ದಾಸರ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ: ತಹಸಿಲ್ದಾರ್ ಸಿಂದಗಿ
Dasara's message is relevant for all times: Tehsildar Sindagi
ದೇವರಹಿಪ್ಪರಗಿ 08: ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಅವರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಕುರುಬರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು.ಸಾಹಿತಿ, ಸಂತರಾಗಿ ಕನಕದಾಸರು, ಸಾಮಾಜಿಕ ಚಿಂತನೆಯನ್ನು ಬಿತ್ತಿದ್ದಾರೆ. ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ ಇಂದಿನ ಯುವಕರು ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಕೆ.ಎಸ್. ಹಿರೇಕುರುಬರ ಅವರು ಮಾತನಾಡಿ, ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ. ಕನಕದಾಸರು ಸರಳ ಭಾಷೆಯಲ್ಲಿಯೇ ಸಾಮಾಜಿಕ ಚಿಂತನೆಗಳನ್ನು ಬಿತ್ತಿದ್ದಾರೆ. ಅವರ ಸಾಹಿತ್ಯ ಸಮಾಜಕ್ಕೆ ಒಂದು ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಗುರುನಾಥ ಮುರಡಿ ಅವರು ಮಾತನಾಡಿ, ಕನಕದಾಸರ ಭಕ್ತಿ ಅಪಾರವಾಗಿತ್ತು. ಅವರ ಭಕ್ತಿಗೆ ಮೆಚ್ಚಿದ ಉಡುಪಿಯ ಶ್ರೀಕೃಷ್ಣನೇ ಹಿಂದಕ್ಕೆ ತಿರುಗಿ, ಕನಕ ದಾಸರಿಗೆ ದರ್ಶನ ನೀಡಿದ್ದಾನೆ. ಈಗಲೂ ಅದು ಕನಕನ ಕಿಂಡಿ ಎಂದೇ ಪ್ರಸಿದ್ಧವಾಗಿದೆ. ಅದಕ್ಕಾಗಿಯೇ ಕನಕದಾಸರನ್ನು ಭಕ್ತ ಶ್ರೇಷ್ಠ ಕನಕದಾಸರು ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಕನಕ ದಾಸರ ವೃತ್ತದಲ್ಲಿ ಜಯಂತೋತ್ಸವದ ಅಂಗವಾಗಿ ಆಕರ್ಷಕ ಮೆರವಣಿಗೆ ನಡೆಯಿತು. ಕಲಶಗಳೊಂದಿಗೆ ಮಹಿಳೆಯರು, ವಿವಿಧ ಕಲಾತಂಡಗಳ ಸದಸ್ಯರು, ತಾಲೂಕು ಕುರುಬರ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ 3ಜನ ವಿದ್ಯಾರ್ಥಿಗಳಿಗೆ ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮುಖಂಡರುಗಳಾದ ಬಸಪ್ಪ ದೇವಣಗಾಂವ, ಸಿದ್ದು ಬುಳ್ಳಾ, ರಮೇಶ ಮಸಬಿನಾಳ, ಪ್ರಕಾಶ ಗುಡಿಮನಿ, ಸುನಿಲ ಮಾಗಿ, ಶರಣು ಪೂಜಾರಿ, ಪ್ರಕಾಶ ದೊಡಮನಿ,ರಾಜು ಸಿಂದಗೇರಿ, ನಾಗೇಶ ನಾಗೂರ, ಜಿ.ಪಿ.ಬಿರಾದಾರ, ಮಡಿವಾಳಪ್ಪ ಬ್ಯಾಲಾಳ, ಅಪ್ಪು ಪಟ್ಟೇದ, ಆದೇಶ ಪೂಜಾರಿ, ಸೋಮರಾಯ ಪೂಜಾರಿ, ಜಟ್ಟೆಪ್ಪ ಪೂಜಾರಿ, ಶರಣಪ್ಪ ಪೂಜಾರಿ, ಸಿದ್ದ ದೊಡ್ಡಿಣಿ, ಸಿದ್ದು ಬೊಮ್ಮನಳ್ಳಿ, ಯಮನು, ದೇವಣಗಾಂವ, ಚಂದು ಪೂಜಾರಿ, ಭೀರು ಹಳ್ಳಿ, ಬೀರು ದೆವೂರ, ಮಾಳು ಪೂಜಾರಿ, ಈರಣ್ಣ ಕಡ್ಲೇವಾಡ, ಜಕ್ಕು ದೊಡ್ಡಿಣಿ, ಭೀಮು ಬುಳ್ಳಾ, ಶ್ರೀಶೈಲ ತಿಳಗೂಳ, ವಿಠ್ಠಲ ಚಿಕ್ಕರೂಗಿ, ಅಮ್ಮೋಗಿ ಪಡಗಾನೂರ, ಪೂಜು ಬಿಸನಾಳ, ಸಿದ್ದು ಹಿಪ್ಪರಗಿ, ಬಸ್ಸು ಪೂಜಾರಿ, ಶಿವರಾಜ ತಳವಾರ ಸೇರಿದಂತೆ ಎಲ್ಲಾ ಸಂಘಟನೆ ಪದಾಧಿಕಾರಿಗಳು, ಹಾಲಮತ ಸಮಾಜ ಬಾಂಧವರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 