ಜಯ ಕನರ್ಾಟಕ ಸಂಘಟನೆಯಿಂದ ಪ್ರತಿಭಟನೆ ಮನವಿ ಸಲ್ಲಿಕೆ ಬೆಳೆ ವಿಮೆ ಬಿಡುಗಡೆಗೊಳಿಸಲು ಒತ್ತಾಯ

ಲೋಕದರ್ಶನ ವರದಿ

ತಾಳಿಕೋಟೆ,  2017-18 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಾಳಿಕೋಟೆಯ ಹೋಬಳಿ ವ್ಯಾಪ್ತಿಯ ರೈತರು ಬೆಳೆ ವಿಮೆ ತುಂಬಿದ್ದು ಕೆಲವರಿಗೆ ಬೆಳೆವಿಮೆ ಪರಿಹಾರ ಜಮಾ ಅಗಿದ್ದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲಾ ತಾರತ್ಯ ಮಾಡದೇ ಎಲ್ಲ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಒದಗಿಸಬೇಕೆಂದು ಜಯ ಕನರ್ಾಟಕ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಸಂಘಟನೆಯ ತಾಲೂಕಾ ಗೌರವಾಧ್ಯಕ್ಷ ಕುಮಾರಗೌಡ ಪಾಟೀಲ ಮಾತನಾಡಿ ತಾಳಿಕೋಟೆ ತಾಲೂಕಿನ ಕೆಲವು ಗ್ರಾಂ ಪಂಚಾಯ್ತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಸಂದಾಯ ಮಾಡಲಾಗಿದೆ ತಾಳಿಕೋಟೆ ವ್ಯಾಪ್ತಿಯ ರೈತರಿಗೆ ಮತ್ತು ಇನ್ನೂ ಹಲವಾರು ಗ್ರಾಮಗಳ ರೈತರಿಗೆ ಪರಿಹಾರ ಸಂದಾಯವಾಗದ ಕಾರಣದಿಂದ ರೈತಾಪಿ ಜನರು ಕಂಗಾಲಾಗಿದ್ದಾರೆ ಜಮೀನುಗಳಲ್ಲಿ ಮಳೆ ಅಭಾವದಿಂದ ತೋಗರೆ ಬೆಳೆ ಸಂಪೂರ್ಣ ಒಣಗಿ ಹೋಗಿವೆ ಇದರಿಂದ ರೈತಾಪಿ ಜನರಿಗೆ ದಿಕ್ಕು ತೋಚದಂತಾಗಿ ಕೂಡಲೇ ಸಂಕಷ್ಟದಲ್ಲಿರುವ ರೈತರ ಆಶ್ರಯಕ್ಕೆ ಬರಲು ಯುನೈಟೆಡ್ ಇಂಡಿಯಾ ಇನ್ಸ್ಯೂರೇನ್ಸ್ ಕಂಪನಿಯವರು ಮುಂದಾಗಬೇಕು ಇದರಲ್ಲಿ ನಿರ್ಲಕ್ಷ ಭಾವನೆ ತಾಳುತ್ತಾ ಸಾಗಿದಲ್ಲಿ ಬೆಳೆ ವಿಮೆ ಪರಿಹಾರ ಮೊತ್ತದ ಜೊತೆಗೆ ಮಾನಸಿಕ ನೋವಿನ ಪರಿಹಾರಕ್ಕಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಮನವಿ ತಲುಪಿದ 15 ದಿನಗಳೊಳಗೆ ಕ್ರಮ ಕೈಗೊಳ್ಳಬೇಕೆಂದು ಏಚ್ಚರಿಸಿದರು.

ಶ್ರೀ ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಕತ್ರಿ ಭಜಾರ,  ಶಿವಾಜಿ ಸರ್ಕಲ್ ಮಾರ್ಗವಾಗಿ ತಾಲೂಕಾ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷ ನಾಗರಾಜ ಮೋಟಗಿ, ಉಪಾಧ್ಯಕ್ಷ ರಾಜು ಕೊಡಗಾನೂರ, ದೇವೇಂದ್ರ ಪೂಜಾರಿ, ಕಾಶಿನಾಥ ವಾಲಿಕಾರ, ಶಂಕರಸಿಂಗ್ ಹಜೇರಿ, ನಿಂಗನಗೌಡ ದೇಸಾಯಿ, ಮಹ್ಮದ ಚೋರಗಸ್ತಿ, ಎಸ್.ಬಿ.ಬಿಳೇಭಾವಿ, ಮಹ್ಮದ, ಶರಣಪ್ಪ, ಎಂ.ಎ.ಕುಂಭಾರ, ಎಸ್.ಎಂ.ಪೂಜಾರಿ, ಮೊದಲಾದವರು 

ಇದ್ದರು.