ಭೂ ಒಡೆತನ ಯೋಜನೆ ಮತ್ತೆ ಜಾರಿಗೆ ಮಾಡಲು ಆಗ್ರಹಿಸಿ
Demand the re-implementation of the land ownership scheme
ಕೊಪ್ಪಳ 03 : ಮೌಲಾನಾ ಆಜಾದ್ ಶಾಲೆಗಳಿಗೆ ಸ್ವಂತ ಜಾಗ. ವ್ಯವಸ್ಥಿತ ಕಟ್ಟಡ ಖಾಯಂ ಶಿಕ್ಷಕರನ್ನು ನೇಮಕ. ಭೂ ಒಡೆತನ ಯೋಜನೆ ಮತ್ತೆ ಜಾರಿಗೆ.ರಾಜ್ಯದ ಶಾದಿ ಮಹೆಲಗಳ ಬಾಡಿಗೆ ಕಡಿಮೆ ಮಾಡಲು ಆಗ್ರಹಿಸಿ ರವಿವಾರ ಕೊಪ್ಪಳಕ್ಕೆ ಆಗಮಿಸಿದ್ದ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮತ್ತು ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗೌಸ್ ನೀಲಿ ಪ್ರತ್ಯಾಕ ಮೂರು ಮನವಿಗಳನ್ನು ಸಲ್ಲಿಸಿದರು.ಮನವಿಗಳಲ್ಲಿ ರಾಜ್ಯದಲ್ಲಿ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸ್ವಂತ ಜಾಗೆ ಮತ್ತು ವ್ಯವಸ್ಥಿತ ಕಟ್ಟಡ.ಖಾಯಂ ಶಿಕ್ಷಕರನ್ನು ನೇಮಕ ಮಾಡಿ.ಆಯಾ ಶಾಲೆಗಳಿಗೆ ತಲಾ ಒಬ್ಬರಂತೆ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕ (ಎಫ್.ಡಿ.ಸಿ.ಎ).ಆಟದ ಮೈದಾನ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಪಡೆಯಲು ಅಲ್ಪಸಂಖ್ಯಾತರ ಬಹುಮುಖ್ಯ ಪಾತ್ರ ವಹಿಸಿರುತ್ತದೆ. ಆದರೆ ಸರ್ಕಾರ ಯಾರಿಂದ ಮತ ಪಡೆದು ಅಧಿಕಾರಕ್ಕೆ ಬಂದಿದೆಯೋ ಅವರನ್ನೇ ನಿರ್ಲಕ್ಷಿಸುತ್ತ ಮತ್ತು ಮೂಗಿಗೆ ತುಪ್ಪ ಹಚ್ಚುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಅದಕ್ಕೆ ಬೇಕಾದ ಸ್ವಂತ ಜಾಗ.ಕಟ್ಟಡ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸದೆ. ಶಾಲೆ ಮಾತ್ರ ಪ್ರಾರಂಭಿಸಿ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ಬೋಧನೆಗೆ ಅತಿಥಿ ಶಿಕ್ಷಕರನ್ನು ಅವಲಂಬಿಸಬೇಕಾಗಿದೆ. ಅಲ್ಲದೆ ಮಕ್ಕಳು ಗುಣಮಟ್ಟದ ಶಿಕ್ಷಣ ಇಲ್ಲದೆ ಬಳಲುತ್ತಿದ್ದಾರೆ. ಅನೇಕ ಕಡೆ ಶಾಲಾ ಕಟ್ಟಡ ಇಲ್ಲದೆ ವಿದ್ಯಾರ್ಥಿ.