ದೆಹಲಿ ವಿಧಾನಸಭೆ ಬಿಜೆಪಿ ತೆಕ್ಕೆಗೆ: ವಿಜಯೋತ್ಸವ
ರಾಯಬಾಗ 08: ಪಟ್ಟಣದ ಝೆಂಡಾಕಟ್ಟಿ ಬಳಿ ದೆಹಲಿ ವಿಧಾನಸಭೆ ಚುನಾವಣೆ ಬಿಜೆಪಿ ಗೆಲವು ವಿಜಯೋತ್ಸವದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಹಳಿಂಗಳಿ ಅರ್ಥವಿಲ್ಲದ ಗ್ಯಾರಂಟಿಗಳಿಂದ ಜನರು ಜಾಗೃತರಾಗಿದ್ದಾರೆ. ದೇಶದ ಅಭಿವೃದ್ಧಿ ಬಯಸಿದ ಜನರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದರು.
ಸದಾಶಿವ ಘೊರೆ್ಡ, ತಾಲ್ಲೂಕ ಅಧ್ಯಕ್ಷ ಪೃಥ್ವಿರಾಜ್ ಜಾಧವ, ಮಹೇಶ್ ಕರಮಡಿ, ಬಸವರಾಜ ಡೊಣವಾಡೆ, ಮಜ್ಜಿದ ಡಾಂಗೆ, ಮಹೇಶ್ ಕುಲಗುಡೆ, ಉಮೇಶ ಮಾಳಿ, ಕಲ್ಲಪ್ಪ ಸನದಿ, ಪ್ರಧಾನಿ ಉಪ್ಪಾರ, ಕೃಷ್ಣಾ ಲೋಹಾರ, ರಾಜು ಚೌಗುಲೆ, ಅಜೀತ ಮಾಂಗ, ಗೋಪಾಲ ಕೋಚೆರಿ. ಶಿವಪ್ಪ ನಾಯಿಕ, ಚಂದ್ರಕಾಂತ ಕುಸ್ತಿಗಾರ, ರೀತೀಶ ಅವಳೆ, ಮಹೇಶ ಸಾವಂತ ಮುಂತಾದವರು ಇದ್ದರು.