ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ
Danammadevi Temple Fair Festival
ಧಾರವಾಡ 16: ನಗರದಲ್ಲಿರುವ ಶಾಖಾ ಮೂರು ಸಾವಿರಮಠ, ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವವಿದ್ದು ಕಾರ್ಯಕ್ರಮದ ವಿವರ ಕೆಳಗಿನಂತಿದೆ. ಗುಡ್ಡಾಪೂರ ದಾನಮ್ಮದೇವಿ ಜಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ದಿನಾಂಕ 18-11-2025 ಮಂಗಳವಾರ ದಂದು ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಹಾಸ್ಯ ಕಲಾವಿದರಿಂದ ಹಾಸ್ಯ ಹಾಗೂ ನೃತ್ಯ ಕಾರ್ಯಕ್ರಮಗಳು ಸಂಜೆ ಜರುಗಲಿವೆ.
ದಿ. 20 ಗುರುವಾರ ದಿವಸದಂದು ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರ ಮಠ, ಹುಬ್ಬಳ್ಳಿ ಇವರ ಅಪ್ಪಣೆಯ ಮೇರೆಗೆ ಪ್ರತಿವರುಷದಂತೆ ಶಾಲಿವಾಹನಶಕ 1947 ವಿಶ್ವಾವಸುನಾಮ ಸಂವತ್ಸರ ಕಾರ್ತಿಕಮಾಸ ಕೃಷ್ಣಪಕ್ಷ, ವಿಶಾಖಾ ನಕ್ಷತ್ರ, ಛಟ್ಟಿ ಅಮಾವಾಸ್ಯೆ ದಿವಸ ಶಿವಶರಣೆ ಗುಡ್ಡಾಪೂರ ದಾನಮ್ಮದೇವಿಯ ಜಾತ್ರಾ ಮಹೋತ್ಸವವನ್ನು ಶಾಖಾ ಮೂರು ಸಾವಿರಮಠ, ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗುವುದು, ಅಂದು ಮುಂಜಾನೆ 6 ಗಂಟೆಗೆ ಶಿವಶರಣೆ ದಾನಮ್ಮದೇವಿ ಮತ್ತು - ಸೋಮವಾರ ಹಾಗೂ ಗುರುಸಿದ್ದೇಶ್ವರ ಗದ್ದುಗೆಗೆ ರುದ್ರಾಭಿಷೇಕ ಮಹಾಪೂಜೆ ಸಲ್ಲಿಸಲಾಗುವುದು.
ಅದೇ ದಿವಸ ಬೆಳಿಗ್ಗೆ 10.00 ಘಂಟೆಗೆ ಪಾಲಕಿ ಉತ್ಸವವು ಮಹಿಳೆಯರಿಂದ ಕುಂಭಮೇಳ, ಆರತಿ ಹಾಗೂ ಸಕಲ ವಾದ್ಯಗಳೊಂದಿಗೆ ನಡೆಯುವುದು, ಮಧ್ಯಾಹ್ನ 12.00 ಗಂಟೆಗೆ ದೇವಿಯ ಮಹಾಪೂಜೆ, ನಂತರ ಮಹಾಪ್ರಸಾದ ನಡೆಯುವುದು, ಯಾವತ್ತೂ ಭಕ್ತಾದಿಗಳು ದೇವಿಯ ಜಾತ್ರೆಗೆ ತನು, ಮನ, ಧನ, ಧಾನ್ಯದಿಂದ ತಪ್ಪದೇ ಸೇವೆ ಸಲ್ಲಿಸಿ ಮಹಾಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಹಾಗೂ ಗುರುಸಿದ್ಧೇಶ್ವರನ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಸೇವಾ ಸಮಿತಿ ಹಾಗೂ ಶ್ರೀ ಮೃತ್ಯುಂಜಯ ನಗರ ನ ಧಾರವಾಡದ ನಾಗರೀಕರ ಪರವಾಗಿ ಕೋರಿಕೆ, ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಧ್ಯಕ್ಷರು, ಮುರುಘಾಮಠ, ಧಾರವಾಡ ಇವರ ಅಮೃತಹಸ್ತದಿಂದ ಸಂಜೆ 6-30 ಕ್ಕೆ “ಕಾರ್ತಿಕೋತ್ಸವದ ಉದ್ಘಾಟನೆ” ಮಾಡುವರು. ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಸದಸ್ಯರಾದ ಮಂಜುನಾಥ ಸಾಲಿಮಠ, ನಾರಾಯಣ ಜಗಾಪೂರ, ಅಕ್ಷಯ ದಂಡಿನ ಹಾಗೂ ಶ್ರೀಕಾಂತ ಪೂಜಾರ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 