ಹಿಂಬಾಲಕರ ಸಂಖ್ಯೆಯಲ್ಲಿ ಇಳಿಮುಖ; ಟ್ವಿಟರ್ ಸಿಇಒ ಭೇಟಿ ಮಾಡಿದ ಟ್ರಂಪ್


ವಾಷಿಂಗ್ಟನ್, ಏ 24  ತಮ್ಮ ಟ್ವಿಟರ್ ಖಾತೆಯ ಹಿಂಬಾಲಕರ ಸಂಖ್ಯೆಯ ಇಳಿಕೆಯಿಂದ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುಧವಾರ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ನ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡೋಸರ್ೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.  

ಡೋಸರ್ೆ ಅವರೊಂದಿಗಿನ ಚಿತ್ರಗಳನ್ನು ಟ್ವೀಟ್ ಮಾಡಿರುವ ಟ್ರಂಪ್, 'ಇಂದು ಶ್ವೇತಭವನದಲ್ಲಿ ಟ್ವಿಟರ್ ಸಿಇಒ ಅವರನ್ನು ಭೇಟಿ ಮಾಡಿದ್ದು, ಸಾಮಾಜಿಕ ಜಾಲತಾಣಗಳ ಕುರಿತು ಅನೇಕ ವಿಷಯಗಳ ಕುರಿತು ಚಚರ್ಿಸಲಾಯಿತು. ಮುಂದಿನ ದಿನಗಳಲ್ಲಿ ಕೂಡ ಈ ಮುಕ್ತ ಸಂಭಾಷಣೆ ಮುಂದುವರಿಯುವ  ಎಂಬ ವಿಶ್ವಾಸವಿದೆ' ಎಂದಿದ್ದಾರೆ.  

ಇದಕ್ಕೆ ಪ್ರತಿಕ್ರಿಯಿಸಿರುವ ಡೋಸರ್ೆ, 'ನಿಮ್ಮ ಸಮಯಕ್ಕಾಗಿ ಧನ್ಯವಾದಗಳು. ಟ್ವಿಟರ್ ಸಂಪೂರ್ಣ ಸಾರ್ವಜನಿಕ ಸಂಭಾಷಣೆಗೆ ವೇದಿಕೆ ಕಲ್ಪಿಸಲು ಬದ್ಧವಾಗಿದೆ. ಇದನ್ನು ಇನ್ನಷ್ಟು ನಾಗರೀಕ ಹಾಗೂ ಆರೋಗ್ಯಕರವನ್ನಾಗಿಸುವ ಉದ್ದೇಶವಿದೆ. ಈ ಕುರಿತು ಚಚರ್ಿಸಿದ್ದಕ್ಕೆ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.  

ತಮ್ಮ ಟ್ವಿಟರ್ ಖಾತೆಯ ಹಿಂಬಾಲಕರ ಸಂಖ್ಯೆ ಕಡಿಮೆಯಾಗಿರುವ ಟ್ರಂಪ್ ದೂರಿಗೆ ಸಮಜಾಯಿಷಿ ನೀಡಿರುವ ಡೋಸರ್ೆ, ಸಂಸ್ಥೆ ಕೆಲ ನಕಲಿ ಹಾಗೂ ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕುವ ಕೆಲಸದಲ್ಲಿ ತೊಡಗಿದೆ. ಇದರಿಂದ ತಮ್ಮ ಖಾತೆ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳ ಹಿಂಬಾಲಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.  

ಮಂಗಳವಾರ ಟ್ವಿಟರ್ ಹಿಂಬಾಲಕರ ಸಂಖ್ಯೆ ಏಕಾಏಕಿ ಕಡಿಮೆಯಾದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ಟ್ರಂಪ್, 'ಟ್ವಿಟರ್ ಸಂಸ್ಥೆ ತಮ್ಮ ಬಗ್ಗೆ ಪೂವರ್ಾಗ್ರಹ ಪೀಡಿತವಾಗಿದೆ. ಅದು ತಮ್ಮನ್ನು ರಿಪಬ್ಲಿಕನ್ ಎಂದು ಪರಿಗಣಿಸುತ್ತಿಲ್ಲ. ಇದು ಅತ್ಯಂತ ತಾರತಮ್ಯದ ವರ್ತನೆ' ಎಂದು ಟ್ವೀಟ್ ಮಾಡಿದ್ದರು.  

ಟ್ರಂಪ್ ಅವರ ಟ್ವಿಟರ್ ಖಾತೆಗೆ ಜುಲೈನಲ್ಲಿ 53.4 ದಶಲಕ್ಷ ಹಿಂಬಾಲಕರಿದ್ದರು. ನಂತರ, ಅದರಲ್ಲಿ ಶೇ.0.4ರಷ್ಟು ಅಂದರೆ,  2.04 ಲಕ್ಷದಷ್ಟು ಹಿಂಬಾಲಕರ ಸಂಖ್ಯೆ ಕಡಿಮೆಯಾಗಿದೆ. 2016ರ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಟ್ವಿಟರ್ ಖಾತೆಯನ್ನು ಮತದಾರರನ್ನು ಸೆಳೆಯಲು ಬಳಸಿಕೊಳ್ಳಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆ, ಅನಧಿಕೃತ ಖಾತೆಗಳನ್ನು ರದ್ದಗೊಳಿಸುವ ಕೆಲಸ ಆರಂಭಿಸಿದೆ. 

ಕಳೆದ ಅಕ್ಟೋಬರ್ ನಲ್ಲಿ ಟ್ರಂಪ್, ಟ್ವಿಟರ್ ತಮ್ಮ ಹಿಂಬಾಲಕರನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕುತ್ತಿದೆ. ಜೊತೆಗೆ, ಅವರು ಮತ್ತೆ ತಮ್ಮನ್ನು ಹಿಂಬಾಲಿಸದಂತೆ ನಿರ್ಬಂಧ ಹೇರುತ್ತಿದೆ. ಮೊದಲು ರಾಕೆಟ್ ನಂತಿದ್ದ ತಮ್ಮ ಖಾತೆ ಈಗ ಸಣ್ಣ ವಿಮಾನವಾಗಿ ಬದಲಾಗಿದೆ. ಇದು ಸಂಪೂರ್ಣ ತಾರತಮ್ಯ ನೀತಿ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದರು.  

ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಗಣ್ಯ ವ್ಯಕ್ತಿಗಳಲ್ಲಿ ಟ್ರಂಪ್ ಕೂಡ ಒಬ್ಬರು.