ಧಾರವಾಡ 14: ಹಲವಾರು ವರ್ಷಗಳ ಕಾರ್ಮಿ ಕ ಹೋರಾಟಗಳ ಫಲವಾಗಿ ಪಡೆದಿರುವ ಕಾರ್ಮಿ ಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತ ಇಂದಿನ ಕೇಂದ್ರ ಸರ್ಕಾ ರ ಬಂಡವಾಳಗಾರರ ಪರವಾಗಿ ಕಾರ್ಮಿ ಕ ಕಾನೂನಿಗೆ ತಿದ್ದುಪಡಿ ತರುತ್ತಿದ್ದು ಇದನ್ನು ಕಾರ್ಮಿ ಕರೆಲ್ಲರೂ ಒಗ್ಗಟ್ಟಾಗಿ ಸೋಲಿಸಬೇಕು" ಎಂದು ಎಐಯುಟಿಯುಸಿ ಕರ್ನಾ ಟಕ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ ಕರೆ ನೀಡಿದರು.
ಅವರು ಇಂದು ನಗರದ ಕರ್ನಾ ಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ನಡೆದ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕೇಂದ್ರ ಕಾಮರ್ಿಕ ಸಂಘಟನೆಯ ಪ್ರಥಮ ಧಾರವಾಡ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಅಸಂಘಟಿತ ವಲಯದ ಕಾರ್ಮಿ ಕರು ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಮತ್ತೊಂದೆಡೆ ಸಂಘಟಿತ ವಲಯಗಳು ಮತ್ತು ಸಕರ್ಕಾ ರಿ ಉದ್ಯೋಗದಲ್ಲಿರುವವರೂ ಇಂದು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಕೇಂದ್ರ ಸಕರ್ಕಾ ರವು ಸರ್ಕಾ ರಿ ಸಂಸ್ಥೆಗಳಾದ ಬಿ.ಎಸ್.ಎನ್.ಎಲ್., ರೈಲ್ವೆ, ರಕ್ಷಣಾ ಇಲಾಖೆಯ ವಿವಿಧ ಅಂಗಗಳು ಸೇರಿದಂತೆ ಹಲವಾರು ಉದ್ಯಮಗಳಲ್ಲಿ ಉದ್ಯೋಗ ಕಡಿತ ಮಾಡಲಾರಂಭಿಸಿದೆ ಮತ್ತು ಕಾಪರ್ೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಇದರಿಂದ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂದು ಇಡೀ ಬಂಡವಾಳಶಾಹಿ ವ್ಯವಸ್ಥೆ ತೀವ್ರ ಬಿಕ್ಕಟ್ಟಿನಲ್ಲಿದೆ. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಿಂದ ಮಾತ್ರವೇ ಈ ಎಲ್ಲಾ ಬಿಕ್ಕಟ್ಟು ಕೊನೆಯಾಗಲು ಸಾದ್ಯ. ಆದ್ದರಿಂದ ಸಮಾಜವಾದಿ ಭಾರತವನ್ನು ಕಟ್ಟಲು ಕಾಮರ್ಿಕರು ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಅವರು ಮಾತನಾಡಿ ದುಡಿಯುವ ಜನ ಹಸಿವು, ಬಡತನದಿಂದ ಸಾಯುತ್ತಿದ್ದಾರೆ. ಇದನ್ನು ಕಾರ್ಮಿ ಕರು, ದುಡಿಯುವವರು ಅರ್ಥೈ ಸಿಕೊಂಡು ನಮ್ಮ ಹಕ್ಕುಗಳಿಗೋಸ್ಕರ ಸರ್ಕಾ ರಗಳ ವಿರುದ್ಧ ಸಿಡಿದೇಳಬೇಕು. ನಾವು ಕಾರ್ಮಿ ಕರು ಬಹುಸಂಖ್ಯಾತರು, ನಮ್ಮನ್ನು ಶೋಷಿಸುತ್ತಿರುವ ಬಂಡವಾಳಗಾರರು ಬೆರಳೆಣಿಕೆಯಷ್ಟು. ಈ ಅಸಮಾನತೆಯ ವಿರುದ್ಧ ಒಗ್ಗಟ್ಟಾಗಿ ಸಂಧಾನಾತೀತ ಕ್ರಾಂತಿಕಾರಿ ಸಂಘಟನೆ ಎಐಯುಟಿಯುಸಿ ನೇತೃತ್ವದಲ್ಲಿ ಭಲಿಷ್ಠ ಕಾರ್ಮಿ ಕ ಹೋರಾಟಗಳನ್ನು ಬೆಳೆಸುತ್ತ ಮುಂದಿನ ದಿನಗಳಲ್ಲಿ ಕಾರ್ಮಿ ಕರು ಕ್ರಾಂತಿಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಎಐಯುಟಿಯುಸಿ ರಾಜ್ಯ ಸೆಕ್ರೇಟ್ರಿಯೇಟ್ ಸದಸ್ಯರು ಹಾಗೂ ಆಶಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ ಕಾರ್ಮಿ ಕರ ಶ್ರಮದಿಂದ ಸರ್ಕಾ ರಗಳು ನಡೆಯುತ್ತಿವೆ. ಆದರೆ ಕಾರ್ಮಿ ಕರ ಬದುಕು ಬೀದಿಗೆ ಬಿದ್ದಿದೆ. ನಮ್ಮ ದ್ವನಿ ಇನ್ನಷ್ಟು ಬಲಿಷ್ಠಗೊಳ್ಳಬೇಕು, ನಮ್ಮ ಹಕ್ಕುಗಳನ್ನು ಗಳಿಸಿಕೊಳ್ಳಲು ರಾಜೀರಹಿತ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಯುಟಿಯುಸಿ ಜಿಲ್ಲಾ ಸಂಚಾಲಕ ಗಂಗಾಧರ ಬಡಿಗೇರ ವಹಿಸಿದ್ದರು. ಪ್ರತಿನಿಧಿ ಅಧಿವೇಶನದಲ್ಲಿ ಮುಖ್ಯ ಗೊತ್ತುವಳಿಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ಇದಕ್ಕೂ ಮುನ್ನ ಕಲಾಭವನದಿಂದ ಬೃಹತ್ ಮೆರವಣಿಗೆ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಎಐಯುಟಿಯುಸಿ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲಾಧ್ಯಕ್ಷರಾಗಿ ಗಂಗಾಧರ ಬಡಿಗೇರ, ಉಪಾಧ್ಯಕ್ಷರಾಗಿ ಭುವನಾ ಎ., ಶಾಂತಾ ಚೌಹಾಣ, ಶರತ್ ನಾಡಗೌಡ, ಕಾರ್ಯದಶರ್ಿಯಾಗಿ ರಮೇಶ ಹೊಸಮನಿ ಸಹ ಕಾರ್ಯದಶರ್ಿಯಾಗಿ ನಿಂಗಮ್ಮಾ ಹುಡೇದ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿ ಕರನ್ನೊಳಗೊಂಡ 50 ಜನರ ಬಲಿಷ್ಠ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.