ಕುಡಿಯುವ ನೀರಿನ ಕಾಮಗಾರಿ ವಿಳಂಬ: ಅಧಿಕಾರಿ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

ಕುಡಿಯುವ ನೀರಿನ ಕಾಮಗಾರಿ ವಿಳಂಬ: ಅಧಿಕಾರಿ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ Delay in drinking water works: Clash between officials, villagers

ಕುಡಿಯುವ ನೀರಿನ ಕಾಮಗಾರಿ ವಿಳಂಬ: ಅಧಿಕಾರಿ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ 

ಸಂಬರಗಿ 02: ಹಲ್ಯಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ವಿಳಂಬ ಹಾಗೂ ಕಾಮಗಾರಿ ಕಳಪೆ ಮಟ್ಟದ್ದು ಇದ್ದು, ಪರೀಶೀಲನೆ ಮಾಡಲು ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಅಧಿಕಾರಿಗಳ ಗಾಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಾಮಕಿ ನಡೆಯಿತು. ಪೋಲಿಸರ ಮಧ್ಯಸ್ಥಿಕೆಯಿಂದ ವಾತಾವರಣ ತಿಳಿಗೊಂಡಿತು.  

ಹಲ್ಯಾಳ ಗ್ರಾಮಕ್ಕೆ 1.60ಕೋಟಿ ರೂಪಾಯಿ ಜಲ ಜೀವನ ಶುದ್ಧ ಕುಡಿಯುವ ನೀರಿನ ಕಾಮಗಾರಿ ಪ್ರಾರಂಭವಿದ್ದು, ದಲಿತರ ಓಣಿಯಲ್ಲಿ ಸರಿಯಾಗಿ ಕಾಮಗಾರಿ ನಡೆಯದ ಕಾರಣ ದಲಿತ ಮುಖಂಡ ನ್ಯಾಯವಾದಿಗಳು ಗೌತಮ ಬನಸೋಡೆ ಇವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ಓಣಿಯಲ್ಲಿ ರಸ್ತೆಯ ಮೇಲೆ ತೆಗ್ಗುಗುಂಡಿ ಬಿದ್ದು, ಜನರಿಗೆ ಸಂಚಾರ ಮಾಡಲು ತೊಂದರೆಯಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ವೇಳೆ ಚಿಕ್ಕೋಡಿ ವಿಭಾಗದ ಕುಡಿಯುವ ನೀರಿನ ಯೋಜನೆಯ ಮುಖ್ಯ ಅಭಿಯಂತರರಾದ ರಾಮಚಂದ್ರ ರಾವ್ ಹಾಗೂ ಅಥಣಿ ವಲಯದ ಅಧಿಕಾರಿಯಾದ ರವೀಂದ್ರ ಮೂರಗಾಲಿ ಇವರು ಭೇಟಿ ನೀಡಿದ ನಂತರ ಗ್ರಾಮಸ್ಥರು ಮುತ್ತಿಗೆ ಹಾಗಿ ತರಾಟೆ ತೆಗೆದುಕೊಂಡರು. ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ ಏಕೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜತ್ತಜಾಂಬೋಟಿ ಹಲ್ಯಾಳ ಗ್ರಾಮದಲ್ಲಿ ರಸ್ತೆ ತಡೆಮಾಡಿ ಪ್ರತಿಭಟನೆ ನಡೆಸಿದರು.  

ಈ ವೇಳೆ ಅಧಿಕಾರಿ ತಮ್ಮ ಗ್ರಾಮದ ಎಲ್ಲಾ ಕೆಲಸವನ್ನು ನಿಗದಿತ ಅವಧಿಯಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ಪೂರ್ಣಗೋಳಿಸಲಾಗುವುದು ಎಂದು ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಈ ವೇಳೆ ಸಂತೋಷ ಕಾಂಬಳೆ, ಮುದಕಣ್ಣ ಶೇಗುಣಸಿ, ಸಚಿನ ಕಾಂಬಳೆ, ರಾಕೇಶ ಶಿಂಗೆ ಇನ್ನೀತರು ಉಪಸ್ಥಿತ ಇದ್ದರು.  

ಈ ಕುರಿತು ನ್ಯಾಯವಾಧಿ ಹಾಗೂ ಮಾನವ ಹಕ್ಕು ಹೋರಾಟಗಾರ ಗೌತಮ ಬನಸೋಡೆ ಮಾತನಾಡಿ ತಾಲೂಕಿನಲ್ಲಿರುವ ಜಲ ಜೀವನ ಕುಡಿಯುವ ನೀರಿನ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಅದನ್ನು ತನಿಕೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.