ಶಾಸಕ ಬಸವರಾಜ ಶಿವಣ್ಣನವರ ಸಚಿವ ಸ್ಥಾನ ನೀಡಲು ಒತ್ತಾಯ

ಶಾಸಕ ಬಸವರಾಜ ಶಿವಣ್ಣನವರ ಸಚಿವ ಸ್ಥಾನ ನೀಡಲು ಒತ್ತಾಯ Demand to give ministerial position to MLA Basavaraja Shivanna

                ಬ್ಯಾಡಗಿ 25 :  ಕ್ಷೇತ್ರದ ಶಾಸಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ಶಿವಣ್ಣನವರಿಗೆ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿ ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದರು. ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತಕೋಟಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ಆರು ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಇದ್ದು ಪ್ರಸ್ತುತವಾಗಿ ಜಿಲ್ಲೆಯಲ್ಲಿ ಹಿರಿಯ ರಾಗಿರುವ ಕ್ಷೇತ್ರದ ಶಾಸಕರಾದ ಬಸವರಾಜ್ ಶಿವಣ್ಣನವರು ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿ ಅಧಿಕಾರ ಮಾಡಿದ್ದು ಸಾಕಷ್ಟು ಅನುಭವವನ್ನು ಹೊಂದಿರುವವರಾಗಿದ್ದಾರೆ ಹಾಗಾಗಿ ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.  ವಕೀಲರಾದ ಮುಖಂಡ ಡಿಎಚ್ ಬುಡ್ಡನ ಗೌಡ್ರು ಮಾತನಾಡಿ ಮತಕ್ಷೇತ್ರಕ್ಕೆ ಎಂದೋ ಸಚಿವ ಸ್ಥಾನ ನೀಡಬೇಕಿತ್ತು. ಕಾಲ ಕೂಡಿ ಬಂದಿರಲಿಲ್ಲ.

             ಈಗ ಕಾಲ ಕೂಡಿ ಬಂದಿದೆ. ಹೈಕಮಾಂಡ್ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು. ಮತದಾರರಿಗೆ ಗೌರವಿಸಲು ಹಿಂದುಳಿದ ಬ್ಯಾಡಗಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಮತ್ತು ಕ್ಷೇತ್ರದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ತರುವಲ್ಲಿ ಹಾಗೂ ಜನರ ಕಷ್ಟಗಳ ಸ್ಪಂದಿಸುವಲ್ಲಿ ಶಾಸಕರು ಮೇಲುಗೈ .ಜಿಲ್ಲೆಯಲ್ಲಿಯೇ ಹಿರಿಯರು ಅನುಭವಿಗಳು ಆಗಿರುವ ನಮ್ಮ ಶಾಸಕರಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕು.ಇಲ್ಲವಾದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲೆಬೇಕೆಂದು ಆಗ್ರಹಿಸಿದರು .ಹಿರೇ ಅಣಜಿ ಗ್ರಾಮದ ಮುಖಂಡ ಮಂಜನ ಗೌಡ ಲಿಂಗನಗೌಡ ಮಾತನಾಡಿ   ಹಿಂದೆಂದೂ ದೊರೆಯದ ಸಚಿವ ಸ್ಥಾನ ನಮ್ಮ ಶಾಸಕರಿಗೆ ನೀಡಿದರೆ ಇತಿಹಾಸ ದಾಖಲಾಗುತ್ತದೆ  ಸ್ಥಳೀಯವಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಮತ್ತು ಎಲ್ಲಾ ಇಲಾಖೆಗಳ ಅನುಭವ ಇರುವ  ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಮ್ಮ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲೇಬೇಕು ಎಂದು ಒತ್ತಾಯಿಸಿದರು, ಗ್ಯಾರಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ್ ಮಾತನಾಡಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅನುಭವಿರುವ ಶಾಸಕರು ಅಂದರೆ ನಮ್ಮ ಶಾಸಕರು.ಮತಕ್ಷೇತ್ರಕ್ಕೆ ಹಿಂದಿನಿಂದಲೂ ಸಚಿವ ಸ್ಥಾನ ಸಿಗದೆ ವಂಚಿತಗೊಂಡಿದೆ. 50 ವರ್ಷವಾದರೂ  ಸಚಿವ ಸ್ಥಾನ ಲಭಿಸಿರುವುದಿಲ್ಲ.

          ಈ ಭಾಗದ ಪ್ರಧಾನ ಗಣ್ಯವ್ಯಕ್ತಿಗಳು ಸಚಿವ ಸ್ಥಾನದಿಂದ ವಂಚಿತಗೊಂಡಿದ್ದಾರೆ. ಉತ್ತರ ಕರ್ನಾಟಕದ ಮೆಣಸಿನಕಾಯಿ ನಾಡು  ತಾಲೂಕು. ಸಜ್ಜನ ವ್ಯಕ್ತಿ ಬಸವರಾಜ ಶಿವಣ್ಣನವರ ಅವರಿಗೆ ಈ ಸರ್ಕಾರ ಸಚಿವ ಸ್ಥಾನ ನೀಡಲೇಬೇಕು ಎಂದು ಪಕ್ಷದ ವರಿಷ್ಠರಿಗೆ ಆಗ್ರಹಿಸಿದರು.ಮುಖಂಡ ಬಸವರಾಜ ಕೋಣನವರು ಮಾತನಾಡಿ ಹಾವೇರಿ ಜಿಲ್ಲೆಗೆ ಇಬ್ಬರು ಶಾಸಕರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ವಿಸ್ತರಣೆಯಲ್ಲಿ ಸಚಿವ ಸ್ಥಾನವನ್ನು ನೀಡಲೇಬೇಕು ಎಂದರು.ಸಂದರ್ಭದಲ್ಲಿ ಡಿ ಎಚ್ ಬುಡ್ಡನಗೌಡ್ರ.ಬಸಣ್ಣ ಕೋಣನವರ.ಜಗದೀಶ ಪೂಜಾರ, ಶಂಭನಗೌಡ ಪಾಟೀಲ, ಬೀರ​‍್ಪ ಬಣಕಾರ, ರಮೇಶ್ ಸುತ್ತಕೋಟಿ,ಮಂಜುನಗೌಡ ಲಿಂಗನಗೌಡ್ರ, ಚಿಕ್ಕಣ್ಣ ಹಾದಿಮನಿ, ನೀಲಗಿರಿಯಪ್ಪ ಕಾಕೋಳ್, ಬಸವರಾಜ ಬನ್ನಿಹಟ್ಟಿ, ವೀರನಗೌಡ ಪಾಟೀಲ, ಹಾಗೂ ಅನೇಕರು ಉಪಸ್ಥಿತರಿದ್ದರು.