ನಿರಂಕಾರಿ ಸತ್ಸಂಗ ಮನೆ ಮನೆಗೆ ತಲುಪಿಸಿ

ನಿರಂಕಾರಿ ಸತ್ಸಂಗ ಮನೆ ಮನೆಗೆ ತಲುಪಿಸಿ Deliver Nirankari Satsang door to door

ಹುಕ್ಕೇರಿ  02: ನಿರಂಕಾರಿ ಸತ್ಸಂಗ ಮನೆ ಮನೆಗೆ ತಲುಪಿಸಿ - ಜ್ಞಾನ ಪ್ರಚಾರಕ ಮಾರುತಿ ಮೊರೆ.ನಿರಂಕಾರಿ ಮಂಡಳಿಯ ಸತ್ಸಂಗ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹುಕ್ಕೇರಿ ಸಂತ ನಿರಂಕಾರಿ ಸತ್ಸಂಗ  ಮಂಡಳಿ ಜ್ಞಾನ ಪ್ರಚಾರಕ ಮತ್ತು ಸಂಯೋಜಕ  ಮಾರುತಿ ಮೊರೆ ಹೇಳಿದರು.ಹುಕ್ಕೇರಿ ನಗರದ ಸಂತ ನಿರಂಕಾರಿ ಮಂಡಳಿಯ ವತಿಯಿಂದ ಮಾತಾ ಸುನಿತಾ ಮೊರೆ ಇವರ ಶ್ರದ್ದಾಂಜಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಕರ್ನಾಟಕ ಜೋನಲ್ ಇನ್ ಚಾರ್ಜ ಸುನೀಲ್ ಕುಮಾರ ರಾತ್ರಾಜಿ ಮಾತನಾಡಿ ಮನುಷ್ಯನ ಜಿವಿತಾವಧಿಯಲ್ಲಿ ಇನ್ನೊಬ್ಬರಿಗೆ ಸಹಾಯ ಸಹಕಾರ ಮತ್ತು ಸತ್ಸಂಗ ಗಳಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ಪಾವನ ಗೋಳಿಸಬೇಕು ಅದರಂತೆ  ಸಂತ ನಿರಂಕಾರ ಮಂಡಳಿಯ ಮಾತಾ ಸುನೀತಾ ದೇವಿಯು ಹುಕ್ಕೇರಿ ಯಲ್ಲಿ ಸತ್ಸಂಗ ಭವನ ನಿರ್ಮಿಸುವಲ್ಲಿ ಮತ್ತು  ಸತ್ಸಂಗ ಕಾರ್ಯಕ್ರಮಗಳನ್ನು ಯಸಸ್ವಿಯಾಗಿ ಪೂರೈಸಿ ಇಂದು ನಮ್ಮನ್ನಗಲಿ ದೇವ ರಾಗಿದ್ದಾರೆ

ಅವರ ಆತ್ಮಕ್ಕೆ ಭಗವಂತ ಶಾಂತಿ ನಿಡಲಿ ಎಂದರು (   )ನಂತರ ವಿವಿಧ ಭಾಗಗಳಿಂದ ಆಗಮಿಸಿದ ಜ್ಞಾನ ಪ್ರಚಾರಕರಿಂದ ನುಡಿ ನಮನಗಳು ಜರುಗಿದವು.ಹುಕ್ಕೇರಿ ಸತ್ಸಂಗ ಪ್ರಚಾರಕ ಮಾರುತಿ ಮೊರೆ ಮಾತನಾಡಿ ನಾವು ಸಂತ ನಿರಂಕಾರ ಮಂಡಳಿ ಬಾಬಾ ಮತ್ತು ಮಾತಾ ರವರಿಂದ ಪಡೆದ ಜ್ಞಾನ ವನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ,ನಮ್ಮ ಜೀವಿತಾವಧಿಯಲ್ಲಿ ನಾವು ಮಾಡಿದ ಪುಣ್ಯ ಕಾರ್ಯಗಳು ನಮ್ಮಗೆ ಶ್ರೀರಕ್ಷೆಯಾಗಲಿವೆ ಎಂದರು (    )ನಂತರ ದಿವಂಗತ ಮಾತಾ ಸುನಿತಾ ಮೊರೆಯವರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.ಈ ಸಂದರ್ಭದಲ್ಲಿ ಕಾರವಾರ ಜಿಲ್ಲೆಯ ಜ್ಞಾನ ಪ್ರಚಾರಕ  ?ವಿನೋದ್ ಕಲಸ್ಕರ , ಸೌಂದಲಗಾ ಮುಖಿ ?ಬಾಳಸಾಹೇಬ ಕಲಂತ್ರೆ,   ಹಾಗೂ ಹುಕ್ಕೇರಿ ಸಂತರಾದ ಬಿ ಆರ್ ಜಾಧವ್, ಸಿದ್ದೇಶ್ ಬೆನ್ನಾಡಿಕಾರ, ರಮೇಶ ಭೋವಿ, ಅಶೋಕ ಕಲಾಜ್,ಚಂದು ಗಂಗಣ್ಣವರ, ರವಿ ಕದಂ , ಸಂದೀಪ್ ಸೂರ್ಯವಂಶಿ ಹಾಗೂ ಹುಕ್ಕೇರಿ, ಚಿಕ್ಕೋಡಿ, ರಾಯಭಾಗ, ಬೆಳಗಾವಿ ತಾಲೂಕಿನ ದಡ್ಡಿ ,ಬಾವಾನ ಸೌದತ್ತಿ, ಮೊರಬ, ಭಾವಚಿ ಗ್ರಾಮಗಳ ಸಂತ ನಿರಂಕಾರಿ ಸತ್ಸಂಗ ಮಂಡಳಿ ಮುಖಿಗಳು, ಜ್ಞಾನ ಪ್ರಚಾರಕರು ಮೊರೆ ಅಭಿಮಾನಿಗಳು ಉಪಸ್ಥಿತರಿದ್ದರು.