ಸಕ್ಕರೆ ಕಾಖರ್ಾನೆಗಳಿಗೆ ಜಿಲ್ಲಾಧಿಕಾರಿ ಆದೇಶ : ರೈತ ಸಂಘಟನೆಗೆ ದೊರೆತ ದೊಡ್ಡ ಜಯ: ಶೀತಲ ಪಾಟೀಲ

ಸಕ್ಕರೆ ಕಾಖರ್ಾನೆಗಳಿಗೆ ಜಿಲ್ಲಾಧಿಕಾರಿ ಆದೇಶ : ರೈತ ಸಂಘಟನೆಗೆ ದೊರೆತ ದೊಡ್ಡ ಜಯ: ಶೀತಲ ಪಾಟೀಲ


ಕಾಗವಾಡ 15: ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ರೈತರ ಬೇಡಿಕೆಗಳು ಈಡೇರಿಸಲು ಸಂಬಂಧಪಟ್ಟ ಸಕ್ಕರೆ ಕಾಖರ್ಾನೆಗಳಿಗೆ ಆದೇಶ ನೀಡಿದ್ದರಿಂದ ಕಳೆದ 40 ವರ್ಷಗಳ ಬಳಿಕ ರೈತ ಸಂಘಟನೆಗೆ ದೊರೆತ ದೊಡ್ಡ ಜಯ ಎಂದು ಕಬ್ಬು ಬೆಳೆಗಾರರ ಸಂಘಟನೆಯ ಸಂಚಾಲಕ ಶೀತಲ ಪಾಟೀಲ ಹೇಳಿದರು.

ಬುಧವಾರ ಸಂಜೆ ಉಗಾರಖುರ್ದ ಪಟ್ಟಣದ ರಾಣಿ ಚೆನ್ನಮ್ಮಾ ವೃತ್ತದಲ್ಲಿ ರೈತರ ಸಮಾವೇಶ ಹಮ್ಮಿಕೊಂಡಿದ್ದರು. ಇಲ್ಲಿಗೆ ಸಾವಿರಾರು ರೈತರು ಒಂದುಗೂಡಿ ಕಳೆದ ಅನೇಕ ವರ್ಷಗಳ ಬಳಿಕ ಕಬ್ಬು ಬೆಳೆಗಾರ ರೈತರ ಬೇಡಿಕೆಗಳು ಈಡೇರಿಸಿದ ನಾವು ಈವರೆಗೆ ಕಂಡಿರುವರಲ್ಲಿ ಧೀಮಂತ ಜಿಲ್ಲಾಧಿಕಾರಿಗಳೆಂದು ಹೇಳಿ, ಅವರಿಗೆ ಶುಭಾಶಯಗಳು ಹೇಳುತ್ತಾ, ವಿಜಯೋತ್ಸವ ಆಚರಿಸಿದರು.

ಕಳೆದ ಸುಮಾರು 20 ದಿನಗಳಿಂದ ಕಬ್ಬು ಬೆಳೆಗಾರ ರೈತರು ಹೋರಾಟ ಮಾಡುತ್ತಿದ್ದಾರೆ. ಪ್ರಥಮ ಬಾರಿಗೆ ಉಗಾರಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರು ನಮ್ಮ ಬೆಂಬಲಕ್ಕೆ ನಿಂತರು. ಆದರೆ, ಯಾವುದೇ ಪ್ರಯೋಜನೆ ಆಗದೆ ಇದಿದ್ದರಿಂದ ಉಗ್ರ ಹೋರಾಟ ಕೈಗೊಳ್ಳುವಾಗ ಅವರು ಹಿಂದಕ್ಕೆ ಸರಿದರು. ಇಂತಹ ಸಮಯದಲ್ಲಿ ಕುಡಚಿ, ಐನಾಪುರ, ಉಗಾರ, ಕುಸನಾಳ, ಮೋಳವಾಡ, ಕಾಗವಾಡ, ಶೇಡಬಾಳ ಸೇರಿದಂತೆ ಅನೇಕ ಗ್ರಾಮದ ರೈತರು ಬೆಂಬಲಕ್ಕೆ ನಿಂತು, ನಮ್ಮ ಬೇಡಿಕೆಗಳು ಈಡೇರಿಸುವವರೆಗೆ ನೀಡಿರುವ ಸಾಥ ನನ್ನ ಜೀವನದಲ್ಲಿ ಮರೆಯಲಾರೆ ಎಂದು ಕಬ್ಬು ಬೆಳೆಗಾರ ಸಂಘದ ಐನಾಪುರದ ಹೋರಾಟಗಾರ ರವೀಂದ್ರ ಗಾಣಿಗೇರ ಹೇಳಿದರು.

