ಕನ್ನಡ ಪಠ್ಯಪುಸ್ತಕ ವಿಲ್ಲದೆ ಪದವಿ ವಿದ್ಯಾರ್ಥಿಗಳ ಪರದಾಟ: ಪಠ್ಯಪುಸ್ತಕ ವಿಳಂಬ ಖಂಡಿಸಿ, ಕೂಡಲೇ ವಿತರಣೆಗೆ ಎಸ್‌ಎಫ್‌ಐ ಆಗ್ರಹ
Degree students struggle without Kannada textbooks: SFI condemns textbook delay, demands immediate
ಹಾವೇರಿ 12 : ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಕಳೆದರು ಕನ್ನಡ ಭಾಷೆಯ ಬೆಸ್ ಸೆಮಿಸ್ಟರ್ ಪಠ್ಯಪುಸ್ತಕ ವಿಳಂಬ ನೀತಿಯನ್ನು ಖಂಡಿಸಿ, ಕೂಡಲೇ ಪಠ್ಯಪುಸ್ತಕ ಬಿಡುಗಡೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರ ಪ್ರಾಂಶುಪಾಲರಾದ ಡಾ. ಫರ್ಜಾನಾ ಪಠಾಣ ಅವರ ಮೂಲಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಪದವಿ ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಕನ್ನಡ ಪಠ್ಯ ಪುಸ್ತಕ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಪಠ್ಯ ಪುಸ್ತಕದ ವಿಳಂಬದಿಂದ ಉಪನ್ಯಾಸಕರು ಜನರಲ್ ವಿಷಯಗಳ ಬಗ್ಗೆ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿ ಪ್ರಕಾರವಾಗಿ ಇನ್ನು ಒಂದು ವಾರದನಂತರ ಕಿರು ಪರೀಕ್ಷೆ ಪ್ರಾರಂಭವಾಗಬೇಕು ಆದರೆ ಪಠ್ಯಪುಸ್ತಕದ ಪಿಡಿಎಫ್ ಸಹಿತವು ಆದರೂ ಲಭ್ಯವಿಲ್ಲದೆ ಯಾವ ಪಠ್ಯಕ್ರಮ (ಸಿಲೆಬಸ್) ಓದಬೇಕು ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಪ್ರತಿಬಾರಿಯು ಯಾವುದಾದರೂ ಒಂದು ಗೊಂದಲದಲ್ಲಿ ವಿದ್ಯಾರ್ಥಿಗಳನ್ನು ತಳುವ ವ್ಯವಸ್ಥೆ ರೂಢಿಗತವಾಗಿ ಬರುತ್ತಿದೆ. ಈ ವ್ಯವಸ್ಥೆ ನಿಲ್ಲಬೇಕು. ಇದರಿಂದ ಅಭ್ಯಾಸಕ್ಕೆ ಬಾರಿ ಹೊಡೆತ ಬಿಳುತ್ತದೆ ಕೂಡಲೇ ಎಚ್ಚೆತುಕೊಂಡು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಅಧಿಕೃತ ಪಠ್ಯಪುಸ್ತಕ (ಸಿಲೆಬೆಸ್) ಬಿಡುಗಡೆ ಮಾಡಿ ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು ನೀಡಲು ಮುಂದಾಗದಿದ್ದಾರೆ
ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಹಾವೇರಿ ವಿಶ್ವವಿದ್ಯಾಲಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಬಾರಿ ಪದವಿ ವಿದ್ಯಾರ್ಥಿಗಳಿಗೆ ಬಾರಿ ಅನ್ಯಾಯವಾಗುತ್ತಿದೆ. ಹೀಗೆ ಹಿಂದೆ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಗಳಲ್ಲಿ, ಪಠ್ಯಕ್ರಮ ಸಂಪೂರ್ಣ ವ್ಯವಸ್ಥಿತವಾಗಿ ನಡೆಯಲಿಲ್ಲ, ಈಗ ಪಠ್ಯಕ್ರಮ, ಪಠ್ಯಪುಸ್ತಕ ಮುದ್ರಣವಾಗದೆ ಕನ್ನಡ ಭಾಷೆಯ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ. ಹೀಗೆ ನಿರಂತರ ಮುಂದುವರಿದರೆ ಸೆಮಿಸ್ಟರ್ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ವೈಷ್ಣವಿ, ಹರ್ಷ ಮೊಗಲಕಟ್ಟಿ, ಗೀರಿಜಾ ಎನ್, ಕವಿತಾ ಗೆಜ್ಜಿಹಳ್ಳಿ, ಭೀಮಣ್ಣ ಕಂಬಳಿ, ಪಲ್ಲವಿ ಗೆಜ್ಜಿಹಳ್ಳಿ, ದಿಳೇಪ್ಪ, ಪ್ರೇಮಕುಮಾರ್ ಲಮಾಣಿ, ನಾಗರಾಜ, ಆಕಾಶ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 