ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ದಂತಾರೋಗ್ಯ: ಪ್ರಶಾಂತ್ ವಿಕೆ

ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ದಂತಾರೋಗ್ಯ: ಪ್ರಶಾಂತ್ ವಿಕೆ Dental health plays a very important role in maintaining physical health: Prashanth VK

        ಮಾಂಜರಿ, 12 : ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ದಂತಾರೋಗ್ಯ. ಚಿಕಿತ್ಸೆ ಗಿಂತಲೂ ಮುನ್ನೆಚ್ಚರಿಕೆ ವಾಸಿ ಎಂಬಂತೆ ಹಲ್ಲು ನೋವು ಬಾರದಂತೆ ತಡೆಯುವುದು ಆವಶ್ಯ. ಸುಭದ್ರ ಅಡಿಪಾಯ ಕಟ್ಟಡಕ್ಕೆ ಆಧಾರವಾಗಿರು ವಂತೆಯೇ ಆರೋಗ್ಯಪೂರ್ಣ ಹಲ್ಲುಗಳು ಭವಿಷ್ಯದಲ್ಲಿ ಆರೋಗ್ಯವಂತ ಹಲ್ಲುಗಳಿಗೆ ದಾರಿಯಾಗಬಲ್ಲುದು. ಈ ನಿಟ್ಟಿನಲ್ಲಿ ದಂತ ಆರೋಗ್ಯ ಜಾಗೃತ ಬಹಳ ಮುಖ್ಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ವಿಶ್ವನಾಥ್ ಕತ್ತಿ ದಂತ ಮಹಾವಿದ್ಯಾಲಯದ ದಂತ್ ವೈದ್ಯರಾದ ಪ್ರಶಾಂತ್ ವಿಕೆ ತಿಳಿಸಿದರು 

    ಅವರು ಶುಕ್ರವಾರರಂದು ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ವಿದ್ಯಾರ್ಥಿಗಳಿಗೆ ಬೆಳಗಾವಿಯ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ 40ನೇ ವಾರ್ಷಿಕೊತ್ಸವದ ನಿಮಿತ್ಯ ರುಬಿ ವರ್ಷಾಚರಣೆ ಅಂಗವಾಗಿ ಉಚಿತ ದಂತ ತಪಾಸಣೆ ಹಾಗೂ ಮೌಖಿಕ ಆರೋಗ್ಯ ಜಾಗೃತಿ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು  

      ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ. ಮಕ್ಕಳಿಗೆ, ಪೌಷ್ಟಿಕ ಆಹಾರ ಸೇವನೆ, ರಕ್ತಹೀನತೆ ನಿಯಂತ್ರಣ, ದುಶ್ಚಟಗಳ ನಿಯಂತ್ರಣ, ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಕಾಪಾಡಿಕೊಳ್ಳುವುದು, ಸ್ನೇಹಾ ಕ್ಲಿನಿಕ್ ಒಳಗೊಂಡ ವಿಷಯದ ಬಗ್ಗೆ ಮಕ್ಕಳಿಗೆ ಸಲಹೆ ಕೊಡಲಾಯಿತು. ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟುಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಳಿಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ಎಂದು ದಂತ ವೈದ್ಯ ಪ್ರಶಾಂತ್ ವಿ ಕೆ ಹೇಳಿದರು  

       ಸದರಿ ಶಿಬಿರದಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಂತ ತಪಾಸನೆಯನ್ನು ಮಾಡಲಾಯಿತು ದಂತ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಕೆಎಲ್‌ಇ ದಂತ ಮಹಾವಿದ್ಯಾಲಯ ನೆಹರು ನಗರ ಬೆಳಗಾವಿ ಇಲ್ಲಿಗೆ ಭೇಟಿ ನೀಡಲು ಸಲಹೆ ನೀಡಿದರು ಕೆಎಲ್‌ಇ ಮಹಾವಿದ್ಯಾಲಯದ ವೈಧ್ಯರಾದ ಪ್ರಶಾಂತ ವಿಕೆ ಯವರು ಕಾರ್ಯಕ್ರಮವನ್ನು  ಉದ್ಘಾಟಿಸಿದರು  ಇನ್ನೊರ್ವ ವೈದ್ಯರಾದ ಮಹಾಂತೇಶ ಸಿದ್ದಿಭಾವಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಅದೇ ರೀತಿ ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯರಾದ ಬಿಎಸ್ ಅಂಬಿ, ಶಾರದಾ ಕೋರೆ ಪ್ರೌಢ ಶಾಲೆ ಅಂಕಲಿಯ ಉಪಪ್ರಾಚಾರ್ಯರಾದ ಜೆಎಸ್ ತಮಗೊಂಡ ಉಳಿದ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರಾದ ಪಿಎನ್ ತಳವಾರ, ಪಾರ್ಥ ಸಾರಥಿನಂದಾ ಸೇರಿದಂತೆ, ಎಮ್ ಎಸ್ ಕಾನಡೆ, ಎಸ್‌ಜಿ ಹಿರೇಮಠ, ಮಹುವಾ ನಿಯಗಿ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿ ಎಸ್ ಅಂಬಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು