ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬೆನ್ನಲ್ಲೇ ಶ್ರೀನಿವಾಸ ಮಾನೆ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯ

ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬೆನ್ನಲ್ಲೇ  ಶ್ರೀನಿವಾಸ ಮಾನೆ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯ Demand to provide opportunity to Srinivas Mane amid possibility of state cabinet reshuffle

           ಹಾನಗಲ್  25: ರಾಜ್ಯ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಬೆನ್ನಲ್ಲೇ ಹಾನಗಲ್‌ಕ್ಷೇತ್ರದ ಶಾಸಕ, ಬೈ ಎಲೆಕ್ಷನ್‌ಎಕ್ಸಪರ್ಟ್‌ ಶ್ರೀನಿವಾಸ ಮಾನೆಅವರೂ ಸಹ ಸಂಪುಟ ಸೇರುವ ಸಾಧ್ಯತೆದಟ್ಟವಾಗಿದ್ದು, ಭವಿಷ್ಯದಲ್ಲಿ ಜಿಲ್ಲೆಯ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದಯುವ ನಾಯಕನಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕಾರ್ಯಕರ್ತರು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. 

ಈ ಹಿಂದೆ ಹಾನಗಲ್‌ಕ್ಷೇತ್ರ ಪ್ರತಿನಿಧಿಸಿದ್ದ ದಿ.ಸಿ.ಎಂ.ಉದಾಸಿ ಮತ್ತು ದಿ.ಮನೋಹರ ತಹಶೀಲ್ದಾರ್ ಅವರು ಸಹ ಸಚಿವರಾಗಿ ಕೆಲಸ ಮಾಡಿದ್ದಾರೆ. ಹಾವೇರಿಜಿಲ್ಲೆ ಮಾತ್ರವಲ್ಲದೇಉತ್ತರಕರ್ನಾಟಕ ಭಾಗದಲ್ಲಿಕಾಂಗ್ರೆಸ್ ಪಕ್ಷದ ಸಂಘಟನೆ ಬಲ ಪಡಿಸುವ ಸಾಮರ್ಥ್ಯ ಹೊಂದಿರುವಯುವ ನಾಯಕ ಶ್ರೀನಿವಾಸ ಮಾನೆಅವರಿಗೆ ಸಚಿವ ಸ್ಥಾನ ನೀಡಬೇಕುಎನ್ನುವದಿನೇ ದಿನೆ ಕೂಗು ಬಲವಾಗುತ್ತಿದೆ. 

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿಎರಡು ಬಾರಿ, ವಿಧಾನಸಭೆ ಸದಸ್ಯರಾಗಿ 2 ಬಾರಿಹಾನಗಲ್‌ಕ್ಷೇತ್ರವನ್ನುಶ್ರೀನಿವಾಸ ಮಾನೆಪ್ರತಿನಿಧಿಸುತ್ತಿದ್ದಾರೆ. ವಿಧಾನ ಪರಿಷತ್ ಮತ್ತು ವಿಧಾನಸಭೆ ಶಾಸಕರಾಗಿಒಟ್ಟು 4 ಬಾರಿಆಯ್ಕೆಯಾಗಿದ್ದಾರೆ. 

ದೇಶದ ನಾನಾ ರಾಜ್ಯಗಳಲ್ಲಿ ಚುನಾವಣೆಗಳ ಸಂದರ್ಭದಲ್ಲಿಕಾಂಗ್ರೆಸ್ ಪಕ್ಷದ ಯಶಸ್ಸಿಗೆ ಶ್ರೀನಿವಾಸ ಮಾನೆದುಡಿದಿದ್ದಾರೆ.ಕಳೆದ ವರ್ಷ ನಡೆದತೆಲಂಗಾಣ ವಿಧಾನಸಭಾಚುನಾವಣೆಯಲ್ಲಿಯೂ ಸಹ ಮಾನೆತಂತ್ರಗಾರಿಕೆ ಫಲ ತಂದುಕೊಟ್ಟಿದೆ.ಪಕ್ಷದ ಸಂಘಟನೆಯ ವಿಚಾರದಲ್ಲಿ ಸಹ ಹತ್ತು, ಹಲವು ರಾಜ್ಯಗಳಲ್ಲಿ ಎಐಸಿಸಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 

 ಹಾನಗಲ್‌ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿಜೆಪಿಯ ಸಿ.ಎಂ.ಉದಾಸಿ ಅವರು ನಿಧನ ಹೊಂದಿದಕಾರಣ 2021 ರಲ್ಲಿ ಹಾನಗಲ್‌ಕ್ಷೇತ್ರಕ್ಕೆ ಉಪ ಚುನಾವಣೆಎದುರಾಗಿತ್ತು. ಆ ಸಂದರ್ಭದಲ್ಲಿಜಿಲ್ಲೆಯ ಶಿಗ್ಗಾಂವಿ-ಸವಣೂರುಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದು ಚುನಾವಣೆಯನ್ನು ಭಾರೀ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಇಡೀ ಮಂತ್ರಿ ಮಂಡಲವೇ ಹಾನಗಲ್‌ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರೂ ಸಹ ಶ್ರೀನಿವಾಸ ಮಾನೆಗೆದ್ದು ಬೀಗಿದ್ದುಇತಿಹಾಸ..! 

ಒಂದುಅರ್ಥದಲ್ಲಿರಾಜ್ಯದಲ್ಲಿ ಕಳೆಗುಂದಿದ್ದ ಕಾಂಗ್ರೆಸ್ ಪಕ್ಷಕ್ಕೆಟಾನಿಕ್‌ತಂದುಕೊಟ್ಟಿದ್ದು ಹಾನಗಲ್ ಉಪ ಚುನಾವಣೆಯ ಗೆಲುವು ಎನ್ನುವುದರಲ್ಲಿಎರಡು ಮಾತಿಲ್ಲ. ಅದೇಉತ್ಸಾಹರಾಜ್ಯವ್ಯಾಪಿ ವಿಸ್ತರಿಸಿ 2023 ರ ಸಾರ್ವತ್ರಿಕಚುನಾವಣೆಯಲ್ಲಿಕಾಂಗ್ರೆಸ್ ವಿಜಯ ಪತಾಕೆ ಹಾರಿಸುವ ಮೂಲಕ ಅಧಿಕಾರದಗದ್ದುಗೆ ಹಿಡಿದಿದ್ದುಇತಿಹಾಸ. 


1978 ರಿಂದ ಹಾನಗಲ್‌ಕ್ಷೇತ್ರದಲ್ಲಿಕಾಂಗ್ರೆಸ್ ಪಕ್ಷದಿಂದ ಸತತವಾಗಿಟಿಕೆಟ್ ಗಿಟ್ಟಿಸಿದ್ದ ಮನೋಹರ ತಹಶೀಲ್ದಾರ್ ಅವರು ಸತತಎರಡು ಬಾರಿಒಮ್ಮೆಯೂಗೆದ್ದಿರಲಿಲ್ಲ. ಆದರೆ ಮಾನೆ ಈ ಸಾಧನೆ ಮಾಡಿದರು.2021 ರ ಉಪ ಚುನಾವಣೆಯಲ್ಲಿ ವಿಜಯದ ಮಾಲೆ ಧರಿಸಿದ್ದ ಅವರು 2023 ರ ಸಾರ್ವತ್ರಿಕಚುನಾವಣೆಯಲ್ಲಿಯೂಜನರ ವಿಶ್ವಾಸ ಉಳಿಸಿಕೊಂಡರು.ಇದುವರೆಗೂ ಹಾನಗಲ್‌ಕ್ಷೇತ್ರದಲ್ಲಿಅತೀ ಹೆಚ್ಚು ಮತಗಳ ಅಂತರದಿಂದಗೆದ್ದಿರುವ ಸಾಧನೆಯನ್ನೂ ಶ್ರೀನಿವಾಸ ಮಾನೆ ಮಾಡಿರುವುದು ವಿಶೇಷ. 

ಬೊಮ್ಮಾಯಿಗೆಠಕ್ಕರ್‌...: 

  2021 ರಲ್ಲಿ ಬಸವರಾಜ ಬೊಮ್ಮಾಯಿಅವರಿಗೆಠಕ್ಕರ್‌ಕೊಟ್ಟಿದ್ದ ಶ್ರೀನಿವಾಸ ಮಾನೆ 2024 ರಲ್ಲಿ ನಡೆದ ಶಿಗ್ಗಾಂವಿ-ಸವಣೂರುಕ್ಷೇತ್ರದ ಉಪ ಚುನಾವಣೆಯಲ್ಲಿ ಸಹ ಕೈಚಳಕ ತೋರಿಸಿದ್ದಾರೆ. ತಮ್ಮ ಆಪ್ತ ಯಾಸೀರಖಾನ್ ಪಠಾಣಅವರಿಗೆಟಿಕೆಟ್‌ಕೊಡಿಸುವಲ್ಲಿ ಯಶಸ್ವಿಯಾಗಿ ವಿನೂತನ ತಂತ್ರಗಾರಿಕೆಗಳ ಮೂಲಕ ಅವರನ್ನುಗೆಲ್ಲಿಸುವಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದು ಜನಜನಿತ. 

 ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028 ರ ವಿಧಾನಸಭೆಯ ಸಾರ್ವತ್ರಿಕಚುನಾವಣೆಯಲ್ಲಿ ಹಾವೇರಿಜಿಲ್ಲೆಯಲ್ಲಿಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಯುವಉತ್ಸಾಹಿ, ಸ್ಮಾರ್ಟ್‌ ವರ್ಕ್‌ ಮೂಲಕ ಜನಮನಗೆದ್ದಿರುವ ಶ್ರೀನಿವಾಸ ಮಾನೆಅವರಿಗೆ ಸಚಿವ ಸ್ಥಾನ ನೀಡಿದರೆ ಅನುಕೂಲ ಎನ್ನುವುದುಕಾರ್ಯಕರ್ತರ ಮಹಾದಾಶೆಯಾಗಿದೆ.