ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ, ಶೀಘ್ರವೇ ಮಹಾರಾಷ್ಟ್ರಕ್ಕೆ ನಿಯೋಗ: ಶಾಸಕ ರಾಜು ಕಾಗೆ..!

ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ, ಶೀಘ್ರವೇ ಮಹಾರಾಷ್ಟ್ರಕ್ಕೆ ನಿಯೋಗ: ಶಾಸಕ ರಾಜು ಕಾಗೆ..! Delegation to Maharashtra soon, demanding release of water into Krishna river: MLA Raju Kage..!

ಕಾಗವಾಡ 24 : ಹಿಪ್ಪರಗಿ ಬ್ಯಾರೆಜ್ ಬಾಗಿಲು ಮುರಿದ ಕಾರಣ ಕೃಷ್ಣಾ ನದಿಯಲ್ಲಿ ಬೇಸಿಗೆಯ ಮೊದಲೇ ಬತ್ತುವ ಭೀತಿ ಎದುರಾಗಿದ್ದು, ಕೂಡಲೇ ಕರ್ನಾಟಕದ ಕೃಷ್ಣಾ ನದಿ ಪಾತ್ರದ ಕಾಗವಾಡ, ಚಿಕ್ಕೋಡಿ, ಅಥಣಿ, ರಾಯಬಾಗ, ಕುಡಚಿ ಮತ್ತು ಜಮಖಂಡಿ ಕ್ಷೇತ್ರದ ಶಾಸಕರು ಹಾಗೂ ಸಂಸದರ ನಿಯೋಗ ದೊಂದಿಗೆ ಮಹಾರಾಷ್ಟ್ರ ಸರ್ಕಾರವನ್ನು ಭೇಟ್ಟಿ ಮಾಡಿ, ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಲಾಗುವುದೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. 

ಅವರು ಮಂಗಳವಾರ ದಿ. 24 ರಂದು ಕಾಗವಾಡ ಮತಕ್ಷೇತ್ರದ ಮದಭಾಂವಿ, ಕಲ್ಲೂತ್ತಿ ಹಣಮಾಪುರ, ನಾಗನೂರ ಪಿಎ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ, ಮಾತನಾಡುತ್ತಿದ್ದರು. ಕಾಗವಾಡ ಮತಕ್ಷೇತ್ರದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿಸಿ, ಅವುಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಕೃಷ್ಣಾ ನದಿ ತೀರದ ಸಾವಿರಾರೂ ಎಕರೆ ಸವಳು ಮತ್ತು ಜವಳು ಭೂಮಿಯನ್ನು ಫಲವತ್ತತೆ ಮಾಡಲು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡದೇ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಿ, ಯೋಜನೆ ಸಿದ್ಧಪಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದ ಅವರು, ಲಕ್ಷ್ಮಣ ಸವದಿ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಕಳೆದ 35 ವರ್ಷಗಳಿಂದ ಉತ್ತಮ ಗೆಳೆತನ ಹೊಂದಿದ್ದು, ನಮ್ಮ ಬೆಂಬಲಿಗರು ಮತ್ತು ಸವದಿ ಬೆಂಬಲಿಗರು ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಅದು ಶುದ್ಧ ಸುಳ್ಳು. ಯಾರೂ ಸಹ ಊಹಾಪೋಹಗಳಿಂದ ಗೊಂದಲಕ್ಕಿಡಾಗಬಾರದು ಎಂದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು. 

ಈ ಸಂದರ್ಭದಲ್ಲಿ ಪಿಡ್ಬೂ-್ಲಡಿ ಅಭಿಯಂತರ ಮಲ್ಲಿಕಾರ್ಜುನ ಮಗದುಮ್ಮ, ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಡಾ. ಬಸನಗೌಡ ಕಾಗೆ, ಮುಖಂಡರಾದ ಬಸನಗೌಡ ಪಾಟೀಲ(ಬಮ್ನಾಳ), ಕಾಂಗ್ರೆಸ್ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ, ಕೃಷ್ಣಾ ಶಿಂಧೆ, ಫಾರುಖ ಅಲಾಸ್ಕರ್, ಉದಯ ಅವಳೆ, ಗುತ್ತಿಗೆದಾರರಾದ ರಾಜು ಅಲಬಾಳ, ಶಿವಪುತ್ರ ನಾಯಕ, ಸಿದ್ದಾರೂಢ ನ್ಯಾಮಗೌಡ, ಅರ್ಜುನ ನಾಯಕ, ಅಮಸಿದ್ದ ಮಗಳೂರ, ತಿಪ್ಪಣ್ಣ ಭಜಂತ್ರಿ, ಅನೀಲ ಶಿಂಧೆ, ಬಸನಗೌಡ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.