ಅಕ್ರಮ ಮಾಧ್ಯ ಮಾರಾಟ ನಿಷೇಧಿಸುವಂತೆ ಒತ್ತಾಯ: ಎ ಕೆ ಮಲ್ಲಿಕಾರ್ಜುನ
ಬಳ್ಳಾರಿ 13: ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮದ್ಯ ಮಾರಾಟದಿಂದ ಉಂಟಾಗುತ್ತಿರುವ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತ ಮಹಿಳೆಯರು ಅಕ್ರಮ ಮದ್ಯ ಮಾರಾಟ ಬಂದ್ ಮಾಡಿಸುವಂತೆ ಎಮ್ಮಿಗನೂರು ಗ್ರಾಮದ ಜಡೇಶ ನಗರದಲ್ಲಿನ ಅಕ್ರಮ ಮಧ್ಯ ಮಾರಾಟ ಮಾಡುವವರ ಅಂಗಡಿಗಳ ಮುಂದೆ ಮಹಿಳೆಯರು ಅಬಕಾರಿ ಇಲಾಖೆ ವಿರುದ್ಧ ಇಡಿ ಶಾಪ ಹಾಕಿದ್ದಾರೆ.‘ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದು ಅಕ್ರಮ ವ್ಯವಹಾರಕ್ಕೆ ಅವರೇ ಸಾಥ್ ನೀಡುತ್ತಿದ್ದಾರೆ’ ಎಂದು ಮಹಿಳೆಯರು ಆರೋಪಿಸಿದ್ದಾರೆ.ಗೂಡ ಅಂಗಡಿಗಳ ಮುಂದೆ ಮಹಿಳೆಯರು ಜಮಾಯಿಸುತ್ತಿದ್ದಂತೆ. ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳಾದ ಉಷಾ ಯಂಡಿಗೇರಿ ನೇತೃತ್ವದ ತಂಡ ಧಾವಿಸಿ, ಅಂಗಡಿಗಳನ್ನು ಪರೀಶೀಲಿಸಿ ಅಕ್ರಮವಾಗಿ ಮಧ್ಯ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಸೂಚಿಸಿರುತ್ತಾರೆ. ಒಂದು ವೇಳೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸುವುದಾಗಿ ಸೂಚಿಸಿದರು. ಬಳ್ಳಾರಿಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಮಿತಿ ಮೀರಿದೆ. ನಮ್ಮ ಮಕ್ಕಳು ಮದ್ಯದ ಚಟಕ್ಕೆ ಬಿದ್ದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜತೆಗೆ ಸಣ್ಣ ವಯಸ್ಸಿನಲ್ಲೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಗ್ರಾಮದ ಮಹಿಳೆಯರು ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ.ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕನಿಷ್ಠ 6 ರಿಂದ 8 ಅಕ್ರಮ ಮದ್ಯದ ಮಾರಾಟ ಅಂಗಡಿಗಳಿವೆ. ಅನುಮತಿ ಪಡೆದ ಮದ್ಯದಂಗಡಿಯ ಮಾಲೀಕರೇ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಬಾರ್ಗಳಿಂದ ಖರೀದಿಸಿ, ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಮದ್ಯವು ಸ್ಥಳೀಯವಾಗಿ ಸಿಗುವುದರಿಂದ ಹೆಚ್ಚಿನ ಜನರು ಕುಡಿತಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಮಹಿಳೆಯರು ಅಬಕಾರಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.‘ಜಿಲ್ಲೆಯ ಹಳ್ಳಿಗಳಲ್ಲೆ? ಎಲ್ಲಾ ಸಮಯದಲ್ಲೂ ಮದ್ಯ ಸಿಗುವುದರಿಂದ ಯುವಕರು ಸೇರಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ದಾಸರಾಗುವುದರಿಂದ ಚಿಕ್ಕವಯಸ್ಸಿನಲ್ಲೆ? ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯ ಮುಖಂಡ ರಾಜಶೇಖರ್ ಗೌಡ ತಿಳಿಸಿದರು.‘ಇತ್ತಿಚೆಗೆ ಗ್ರಾಮೀಣದ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಮದ್ಯ ಸಿಗುತ್ತಿರುವುದರಿಂದ ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿಸುತ್ತಿದ್ದಾರೆ. ಇದರಿಂದಾಗಿ ಮನೆಗಳಲ್ಲಿ ಜಗಳ ಉಂಟಾಗಿ ಇಡೀ ಕುಟುಂಬವೇ ಬೀದಿ ಪಾಲು ಆಗುತ್ತಿದೆ’ ಎಂದು ಬಿಜೆಪಿ ಮುಖಂಡ ಜಡಿಸಿದ್ದ ಸ್ವಾಮಿ ಕೆಎಂ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳಾದ ಜಿ, ಶ್ರೀಧರ್ ಗ್ರಾಮದ ಮುಖಂಡರಾದ ನಾಗರಾಜ್ ರೆಡ್ಡಿ,ಮಾಬೂಸಾಬ್,ಈ ಬಾಲಪ್ಪ, ಅಗಸರ ಮಹೇಶ, ಮಲ್ಲಮ್ಮ, ಅಗಸರ ಶರಣಮ್ಮ,ಗಂಗಮ್ಮ,ಕುರುವಳ್ಳಿ ಈರಮ್ಮ ಸೇರಿದಂತೆ ಸ್ಥಳೀಯರು ಇದ್ದರು.ಕೊಟ್.01ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ.ಗ್ರಾಮದ ಮುಖಂಡ ಶಂಕರ್ ಎಚ್..02 ಗ್ರಾಮದ ಬಹುತೇಕ ವಾರ್ಡ್ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಜಡೇಶ ನಗರದ ಶಾಲಾ ಕಾಲೇಜು ಆವರಣದ ಮುಂದೆ ಅತಿ ಹೆಚ್ಚು ಅಕ್ರಮ ಮಧ್ಯ ಮಾರಾಟ ಜರುಗುತ್ತಿದ್ದು ಅಧಿಕಾರಿಗಳು ಕಡಿವಾಣ ಹಾಕಬೇಕು.