ವಿದ್ಯಾರ್ಥಿನಿಯರಿಗೆ ಶೌಚಾಲಯ ಇಲ್ಲದೆ ಮಾನ ಮರ್ಯಾದೆ ಹರಾಜು ಹಾಕಿದೆ. ಕಟ್ಟಡ ಇರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರಿಂದ ನಡೆಸುತ್ತಿದ್ದು ಶೈಕ್ಷಣಿಕ ಗುಣಮಟ್ಟ ಕೊರತೆ ಇದೆ. ಅಗತ್ಯ ಇರುವ ಕಡೆ ಸ್ವಂತ ಜಾಗ ಕಟ್ಟಡ ಮತ್ತು ಆಟದ ಮೈದಾನ. ಪೂರ್ಣ ಪ್ರಮಾಣದ ಖಾಯಂ ಶಿಕ್ಷಕರನ್ನು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಎಲ್ ಕೆ ಜಿ ಯಿಂದ ದ್ವಿತೀಯ ಪಿಯುಸಿ ವರೆಗೆ ಇದ್ದು ಅದನ್ನು ವಿವಿಧ ತಾಂತ್ರಿಕ ಮತ್ತು ಇತರೆ ಪದವಿಗಳವರೆಗೆ ವಿಸ್ತರಿಸಬೇಕು. ಹಿಜಾಬ್ ಬಗ್ಗೆ ಕೆಲವು ಕಡೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಕಿರಿಕಿರಿ ಮಾಡುತ್ತಿರುವುದು ಕೇಳಿಬರುತ್ತಿವೆ.ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ತಾವು ಮೌಲಾನಾ ಆಜಾದ್ ಶಾಲೆಗಳಿಗೆ ಅನೀರೀಕ್ಷಿತ ಭೇಟಿ ನೀಡಿ ವಾಸ್ತವಾಂಶ ತಿಳಿದುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು. ಶಾದಿ ಮಹೆಲ್ ಬಾಡಿಗೆ ರೂ.3000 ಗೆ ಇಳಿಸಲು ಆಗ್ರಹ. ಕೊಪ್ಪಳ ನಗರಸಭೆ ಎದುರಿಗೆ ಇರುವ ಶಾದಿ ಮಹೆಲ್ ದುಬಾರಿ ಬಾಡಿಗೆ ಇದ್ದದ್ದನ್ನು ಕಡಿಮೆ ಮಾಡಬೇಕು. ಈಗ ಶಾದಿ ಮಹೆಲ್ ಬಾಡಿಗೆ ಹನ್ನೆರಡು ಸಾವಿರ ರೂಪಾಯಿಗಳ ದುಬಾರಿ ಬಾಡಿಗೆ ಪಡೆಯುತ್ತಿದ್ದಾರೆ. 1997ರ ದಶಕದಲ್ಲಿ ಮುಸ್ಲಿಮರ ಬಡತನದ ಆಳ ಅರಿತ ದೂರ ದೃಷ್ಟಿಯುಳ್ಳ ಮುಖಂಡರಲ್ಲೊಬ್ಬರಾಗಿದ್ದ ದಿ. ಶಬ್ಬೀರ್ ಹುಸೇನ್ ವರದಿ ಮೊದಲು ಧ್ವನಿ ಎತ್ತಿ ಬಡ ಮುಸ್ಲಿಮರಿಗೆ ಉಚಿತವಾಗಿ ಒದಗಿಸಲು ಶಾದಿ ಮಹೆಲ್ ನಿರ್ಮಾಣಕ್ಕೆ ಸಾಕಷ್ಟು ಹೋರಾಡಿದ ಪ್ರತಿಫಲವಾಗಿ ಕೊಪ್ಪಳ ನಗರದಲ್ಲಿ ಶಾದಿ ಮಹೆಲ್ ತಲೆ ಎತ್ತಿ ನಿಂತಿದೆ. ಕೊಪ್ಪಳ ನಗರದ ದುಡಿಯುವ ಬಡ ಮುಸ್ಲಿಮರ ಮನೆ ಮನೆಗಳಿಗೆ ತೆರಳಿ ಹತ್ತು ರೂಪಾಯಿಂದ ನೂರಾರು ರೂಪಾಯಿಗಳವರೆಗೆ ಚಂದಾ ಹಣ ಸಂಗ್ರಹಿಸಿ ಜಾಗವನ್ನು ನಗರಸಭೆಯಿಂದ ರಿಯಾಯಿತಿ ದರದಲ್ಲಿ ಖರೀದಿಸಿ. ಸರ್ಕಾರದಿಂದ ಆಯಾ ಯೋಜನೆಗಳಲ್ಲಿ ಅನುದಾನ ಪಡೆದು ಶಾದಿ ಮಹೆಲ್ ಕಟ್ಟಡ ನಿರ್ಮಾಣವಾಗಿದೆ. ಉಚಿತವಾಗಿ ಬಡ ಮಾಧ್ಯಮ ವರ್ಗದ ಮುಸ್ಲಿಮರ ಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗವಾಗಬೇಕಿತ್ತು. ಅದರ ಮೂಲ ಉದ್ದೇಶವೇ ಗಾಳಿಗೆ ತೂರಿ. ಆಡಳಿತ ಮಂಡಳಿ ರಚಿಸಿಕೊಂಡು ಸ್ಥಿತಿವಂತರು ಪದಾಧಿಕಾರಿಗಳಾಗಿ ಬಾಡಿಗೆ ವಿಪರೀತ ಏರಿಕೆ ಮಾಡಿದ್ದರಿಂದ ಬಡ ಹಾಗೂ ಮಾಧ್ಯಮ ವರ್ಗದ ಮುಸ್ಲಿಮರು ಶಾದಿ ಮಹೆಲ್ ದಿಂದ ವಂಚಿತರಾಗುತ್ತಿದ್ದಾರೆ.
