ವಿಶೇಷಚೇತನರ ಗೌರವಧನ ಹೆಚ್ಚಿಸಲು ಅಧಿವೇಶನದಲ್ಲಿ ಬೇಡಿಕೆ: ಶಾಸಕ ಪಠಾಣ

ವಿಶೇಷಚೇತನರ ಗೌರವಧನ ಹೆಚ್ಚಿಸಲು ಅಧಿವೇಶನದಲ್ಲಿ ಬೇಡಿಕೆ: ಶಾಸಕ ಪಠಾಣ Demand in session to increase honorarium for the differently-abled: MLA Pathana

ಶಿಗ್ಗಾವಿ 03: ವಿಕಲಚೇತನರಿಗೆ ಸದ್ಯ 1400 ಗೌರವಧನ ಬರುತ್ತಿದ್ದು ಅದನ್ನು ಮೂರು ಸಾವಿರಕ್ಕೆ ಹೆಚ್ಚಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.   ಪಟ್ಟಣದ ಸಂಗನಬಸವ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ, ಜಿಲ್ಲ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಸಂಸ್ಥೆಗಳು, ಜಿಲ್ಲಾ ವಿಕಲಚೇತನರ ಸಂಘ, ಮತ್ತು ಜಿಲ್ಲಾ ಅಂಗವಿಕಲರ ವಿಶೇಷ ಶಾಲಾ ನೌಕರರ ಸಂಘ, ರಾಜ್ಯ ಎಂಆರ್‌ಡಬ್ಲೂ, ವಿಆರ್‌ಡಬ್ಲೂ, ಯುಆಡಬ್ಲೂ ರಾಜ್ಯ ಒಕ್ಕೂಟ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇನರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಕಲಚೇತನರಿಗಾಗಿ ಸರಕಾರದಿಂದ ಬರುವಂತ ಎಲ್ಲ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂಬರುವ ಜನವರಿಯಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ನೂರಕ್ಕೂ ಹೆಚ್ಚು ವಿಕಲಚೇತನರ ವಾಹನಗಳನ್ನು ನೀಡುವುದಾಗಿ ತಿಳಿಸಿದರು.   

ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ವಿಕಲಚೇತನರು ದೇವರು ಮಕ್ಕಳು ನಾವು ಸಾಮಾನ್ಯ ಸಾಮಾನ್ಯ ಮನುಷ್ಯರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ. ಎಲ್ಲ ವಿಕಲಚೇನರಿಗೆ ಎಲ್ಲ ಇಲಾಖೆಗಳಲ್ಲಿ ವಿಶೇಷ ರೀತಿಯಲ್ಲಿ ಅವರ ಹಿತ ಕಾರ್ಯಗಳು ಆಗುವ ನಿಟ್ಟಿನಲ್ಲಿ ಸರಕಾರಗಳು ಕೆಲಸ ಮಾಡಬೇಕು ಎಂದರು. ವಿರಕ್ತಮಠದ ಸಂಗನಬಸವ ಶ್ರೀಗಳು ಆರ್ಶೀವಚನ ನೀಡಿದರು.  ಈ ಸಂದರ್ಭದಲ್ಲಿ ವಿಕಲಚೇತನರ ಜಿಲ್ಲಾ ಅಧ್ಯಕ್ಷ ಪುಟ್ಟಪ್ಪ ಜಲದಿ, ಉಪಾಧ್ಯಕ್ಷ ಮೌನೇಶ ಬಡಿಗೇರ, ಜಿಲ್ಲಾ ಗ್ಯಾರಂಟಿ ಸಮೀತಿ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕು ಗ್ಯಾರಂಟಿ ಸಮೀತಿ ಅಧ್ಯಕ್ಷ ಎಸ್‌.ಎಫ್ ಮಣಕಟ್ಟಿ, ಹೆಚ್‌.ಆರ್ ಶಿವಕುಮಾರ, ಮಹದೇವ ಹಡಪದ, ಮುಖಂಡರಾದ ಅಣ್ಣಪ್ಪ ಲಮಾಣಿ, ಶಿವಾನಂದ ಮ್ಯಾಗೇರಿ, ಅಧಿಕಾರಿಗಳಾದ ರೇವತಿ ಹೊಸಮಠ, ಆಶು ನಧಾಪ ಸೇರಿದಂತೆ ನೂರಾರು ವಿಕಲಚೇತನರು ಇದ್ದರು.