ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಒಲಿಂಪಿಕ್ಸ್‌ ಅರ್ಹತೆ ಪಡೆದ ದೀಪಿಕಾ ಕುಮಾರಿ, ಅಂಕಿತಾ

DEEPIKA ANIKITA

ಬ್ಯಾಾಂಕಾಕ್, ನ 28- ಇಲ್ಲಿ ನಡೆಯುತ್ತಿರುವ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ರಿಕರ್ವ್ ವಿಭಾಗದಲ್ಲಿ ಸೆಮಿಫೈನಲ್ಸ್‌ ತಲುಪುವ ಮೂಲಕ ಭಾರತದ ದೀಪಿಕಾ ಕುಮಾರಿ ಹಾಗೂ ಅಂಕಿತಾ ಭಕತ್ ಅವರು 2020ರ ಟೋಕಿಯೊ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.

ಅಂತಾರಾಷ್ಟ್ರೀಯ ಆರ್ಚರಿ ಒಕ್ಕೂಟದಿಂದ ನಿಷೇಧ ಶಿಕ್ಷೆೆಗೆ ಒಳಗಾಗಿರುವ ಭಾರತ, ತನ್ನ ರಾಷ್ಟ್ರ ಧ್ವಜವಿಲ್ಲದೆ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದೆ. ಇದರ ನಡುವೆ ಭಾರತದ ದೀಪಿಕಾ ಕುಮಾರಿ ಹಾಗೂ ಆರನೇ ಶ್ರೇಯಾಂಕಿತೆ ಅಂಕಿತಾ ಅವರು ರಿಕರ್ವ್ ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆೆ ಲಗ್ಗೆೆ ಇಡುವ ಮೂಲಕ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಒಕ್ಕೂಟಕ್ಕೆೆ ಅಚ್ಚರಿ ಮೂಡಿಸಿದರು. 

ಭೂತಾನ್‌ನ ಕರ್ಮಾ ಹಾಗೂ ವಿಯೆಟ್ನಾಮ್  ಎನ್‌ಗ್ಯೂಯಟ್ ಡೊ ಥಿ ಅನ್ಹ ಅವರು ಇನ್ನುಳಿದ ಒಲಿಂಪಿಕ್ಸ್‌ ಎರಡು ವೈಯಕ್ತಿಕ ಸ್ಥಾನಗಳನ್ನು ರಾಜಮಂಗಲ ನ್ಯಾಷನಲ್ ಕ್ರೀಡಾಂಗಣದಲ್ಲಿ ಪಡೆದುಕೊಂಡರು.

ದೀಪಿಕಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ ನೂರ್ ಅಫೀಸಾ ಹಲೀಲ್ ಅವರ ವಿರುದ್ಧ 7-2, ರೊಹ್ರಾ ನೆಮಾತಿ (ಇರಾನ್) 6-4 ಹಾಗೂ ಸ್ಥಳೀಯ ಬಾಲಕಿ ನರಸಿರ ಅವರು 6-2 ಅಂತರದಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಮಾಡಿದರು. 

‘‘ನಮ್ಮ ಸಾಮರ್ಥ್ಯಕ್ಕೆೆ ತಕ್ಕಂತೆ ಪ್ರದರ್ಶನ ತೋರಿದ್ದೇವೆ. ದಿನದ ಆರಂಭದಲ್ಲಿ ಸ್ವಲ್ಪ ಮಾನಸಿಕ ಒತ್ತಡಕ್ಕೆೆ ಒಳಗಾಗಿದ್ದೆೆವು. ಏಕೆಂದರೆ, ಜಾಸ್ತಿ ಮಂಜು ಇತ್ತು. ಒಲಿಂಪಿಕ್ಸ್‌‌ಗೆ ಇನ್ನೊೊಂದು ಸ್ಥಾನ ಪಡೆಯಬಹುದಿತ್ತು. ನಾವು ಹಳೆಯದನ್ನು ಮರೆತಿದ್ದೇವೆ. ಇನ್ನೊಂದು  ಒಲಿಂಪಿಕ್ಸ್‌ ಸ್ಥಾನ ಸಿಕ್ಕಿದ್ದರೆ ನಮ್ಮ ಇಡೀ ತಂಡ ಹೆಚ್ಚು ಸಂತಸ ಪಡುತ್ತಿತ್ತು’’ ಎಂದು ದೀಪಿಕಾ ಕುಮಾರಿ ಹೇಳಿದರು.

ಮತ್ತೊಂದು  ಪಂದ್ಯದಲ್ಲಿ ಭಾರತದ ಅಂಕಿತಾ ಅವರು 7-1 ಅಂತರದಲ್ಲಿ ಹಾಂಕಾಂಗ್‌ನ ಲಾಮ್ ಶುಕ್ ಚಿಂಗ್ ಅಡಾ ವಿರುದ್ಧ ಗೆದ್ದು ಸೆಮಿಫೈನಲ್ಸ್‌‌ಗೆ ಲಗ್ಗೆೆ ಇಟ್ಟಿದ್ದಾರೆ. ಆ ಮೂಲಕ ಒಲಿಂಪಿಕ್ಸ್‌ ಟಿಕೆಟ್ ಪಡೆದುಕೊಂಡರು.