ಸನಾತನ ಹಿಂದೂ ಧರ್ಮದ ರಕ್ಷಣೆ; ಸಂತಶ್ರೇಷ್ಟರಿಗೆ ಪೂಜ್ಯ ಸ್ಥಾನ ನೀಡುವುದೇ ಕಾಂತ್ರಿವೀರ ಬ್ರಿಗೆಡ್‌ನ ಉದ್ದೇಶವಾಗಿದೆ
ಕಾಗವಾಡ 28: ನಮ್ಮ ದೇಶದಲ್ಲಿ ಸನಾತನ ಹಿಂದೂ ಧರ್ಮ ಉಳಿಯಬೇಕು. ಮಹಿಳರಿಗೆ ಗೌರವ ಸಿಗಬೇಕು. ಗೋ ಮಾತೆಯನ್ನು ರಕ್ಷಿಸಬೇಕು. ಹಗಲಿರುಳು ಸನಾತನ ಧರ್ಮಕ್ಕಾಗಿ ಶ್ರಮಿಸುತ್ತಿರುವ ಸಂತ ಶ್ರೇಷ್ಠರಿಗೆ ಪೂಜ್ಯ ಸ್ಥಾನ ದೊರೆಯಬೇಕೆಂಬ ಮಹಾದಾಸೆಯೇ ನಮ್ಮ ಕ್ರಾಂತೀವೀರ ಬ್ರಿಗೇಡ್‌ನ ಮುಖ್ಯ ಉದ್ದೇಶವಾಗಿದೆಯೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರ್ಪ ಹೇಳಿದ್ದಾರೆ. ಅವರು, ಸೋಮವಾರ ದಿ. 27 ರಂದು ತಾಲೂಕಿನ ಕೌವಲಗುಡ್ಡ ಕರಿಯೋಗ ಸಿದ್ದಾಶ್ರಮದಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಕಾಂತ್ರಿವೀರ ಬ್ರಿಗೇಡ್‌ನ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪೆ.04 ರಂದು ಬಸವನ ಬಾಗೇವಾಡಿಯಲ್ಲಿ ಜರಗುವ ಕಾರ್ಯಕ್ರಮದಲ್ಲಿ 1008 ವಿವಿಧ ಸ್ವಾಮೀಜಿಗಳ ಪಾದಪೂಜೆ ಹಾಗೂ ಕ್ರಾಂತೀವೀರ ಬ್ರಿಗೇಡ್‌ನ ಬೃಹತ್ ಸಮಾವೇಶ ನಡೆಯಲಿದ್ದು, ಹೆಣ್ಣು ಮಕ್ಕಳನ್ನು ಗೌರವಿಸುವುದು. ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆಗೊಳಿಸಲು ಶ್ರಮಿಸುವುದು ಮತ್ತು ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನದ ಅರ್ಚಕರಿಗೆ ಪೂಜಾ ಪದ್ಧತಿ, ಮಂತ್ರಗಳ ಬಗ್ಗೆ ನುರಿತ ವಿದ್ವಾಂಸರಿಂದ ಬೋಧನೆ ಮಾಡುವುದು ನಮ್ಮ ಬ್ರಿಗೆಡ್‌ನ ಮೂಲ ಉದ್ದೇಶವಾಗಿದೆ ಎಂದರು. ದಿವ್ಯ ಸಾನಿದ್ಯವನ್ನು ಕವಲಗುಡ್ಡ ಸಿದ್ಧಾಶ್ರಮದ ಪ.ಪೂ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ವಹಿಸಿ, ಮಾತನಾಡಿತ್ತಾ, ಕ್ರಾಂತೀವೀರ ಬ್ರಿಗೇಡ್ ಯಾವುದೇ ಜಾತಿ ಪಕ್ಷಗಳಿಗೆ ಸೀಮಿತವಾಗಿಲ್ಲ. ಎಲ್ಲಾ ಧರ್ಮದ ಹಾಗೂ ಪಕ್ಷದವರು ಇದರಲ್ಲಿ ಭಾಗಿಯಾಗಿಬೇಕು. ಈ ದೇಶದಲ್ಲಿ ಸನಾತನ ಹಿಂದೂ ಧರ್ಮ ಉಳಿಯಬೇಕಾದರೆ ಎಲ್ಲರೂ ಕ್ರಾಂತೀವೀರ ಬ್ರಿಗೇಡ್ ಜೊತೆ ಕೈ ಜೋಡಿಸಿ, 4ರಂದು ಬಸವಣಬಾಗೇವಾಡಿಯಲ್ಲಿ ನಡೆಯುವ ಬೃಹತ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕುಎಂದರು. ಈ ವೇಳೆ ಹತ್ತೂರಿನ ಬನಸಿದ್ಧ ಮಹಾರಾಜರು, ನಿಪನಾಳದ ಶ್ರೀಗಳು, ಮಾಜಿ ಜಿ.ಪಂ. ಸದಸ್ಯ ಸಿದ್ಧಪ್ಪಾ ಮುದಕ್ಕನ್ನವರ, ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಅಶೋಕ ಲಿಂಬಿಗಿಡದ, ಶಿದರಾಯ ಕಾಳೇಲಿ, ಸದಾಶಿವ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿವಸಿದ್ಧ ಲಾಳಿ ಸ್ವಾಗತಿಸಿದರು. ಅಶ್ವಥ ಪೂಜಾರಿ ನಿರೂಪಿಸಿದರು. ಎಂ.ಎನ್. ಗಸ್ತಿ ವಂದಿಸಿದರು.