ಫೆ. 7ಕ್ಕೆ ಶತದಿನದ ಕಾರ್ಖಾನೆ ವಿರೋಧಿ ಬೃಹತ್ ಹೋರಾಟ ಯಶಸ್ವಿಗೊಳಿಸಲು ಕರೆ ಕೊಟ್ಟ ದಾನಪ್ಪ ಕವಲೂರು
Danappa Kavalur calls for a successful centenary anti-factory protest on Feb. 7
ಕೊಪ್ಪಳ 31: ಭಾಗ್ಯನಗರ ರೈಲ್ವೆ ಬ್ರಿಡ್ಜ್ ಹತ್ತಿರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಇಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆದ ಶತದಿನದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಭಾಗ್ಯನಗರದ ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ದಾನಪ್ಪ ಕವಲೂರ ದೊಡ್ಡ ಹೋರಾಟಕ್ಕೆ ಕರೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡ ವಿವಿಧ ಸಂಘ, ಸಂಸ್ಥೆಯ ಪ್ರಮುಖರು, ನಗರದ ಪುರ ಪ್ರಮುಖರು ಫೆ.7ರಂದು ಶತದಿನದ ಹೋರಾಟ ಬೃಹತ್ ಮಟ್ಟದಲ್ಲಿ ಯಶಸ್ವಿಗೊಳಿಸಲು ಸಭೆ ಒಮ್ಮತದ ತೀರ್ಮಾನ ತೆಗೆದುಕೊಂಡಿತು.
ಮುಂದುವರೆದು ಮಾತನಾಡಿದ ಅವರು, ಇಲ್ಲಿರುವ ಒಂದೂವರೆ ಲಕ್ಷ ಜನರಲ್ಲಿ ಅರ್ಧದಷ್ಟು ಜನ ಧೂಳು, ಹೊಗೆ, ಬೂದಿ ಬಾಧನೆಗೆ ತುತ್ತಾಗಿದ್ದಾರೆ. 20 ಬಾಧಿತ ಹಳ್ಳಿಯ ಐವತ್ತು ಸಾವಿರ ಜನರು ಅನಾರೋಗ್ಯದ ಗಂಭೀರ ಸಮಸ್ಯೆಯಿಂದ ಸಾವಿನ ದವಡೆಗೆ ಸಿಲುಕಿದ್ದಾರೆ. ಫೆಬ್ರವರಿ 24 ಕೊಪ್ಪಳ ಬಂದ್ ಮಾಡಿ, ಬಲ್ಡೋಟ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿದ ದಿನವಾಗಿದೆ. ಅಂದು ನಾವು ಗಂಭೀರವಾಗಿ ಯೋಚಿಸಿ ಬೃಹತ್ ಹೋರಾಟಕ್ಕೆ ಮುಂದಾಗೋಣ ಎಂದರು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಇದೆ ಫೆ.7 ಶನಿವಾರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದ 100ನೇ ದಿನವಾಗಿದೆ. ಅಂದು ನಾವು ಈಗಾಗಲೇ ಅತಿಥಿಗಳಾದ ಸಾಣೇಹಳ್ಳಿ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಧಾರವಾಡ ಸಾಹಿತಿ ರಂಜಾನ್ ದರ್ಗಾ, ಅಸ್ಲಂ ದರ್ಗಾ ಮೈನಳ್ಳಿ ಸ್ವಾಮಿಗಳು ಆಗಮಿಸಿ ಬೆಂಬಲಿಸುತ್ತಾರೆ. ಅಂದು ನಗರದಲ್ಲಿ ಬೃಹತ್ ಸಮಾವೇಶ ಮತ್ತು ಮೆರವಣಿಗೆ ಮಾಡೋಣ ಎಂದರು. ಗವಿಶ್ರೀಗಳು ಈ ಹೋರಾಟಕ್ಕೆ ಸಾನಿಧ್ಯ ವಹಿಸಲು ಕೋರಿಕೊಳ್ಳೋಣ ಎಂದರು.
ಹಿರೇಬಗನಾಳ ಬಾಧಿತ ರೈತ ಮಹೇಶ ವದ್ನಾಳ ಮಾತನಾಡಿ ನಮ್ಮ ಸ್ಥಿತಿ ಸಾವು ಬದುಕುವ ಹೋರಾಟ ಆಗಿದೆ. ನಾವು ಕಿರಿಯರು. ನಮ್ಮ ಹಿರಿಯರ ಮುಂದೆ ಸರಣಿಯಾಗಿ ಸಾವನ್ನಪ್ಪುವಂತೆ ಆಗಿದೆ. ಮಕ್ಕಳು ಕೂಡ ಗಂಭೀರ ಖಾಯಿಲೆಗೆ ತಾತ್ತಾಗುತ್ತಿದ್ದಾರೆ. ಯಾವ ಸಾರ್ಥಕತೆಗಾಗಿ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಈಗ ಶವಯಾತ್ರೆ ಮಾಡುವುದಾದರೆ ರೈತರದ್ದೇ ಮಾಡಿ. ಯಾಕೆಂದರೆ ಸರ್ಕಾರ ಅಥವಾ ರಾಜಕಾರಣಿಗಳು ಸಾವಿಗೆ ಕಾರಣರಾದರೂ ಅವರಿಗೆ ನೋವು ಮಾಡುವುದು ಬೇಡ. ಅಂತ ದುಷ್ಟ ಕಾಲದಲ್ಲಿ ನಾವು ಬದುಕುತ್ತಿದ್ದೇವೆ, ನಮ್ಮ ಮನೆ ಬಾಗಿಲಿಗೆ ಸಾವು ಬಂದಾಗ ಏನು ಮಾಡಬೇಕೆಂದು ಕಣ್ಣೀರು ಸುರಿಸಿದರು.