ಕಳೆದ ವರ್ಷದ ಕಬ್ಬಿನ ಉಳಿದ ಬಾಕಿ ಹಣ 400 ಯಾವುದೇ ಕಾಲಕ್ಕೆ ನೀಡಲೇಬೇಕು. ಪ್ರಸಕ್ತ ಹಂಗಾಮಿಗೆ ಸರಕಾರ ನೀಡಿರುವ ಆದೇಶದಂತೆ ಎಫ್.ಆರ್.ಪಿ ಹಣ ಒಂದೆ ಕಂತಿನಲ್ಲಿ ನೀಡುತ್ತಿದ್ದ ಬಗ್ಗೆ ಪ್ರಕಟಣೆ ಹೊರಡಿಸಲೇಬೇಕು. ಇದರಲ್ಲಿ ತಪಿಸ್ಥರಾದರೆ ರೈತರು ನಮ್ಮ ಬಳಿ ಬಂದಾಗ ನಿಮ್ಮ ಮೇಲೆ ಕ್ರಮ ಜರುಗಿಸುವದಾಗಿ ಸಕ್ಕರೆ ಕಾಖರ್ಾನೆಗಳಿಗೆ ಎಚ್ಚರಿಕೆ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಶೀತಲ ಪಾಟೀಲ ಹೇಳಿದರು.

ಅಥಣಿ ತಾಲೂಕಿನ ಎಲ್ಲ ಸಕ್ಕರೆ ಕಾಖರ್ಾನೆಗಳಿಗೆ ಭೇಟಿಯಾಗಿ ಅವರು ನೀಡಿದ ಆದೇಶ ಪಾಲನೆ ಮಾಡುವವರೆಗೆ ಕಬ್ಬು ಕಟಾವಣೆ ಮಾಡದಂತೆ ರೈತರಿಗೆ ವಿನಂತಿಸಿದರು. ನಾಳೆಯಿಂದ ಎಲ್ಲ ಸಕ್ಕರೆ ಕಾಖರ್ಾನೆಗಳಿಗೆ ಭೇಟಿ ನೀಡಿದರ ನೀಡುವದಂತೆ ಮಾಡುತ್ತೇವೆ ಎಂದರು.

ರೈತ ಸಂಘಟನೆಯ ಸದಸ್ಯರಾದ ರಾವಸಾಹೇಬ ಪಾಟೀಲ, ಆದಿನಾಥ ದಾನೋಳಿ, ಸಂಜಯ ಬಿರಡಿ, ಕುಮಾರ ಅಪರಾಜ, ಅಪ್ಪಾಸಾಹೇಬ ಚೌಗುಲೆ, ಚಿದಾನಂದ ಡುಗನ್ನವರ, ಉದಯ ಮಾನೆ, ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ, ಪ್ರಮೋದ ಮಗದುಮ್ಮ, ಸಚೀನ ಕುಸನಾಳೆ, ಮನೋಜ ಕುಸನಾಳೆ, ಸುನೀಲ ಶಿಂಧೆ, ಸುಶಾಂತ ಮಗದುಮ್ಮ, ಪ್ರಮೋದ ಹೊಸುರೆ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು.