ಸ್ವಾಗತ ಕಮಾನಿನ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಿ ಪುರಸಭೆ ಅಧಿಕಾರಿಗ ಅಮಾನತ್ತುಗೂಳಿಸಿ ಒತ್ತಾಯ
Demand to provide compensation to the family of those who died in the Welcome Arch tragedy and susp
ಕಂಪಿ 22 : ಇತ್ತೀಚೆಗೆ ಕಂಪ್ಲಿ-ಕೋಟೆಯಲ್ಲಿರುವ ಸ್ವಾಗತ ಕಮಾನಿನ ನವೀಕರಣದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ 50 ಲಕ್ಷ ಪರಿಹಾರ, ಗಾಯಕೊಳಗಾದವರಿಗೆ ತಲಾ 25 ಲಕ್ಷ ಪರಿಹಾರ ನೀಡಬೇಕೆಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಬಿಎಲ್‌ಎ1 ಜಿ.ಶ್ರೀನಿವಾಸ ಆಗ್ರಹಿಸಿದರು. ಅವರು ಭಾನುವಾರ ಪಟ್ಟಣದ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ನಿವಾಸದ ತುಂಗಭದ್ರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಂಪ್ಲಿ ವ್ಯಾಪ್ತಿಯಲ್ಲಿ ಮೂರು ಸ್ವಾಗತ ಕಮಾನುಗಳಿವೆ.
ಸುಮಾರು 3.36 ಲಕ್ಷ ವೆಚ್ಚದಲ್ಲಿ ಕಮಾನುಗಳ ನವೀಕರಣಕ್ಕಾಗಿ ಅಂದಾಜು ಪಟ್ಟಿ ತಯಾರಿಸಿ ಪ್ರಭಾರ ಮುಖ್ಯಾಧಿಕಾರಿ ಮತ್ತು ಅಭಿಯಂತರರು ವಾರ್ತಾ ಮತ್ತು ಪ್ರಚಾರ ಇಲಾಖೆ ಮುಖಾಂತರ 2025ರ ನವೆಂಬರ್ 18ರಂದು ಟೆಂಡರ್ ಪ್ರಕಟಣೆ ನೀಡಿ, ಡಿಸೆಂಬರ್-3ರಂದು ಬೆಳಿಗ್ಗೆ 11ಗಂಟೆಗೆ ಟೆಂಡರ್ ಅರ್ಜಿ ಸಲ್ಲಿಸಲು ಕೊನೆ ದಿನ, ಸಂಜೆ ಅರ್ಜಿ ಸ್ವೀಕರಿಸುವ ಹಾಗೂ ಡಿ.4ರಂದು ಟೆಂಡರ್ ತೆರೆಯಲಾಗಿರುತ್ತದೆ. ಆದರೆ, ದಾಖಲೆಗಳ ಪರೀಶೀಲಿಸಿ ಗುತ್ತಿಗೆದಾರನಿಗೆ ಆದೇಶ ನೀಡುವ ಒಳಗಾಗಿ ಅಂದರೆ ಡಿ.4ರಂದೇ ಕಂಪ್ಲಿ-ಕೊಟ್ಟಾಲ್ ಸ್ವಾಗತ ಬೋರ್ಡ್ ನವೀಕರಣ ಕಾಮಗಾರಿ ಪೂರ್ಣಗೊಂಡಿರುತ್ತದೆ.
ಮತ್ತು ಕಂಪ್ಲಿ ಉತ್ಸವ ನೆಪದ ತರಾತುರಿಯಲ್ಲಿ ಸಕ್ಕರೆ ಕಾರ್ಖಾನೆ(ಫ್ಯಾಕ್ಟ್ರಿ) ಬಳಿಯ ವೆಲ್‌ಕಮ್ ಬೋರ್ಡ್ ನವೀಕರಣ ನಡೆದಿದೆ. ಇದು ಪೂರ್ವ ನಿಯೋಜಿತ ಕುತಂತ್ರವಾಗಿದೆ. ಫೆ.19ರಂದು ಕಂಪ್ಲಿ-ಕೋಟೆಯ ಸ್ವಾಗತ ಕಮಾನು ನವೀಕರಣ ವೇಳೆ ಕ್ರೇನ್ ಬೆಲ್ಟ್ ಕಟ್ಟಾಗಿ, ಓರ್ವ ವ್ಯಕ್ತಿ ಮೇಲೆ ಬಿದ್ದು ಮೃತಪಟ್ಟಿದ್ದಾನೆ. ಇಬ್ಬರಿಗೆ ಗಾಯಗಳಾಗಿವೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಪ್ರಮುಖ ಅಧಿಕಾರಿಗಳನ್ನು ಬಿಟ್ಟು, ಬೇರೆಯವರ ಹೆಸರನ್ನು ಸೇರಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಇಲ್ಲಿನ ಪುರಸಭೆ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ಕೂಡಲೇ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಕಿರಿಯ ಅಭಿಯಂತರಾದ ತೇಜಶ್ವಿನಿ, ರಾಮಚಂದ್ರ ಇವರನ್ನು ವಜಾಗೊಳಿಸಬೇಕು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು. ನಂತರ ಕಂಪ್ಲಿ ಮಂಡಲ ಯುವ ಮೋರ್ಚ ಉಪಾಧ್ಯಕ್ಷ ಎನ್.ಮನೋಜ್‌ಗೌಡ ಮಾತನಾಡಿ, ಸಂದರ್ಭದಲ್ಲಿ ಕಂಪ್ಲಿ ಮಂಡಲ ಕಾರ್ಯದರ್ಶಿ ಕೆ.ಪ್ರಶಾಂತಕುಮಾರ, ನಗರ ಘಟಕ ಉಪಾಧ್ಯಕ್ಷ ಎಂ.ಭಾಸ್ಕರ್, ಪ್ರಧಾನ ಕಾರ್ಯದರ್ಶಿಗಳಾದ ಬಸವ ಪ್ರಭು, ಕಟ್ಟೆ ವಿಶ್ವನಾಥ, ಕಾರ್ಯಕರ್ತರಾದ ಚನ್ನಪ್ಪ, ಜಿ.ಚೇತನ್, ಎಸ್.ಆರ್.ಕಾರ್ತಿಕ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 