ಮುಸ್ಲಿಮ್ ಮಹಿಳೆಯೊಬ್ಬರು ಶಾದಿ ಮಹೆಲ್ ಗಳ ಬಾಡಿಗೆ ದುಬಾರಿಯಾಗಿದ್ದು ಕಡಿಮೆ ಮಾಡಲು ಕೇಳಿದಾಗ ತಾವು ರಾಜ್ಯದ ಎಲ್ಲಾ ಶಾದಿ ಮಹೆಲ್ ಗಳ ಬಾಡಿಗೆ ರೂ.3000ಗಳಿಗೆ ಇಳಿಸಬೇಕು ಎಂದು ಸಾರ್ವಜನಿಕವಾಗಿ ಘೋಷಿಸಿ. ಆಕಸ್ಮಾತ್ ರೂ.3000 ಕ್ಕಿಂತ ಹೆಚ್ಚು ಬಾಡಿಗೆ ತೆಗೆದುಕೊಂಡರೆ ಅಂತಹ ಶಾದಿ ಮಹೆಲ್ ಆಡಳಿತ ಮಂಡಳಿಗಳನ್ನು ತಕ್ಷಣ ವಿಸರ್ಜಿಸುವದಾಗಿ ಹೇಳಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಅದು ಸಹ ಜಾರಿಗೆ ಬರಲಿಲ್ಲ. ಅಲ್ಲದೆ ನಾವು ಕೇಳಿಕೊಂಡಾಗ ಕೊಪ್ಪಳ ನಗರದ ಶಾದಿ ಮಹೆಲ್ ಬಾಡಿಗೆ ಹನ್ನೆರಡು ಸಾವಿರ ರೂಪಾಯಿಗಳು ಇದ್ದದ್ದನ್ನು ಮೂರು ಸಾವಿರ ರೂಪಾಯಿಗಳಿಗೆ ಇಳಿಸಲು ಅಧಿಕಾರಿಗಳಿಗೆ ಮೌಖಿಕ ಮತ್ತು ದೂರವಾಣಿ ಮೂಲಕ ಹೇಳಿ ಹೋಗಿದ್ದು, ಅಧಿಕಾರಿಗಳಿಗೆ ಭೇಟಿಯಾಗಿ ನಾವು ವಿಚಾರಿಸಿದರೆ ಸಚಿವರು ಮೌಖಿಕವಾಗಿ ಏನಾದರೂ ಹೇಳಬಹುದು ಆದರೆ ಲಿಖಿತವಾಗಿ ಆದೇಶ ಮಾಡಿದರೆ ಮಾತ್ರ ಬಾಡಿಗೆ ಕಡಿಮೆ ಮಾಡಿ ಜಾರಿ ಮಾಡಬಹುದು ಎಂದು ಉತ್ತರಿಸಿದ್ದಾರೆ. ತಾವು ತಕ್ಷಣ ರಾಜ್ಯದ ಮತ್ತು ಕೊಪ್ಪಳದ ಶಾದಿ ಮಹೆಲ್ಗಳ ದುಬಾರಿ ಬಾಡಿಗೆ ರೂ.3000/-ಕ್ಕೆ ಇಳಿಸುವಂತೆ ಲಿಖಿತ ಆದೇಶ ನೀಡುವ ಮೂಲಕ ಬಡ ಮುಸ್ಲಿಮರಿಗೆ ಅನುಕೂಲವಾಗಲು ಕೋರುತ್ತೇವೆ. ಅಲ್ಪಸಂಖ್ಯಾತರಿಗೆ ಭೂ ಒಡೆತನ ಯೋಜನೆ ಮತ್ತೆ ಜಾರಿಗೆ ಒತ್ತಾಯ.ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತರಲಾಗಿದ್ದ ಭೂ ರಹಿತ ಅಲ್ಪಸಂಖ್ಯಾತರಿಗೆ ಭೂ ಒಡೆತನ ಯೋಜನೆ ಮತ್ತೆ ಜಾರಿಗೆ ತರಲು ಕೋರುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ 2018.19ರ ಸಾಲಿನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ 250 ಗ್ರಾಮೀಣ ಪ್ರದೇಶದ ಭೂ ರಹಿತ ಕೃಷಿ ಕಾರ್ಮಿಕರಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆ.