ಸರ್ಕಾರಿ ಶಾಲಾ ಕಾಲೇಜಗಳ ಫಲಿತಾಂಶ ಕುಸಿದಿರುವುದು ಆತಂಕ ಸಂಗತಿ: ಜಿಲ್ಲಾಧಿಕಾರಿ

ಸರ್ಕಾರಿ ಶಾಲಾ ಕಾಲೇಜಗಳ ಫಲಿತಾಂಶ ಕುಸಿದಿರುವುದು ಆತಂಕ ಸಂಗತಿ: ಜಿಲ್ಲಾಧಿಕಾರಿ  Declining results in government schools and colleges a matter of concern: District Collector

ಸರ್ಕಾರಿ ಶಾಲಾ ಕಾಲೇಜಗಳ ಫಲಿತಾಂಶ ಕುಸಿದಿರುವುದು ಆತಂಕ ಸಂಗತಿ: ಜಿಲ್ಲಾಧಿಕಾರಿ  

ಬ್ಯಾಡಗಿ 07 : ಖಾಸಗಿ ಶಾಲಾ ಕಾಲೇಜ್ ಶಿಕ್ಷಕರು ಪಡೆಯುವುದರ ಸಂಬಳ ಮೂರು ಪಟ್ಟು ಹೆಚ್ಚು ವೇತನ ಪಡೆಯುತ್ತಿರುವ ಸರ್ಕಾರಿ ಶಿಕ್ಷಕರ  ಶಾಲೆ ಕಾಲೇಜಗಳ  ಫಲಿತಾಂಶದ ಗುಣಮಟ್ಟ ಕೆಳಮಟ್ಟಕ್ಕೆ ಕುಸಿದಿರುವುದು ಆತಂಕದ ವಿಷಯವೆಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಖೇದ ವ್ಯಕ್ತಪಡಿಸಿದರು. ಮಂಗಳವಾರ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನೂತನ ಪದವಿ ಪೂರ್ವ ಕಾಲೇಜ ಉದ್ಘಾಟನಾ  ಕಾರ್ಯಕ್ರಮದಲ್ಲಿ ಮಾತನಾಡಿದರು ಶಿಕ್ಷಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾಗಿದೆ. ಸಂಸ್ಕಾರಯುತ ನೈತಿಕ ಶಿಕ್ಷಣ ಬೋಧಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಬೇಕಿದೆ. ಮೊದಲು ಶಿಕ್ಷಕರು  ಸರಿಯಾಗಬೇಕು. ಪಾಲಕರು ಕೂಡಾ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು ಅಂದಾಗ ಭಾರತದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳನ್ನು ಕಾಣ ಬಹುದೆಂದರು.  

ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಬಹು ದಿನದ ಬೇಡಿಕೆಯಂತೆ. ಕೊಟ್ಟು ಮಾತಿನಂತೆ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾತಿ ತಂದು ತರಗತಿಗಳ ಪ್ರಾರಂಭಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಕಾಲೇಜಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸಿ ಕಾಲೇಜ್ ಉಳಿಸಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರದ್ದಾಗಿದೆ. ಕಾಲೇಜಿಗೆ ಬೇಕಿರುವ ಕಟ್ಟಡ, ಪೀಠೋಪಕರಣ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದೆಂದರು. ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ ಮಾತನಾಡಿ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕೆಂದರು.  ಕಾರ್ಯಕ್ರಮದಲ್ಲಿ ಧುರೀಣರಾದ ಶಿವನಗೌಡ ವೀರನಗೌಡ,ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ಮಾರುತಿ ಅಚ್ಚಿಗೇರಿ, ಗಣೇಶ ಚಿಕ್ಕಳ್ಳಿ,ಬಿ.ಎಂ.ಗೌರಾಪುರ, ಪ್ರಕಾಶ ಬನ್ನಿಹಟ್ಟಿ, ಸುರೇಶಗೌಡ ಪಾಟೀಲ, ಬಸವರಾಜ ಸವಣೂರ, ಎಸ್‌.ಎಸ್‌.ಬಸನಗೌಡ,ಎನ್‌.ಎಂ.ಹುಬ್ಬಳ್ಳಿ, ಸುಭಾಸ ಮಣ್ಣಮ್ಮ ನವರ, ಕೆ.ಸಿ.ಹಿರೇಮಠ, ನಾಗೇಂದ್ರ​‍್ಪ ಹರಿಜನ ಸೇರಿದಂತೆ ಇತರರಿದ್ದರು.