ಸಭೆಯಲ್ಲಿ ಜಂಟಿ ಕ್ರಿಯಾ ಸಮಿತಿ ಪ್ರಮುಖರಾದ ಸಾಹಿತಿ ಎಚ್.ಎಸ್. ಪಾಟೀಲ್, ಡಿ.ಎಚ್. ಪೂಜಾರ, ಡಿ.ಎಂ. ಬಡಿಗೇರ, ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಮಂಜುನಾಥ ಸಜ್ಜನ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಪೀರಾ ಹುಸೇನ್ ಹೊಸಳ್ಳಿ, ರಾಜು ಬಾಕಳೆ, ಸೌಮ್ಯ ನಾಲವಾಡ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಅಕ್ಕಿ, ವಿಜಯ ದೊರೆರಾಜು, ಹನುಮಂತರಾವ ವಕೀಲರು, ಬಾಳಪ್ಪ ವಕೀಲರು, ಶರಣು ಗಡ್ಡಿ, ನಟರಾಜ ಸವಡಿ, ಭೀಮಸೇನ ಕಲಕೇರಿ, ನಜೀರ್ ಸಾಬ್ ಮೂಲಿಮನಿ, ಎಂ.ಕೆ.ಸಾಹೇಬ್, ಕಾಶಪ್ಪ ಚಲುವಾದಿ, ಜ್ಯೋತಿ ಜಿ. ಕದ್ರಳ್ಳಿಮಠ ಮಾತನಾಡಿದರು.
ಸಭೆಯಲ್ಲಿ ಸಾಹಿತಿ ಎ.ಎಂ. ಮದರಿ ಕಾವ್ಯಾ ಗಡಾದ, ಸುನಂದಾ ಬಾರಕೇರ್, ಲತಾ ಉತ್ತಂಗಿಮಠ, ದ್ಯಾಮಣ್ಣ ಚಿಲವಾಡಗಿ, ರಾಜಶೇಖರ ಏಳುಬಾವಿ, ವಿದ್ಯಾ ನಾಲವಾಡ, ಶಿವಸಂಗಪ್ಪ ವಣಗೇರಿ, ಸುಜಾತಾ ಹಲಗೇರಿ, ಸಂಗಪ್ಪ ವಾರದ, ಜಿ.ಎಸ್.ಕಡೇಮನಿ, ಜಗದೀಶ ಕುಂಬಾರ, ಗಣೇಶ ವಿಶ್ವಕರ್ಮ, ಶಿವಣ್ಣ ದೆವರಮನಿ, ಗವಿಸಿದ್ದಪ್ಪ ಹಲಿಗಿ, ರಮೇಶ ಡಂಬ್ರಳ್ಳಿ, ಮಂಜು ಕೆಂಚನಗೌಡ್ರ, ಮಾಕಾಂರ್ಡೇಯ ಹಿರೇಮಠ, ರತ್ನಾಕರ್ ತಳವಾರ, ಶುಕರಾಜ ತಾಳಕೇರಿ, ಭೀಮಪ್ಪ ಹವಳಿ, ಈಶಪ್ಪ ದೊಡ್ಡಮನಿ, ಯಮನೂರ್ಪ ಹಳ್ಳಿಕೇರಿ, ಸದಾಶಿವ ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಸದಾಶಿವ ಪಾಟೀಲ್, ಬಿ.ಜಿ.ಕರಿಗಾರ, ನೂರಂದಪ್ಪ ಉಪ್ಪಿನ್, ಈಶ್ವರ ಕೊರ್ಲಹಳ್ಳಿ, ಜ್ಯೋತಿ ಮಟ್ಟಿ, ಜ್ಯೋತಿ ಜಿ.ಕೆ, ಉಮರ್ ಫಾರೂಕ್, ರುಕ್ಸಾನಾ ಎ.ಕೆ, ರಾಜೇಶ್ ಸಸಿಮಠ, ಮಂಗಳೇಶ ರಿಠೋಡ್, ಅನ್ನಪೂರ್ಣ ಮನ್ನಾಪೂರ, ಮೈತ್ರಾ ಜೆ, ಚಂದ್ರೇಗೌಡ ಪಾಟೀಲ್, ಹನುಮೇಶ ಕಾಲ್ಮಂಗಿ, ಗಾಳೆಪ್ಪ ಹೂವಿನಾಳ, ಸುರೇಶ್ ಪೂಜಾರ, ಪ್ರಕಾಶ ಹೊಳೆಯಪ್ಪನವರ, ಮಹಾದೇವಪ್ಪ ಮಾವಿನಮಾಡು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 