ಜೂನ್ 22ರಿಂದ ಕಲ್ಮೇಶ್ವರ ದೇವಾಲಯದಲ್ಲಿ ದೇವತಾ ಪ್ರತಿಷ್ಠಾಪನೆ : ಪ್ರಚಾರ ಸಾಮಗ್ರಿ ಬಿಡುಗಡೆ

ಜೂನ್ 22ರಿಂದ ಕಲ್ಮೇಶ್ವರ ದೇವಾಲಯದಲ್ಲಿ ದೇವತಾ ಪ್ರತಿಷ್ಠಾಪನೆ : ಪ್ರಚಾರ ಸಾಮಗ್ರಿ ಬಿಡುಗಡೆ Deity installation at Kalmeshwara Temple from June 22nd: Promotional materials released

ಕುಂದರಗಿ 14: ಜೀರ್ಣೋದ್ದಾರಗೊಂಡ ಐತಿಹಾಸಿಕ ಕಲ್ಮೇಶ್ವರಢ ದೇವಸ್ಥಾನ ವಾಸ್ತು ಹೋಮ ಹಾಗೂ ದೇವತಾ ಪ್ರತಿಷ್ಠಾಪನೆಯನ್ನು ದಿ. 22 ರಿಂದ 24 ವರೆಗೆ ಜರುಗಲಿದ್ದು, ಸ್ಥಳೀಯ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ವಿಪ್ರಸಮಾಜದ ಬಾಂಧವರ ಸಮಕ್ಷಮದಲ್ಲಿ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಾಲಯ ಮತ್ತು ಚಿಕ್ಕರಾಮಲಿಂಗೇಶ್ವರ ದೇವಸ್ಥಾನಗಳು ಅಂದಾಜು 800 ವರ್ಷಗಳಷ್ಟು ಹಳೆಯ ವಾಸ್ತುಶಿಲ್ಪವನ್ನು ಹೊಂದಿವೆ. ಕಾಲ ಸಂದರ್ಭಕ್ಕೆ ಸಿಕ್ಕು ಶಿಥಿಲಗೊಂಡಿವೆ. ಆದರೆ ಈಗ ಕಲ್ಮೇಶ್ವರ ದೇವಸ್ಥಾನ ಮತ್ತೆ ಎದ್ದು ನಿಂತಿದೆ. 

 ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪವನ್ನು ಹೊಂದಿರುವ ಕಲ್ಮೇಶ್ವರ ದೇವಸ್ಥಾನಕ್ಕೆ ಅದರದ್ದೇ ಆದ ವಿಶೇಷತೆ ಇದ್ದು, ಈ ದೇವಾಲಯದ ಉದ್ಘಾಟನಾ ಕಾರ್ಯಕ್ರಮಗಳು ಹಾಗೂ ದೇವತಾ ಪ್ರತಿಷ್ಠಾಪನೆಗಳು ವಿಜೃಂಭಣೆಯಿಂದ ನಡೆಯಲಿವೆ. ಇಂಥ ಪವಿತ್ರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಿ ಕೃತಾರ್ಥರಾಗಬೇಕು ಎಂದು ಹೇಳಿದರು. ವಿಪ್ರ ಸಮಾಜದ ಹಿರಿಯರಾದ ಪ್ರಾಣೇಶಾಚಾರ್ಯ ಕುಂದರಗಿ ಮಾತನಾಡಿ, ಕಲ್ಮೇಶ್ವರ ದೇವರ ದೇವಸ್ಥಾನದ ವಾಸ್ತು ಹೋಮ ಹಾಗೂ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮ ಮೂರು ದಿನಗಳ ನಡೆಯುವುದು, ಜಿಲ್ಲೆ ತಾಲೂಕು ಸುತ್ತಮುತ್ತಲಿನ ಗ್ರಾಮಗಳಿಂದ ಸ್ವಾಮೀಜಿಗಳು ರಾಜಕೀಯ ಮುಖಂಡರು ಭಾಗವಹಿಸುವವರು.