ಎಮ್.ಡಿ.ಸಿ.)ಯಿಂದ ಕೊಪ್ಪಳ ಜಿಲ್ಲೆಯ ಫಲಾನುಭವಿಗಳಿಗೆ ತಲಾ ಎರಡು ಎಕರೆಯಂತೆ ಒಟ್ಟು 500 ಎಕರೆ ಭೂಮಿಯನ್ನು ಉಳುಮೆ ಮಾಡಲು ಒದಗಿಸಲಾಗಿದೆ.ಒಂದು ಎಕರೆ ಉಚಿತ ಒಂದು ಎಕರೆ ಸಾಲದ ಮೇಲೆ ನೀಡಲಾಯಿತು. ತಲಾ ಒಂದು ಎಕರೆಗೆ 3 ಲಕ್ಷ ರೂಪಾಯಿಯಂತೆ 2 ಎಕರೆಗೆ 6 ಲಕ್ಷ ರೂಪಾಯಿಗಳು ಅದರಲ್ಲಿ 3 ಲಕ್ಷ ಸಬ್ಸಿಡಿ ಹಣವನ್ನು ಒದಗಿಸಲಾಗಿದೆ. ಆಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಖಮರುಲ್ ಇಸ್ಲಾಂ ಸಚಿವರಾಗಿದ್ದರು.
ನಂತರ ತಸ್ವೀರ್ ಸೇಟ್ ಅವರು ತಾವು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದಾಗ ಆ ಯೋಜನೆಯನ್ನು ಮುಂದುವರಿಸಿದರು.ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆ.ಎಮ್.ಡಿ.ಸಿ.) ಯಿಂದ ಭೂ ಒಡೆತನದ ಯೋಜನೆಯಡಿ ಕೃಷಿ ಭೂಮಿಯನ್ನು ಒದಗಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಕ್ಕದ ಗದಗ ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಲ್ಲಿ 105 ಫಲಾನುಭವಿಗಳಿಗೆ ತಲಾ ಎರಡು ಎಕರೆಯಂತೆ ಒಟ್ಟು 210 ಎಕರೆ ಭೂಮಿಯನ್ನು ಉಳುಮೆ ಮಾಡಲು ಒದಗಿಸಲಾಗಿದ್ದು. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ದೇಶದಲ್ಲಿ ಮಾದರಿಯಾಗಿದ್ದ ಯೋಜನೆ ಯಾಗಿದೆ. ತಾವು ಈ ಯೋಜನೆಯನ್ನು ಮತ್ತೆ ಜಾರಿಗೆ ತರುವ ಮೂಲಕ ಗ್ರಾಮೀಣ ಕೃಷಿ ಭೂಮಿ ರಹಿತ ಅಲ್ಪಸಂಖ್ಯಾತರ ವರ್ಗದ ರೈತರಿಗೆ ಕೃಷಿ ಭೂಮಿ ಒದಗಿಸುವಂತೆ ಕೋರುತ್ತೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಹಾಗೂ ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗೌಸ್ ನೀಲಿ ಮನವಿಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 