ್ಟು ದಿನಗಳಲ್ಲಿ ಪುರಾಣ ಪ್ರವಚನ ಸತ್ಷಂಗದಲ್ಲಿ ತೊಡಗಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮಾಡುವ ಸತ್ಕಾರ್ಯಗಳಿಂದ ಪುಣ್ಯದ ಫಲಾಫಲ ದೊರೆಯುವುದು. ಸನಾತನ ಹಿಂದೂ ಧರ್ಮದ ಆಚಾರ-ವಿಚಾರ, ಪದ್ದತಿ, ಸಂಸ್ಕಾರ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸಬೇಕಿದೆ. ಹಬ್ಬಗಳ ಆಚರಣೆಯಿಂದ ಬಾಂಧವ್ಯ ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಮಧುರಖಂಡಿಯ ಪ್ರವಚನಕಾರ ಬಸಯ್ಯ ಶಾಸ್ತ್ರಿ, ನಾವಲಗಿಯ ಬಸಯ್ಯ ಸ್ವಾಮೀಜಿ ಹಿರೇಮಠ, ಈರ್ಪ ಬಡಿಗೇರ, ಅಶೋಕ ಆಸಂಗಿ, ಶ್ರೀಶೈಲ ಹಳ್ಳಿ, ವೆಂಕಪ್ಪ ಬಿಮಾನಿ, ಸಂಗಪ್ಪ ಪಟ್ಟಣಶೆಟ್ಟಿ, ಕುಮಾರ ಹಿರೇಮಠ, ಕಾಂತು ಹಳ್ಳಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 