ರಾಜ್ಯಾದಂತ ತಮ್ಮ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ
Demand the state to provide their various basic facilities
ರಾಜ್ಯಾದಂತ ತಮ್ಮ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ
ಬೀಳಗಿ 12: ಗ್ರಾಮ ಆಡಳಿತಾಕಾರಿಗಳು ಮೂರು ದಿನಗಳಿಂದ ರಾಜ್ಯಾದಂತ ತಮ್ಮ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಿರುವದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೀವ್ರ ತೊಂದರೆಯಾಗಿದ್ದು ಅವರ ಬೇಡಿಕೆಗಳು ನ್ಯಾಯೋಚಿತವಾಗಿದ್ದು ತಕ್ಷಣ ಸರಕಾರ ಸ್ಪಂದಿಸಬೇಕೆಂದು ಅವರ ಹೋರಾಟ ಬೆಂಬಲಿಸಿ ಭಾರತೀಯ ಕಿಸಾನ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿ.ಪಿ.ಹಿರೇಮಠ ಮಾತನಾಡಿ ಗ್ರಾಮ ಆಡಳಿತ ಅಕಾರಿಗಳು ಪ್ರತಿಂೂಬ್ಬರ ಜನನದಿಂದ ಮರಣದವರಿಗೆ ಹಾಗೂ ಯಾವುದೇ ಕೃಷಿ ಚಟುವಟಿಕೆ ಕಾಗದ ಪತ್ರಗಳು ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುವಲ್ಲಿ ಸದಾ ಶ್ರಮಿಸುತ್ತಿದ್ದು ಕೇಂದ್ರ ಸ್ಥಾನದಲ್ಲಿ ಅವರಿಗೆ ಕಚೇರಿ ನಿರ್ಮಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ವಂಶ ವೃಕ್ಷ ಜಾತಿ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ ತಪಿಸ್ಥರಲ್ಲದ ಕಂದಾಯ ನೌಕರರ ಮೇಲೆ ಎಪ್‌ಐಆರ್ ದಾಖಲಿಸಿದೇ ತಪಿಸ್ಥ ಅರ್ಜಿದಾರರನ್ಮು ಹೊಣೆಗಾರರನ್ನಾಗಿಸಬೇಕು ಎಂದರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವನಗೌಡ ಪಾಟೀಲ ಮಾತನಾಡಿ ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ ತೋಟಗಾರಿಕೆ ಆಯಾ ಇಲಾಖೆಗಳಿಗೆ ವಹಿಸಬೇಕು ಹಾಗೂ ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯವನ್ನು ಮುಂದವರೆಸಬೇಕು ಎಂದರು.
ವಿಕಲಚೇತನರ ಮುಖಂಡ ಶೇಖರ ಕಾಖಂಡಕಿ ಮಾತನಾಡಿ ಮ್ಯುಟೇಶನ್ ಅವ ಹೆಚ್ಚಿಸಿ ಪ್ರೋಟೊಕಾಲದಿಂದ ಗ್ರಾಮ ಆಡಳಿತ ಅಕಾರಿಗಳನ್ನು ಕೈ ಬೀಡಬೇಕು ಗ್ರಾಮ ಆಡಳಿತ ಅಕಾರಿಗಳಿಗೆ ಜಾಬ್‌ಚಾರ್ಟ ನಿಗದಿವಪಡಿಸಬೇಕು ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 