ಡಿಜೆ ಬೇಡ ಭಜನೆ ಪದ, ಕರಡಿ ಮಜಲು ಒಳ್ಳೆಯದಲ್ಲವೇ
DJ Beda Bhajane Pada, isn't it good for a bear to have fun?
ಡಿಜೆ ಬೇಡ ಭಜನೆ ಪದ, ಕರಡಿ ಮಜಲು ಒಳ್ಳೆಯದಲ್ಲವೇ
ಹುಬ್ಬಳ್ಳಿ 04: ಡಿಜೆ ಬೇಡ ಭಜನೆ ಪದ, ಕರಡಿ ಮಜಲು ಒಳ್ಳೆಯದಲ್ಲವೇ ಗಣೇಶೋತ್ಸವ ವಿಸರ್ಜನೆಗಾಗಿ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಡಿಜೆ ವಿಚಾರದಲ್ಲಿ ಪರ ವಿರೋಧ ನಡೆಯುತ್ತಿದೆ. ಯಾವ ಕಾರಣಕ್ಕೊಸರ ವಿರೋಧ ಮಾಡುತ್ತಿದ್ದಾರೆ ಎಂದಾಗ ಹಾರ್ಟ್ ಪೇಷಂಟ್ ಇರುವವರಿಗೆ ಡಿಜೆ ಎಫೆಕ್ಟ್ ಆಗಿದೆಯಂತೆ, ಡಿಜೆ ಹಾಕಿದ ಕೂಡಲೇ ಹಾರ್ಟ್ ಪೇಷಂಟ್ ಓಡಿ ಹೋಗುತ್ತಾನೆ. 500 ಮೀಟರ್ ನಷ್ಟು ದೂರವಾಗುತ್ತಾರೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆ ಇರುವವರಿಗೆ ಡಿಜೆ ತೊಂದರೆಯಾಗುತ್ತಿದೆ ಮತ್ತು ಗ್ರಾಮೀಣ ಪ್ರದೇಶದ ಮನೆಗಳು ಹಳೆ ಕಾಲದ ಮನೆಗಳು ಡಿಜೆ ಎಫೆಕ್ಟ್ ಹೊಡೆತಕ್ಕೆ ಮನೆಗಳು ಹಾನಿಯಾಗಬಹುದು, ಅಲ್ಲಾಡಬಹುದು ಹೀಗಾಗಿ ಡಿಜೆ ಹಾದುಹೋಗುವ ಅಕ್ಕಪಕ್ಕದ ಮನೆಯವರು ವಿರೋಧ ಮಾಡುವುದು ಉಂಟು. ಡಿಜೆ ಬದಲು ಪರ್ಯಾಯ ವ್ಯವಸ್ಥೆ ಇದೆ.
ದೇವರ ಕಾರ್ಯಕ್ರಮಕ್ಕೆ ಭಜನೆ ಇಲ್ಲವೇ ಕರಡಿ ಮಜಲು ಒಳ್ಳೆಯದು ಗಣೇಶೋತ್ಸವ ವಿಸರ್ಜನೆ ಕಾರ್ಯಕ್ರಮಕ್ಕೆ ಭಜನೆ, ಇಲ್ಲವೇ ಕರಡಿ ಮಜಲು ಬಾರಿಸುವವರು, ಹಾಡುವರನ್ನು ಕರೆದು, ಮೆರವಣಿಗೆ ಮಾಡಬಹುದಲ್ಲ. ಮಾನವಿಯತೆ ದೃಷ್ಟಿಯಿಂದ ಮತ್ತು ಆರೋಗ್ಯದ ದೃಷ್ಟಿಯಿಂದ ಡಿಜೆ ಬೇಡ ಎಂಬ ಅಭಿಪ್ರಾಯವಿದೆ. ಈಗ ಮೊಬೈಲ್ ಫೋನ್ ನಲ್ಲಿ ಬಹಳಷ್ಟು ಡಿಜೆ ಸಾಂಗ್ ಬರುತ್ತಿದೆ. ಹೆಡ್ ಫೋನ್ ಅಥವಾ ಇಯರ್ ಫೋನ್ ಹಾಕಿಕೊಂಡು ಸಾಂಗ್ ಕೇಳಬಹುದು. ಕೆಲವರಿಗೆ ಡಿಜೆ ಸಾಂಗ್ ಕೇಳಲು ಕಿರಿಕಿರಿ ಆಗುತ್ತದೆ. ಡಿಜೆ ಎಫೆಕ್ಟ್ ಹಲವು ಕಾರಣ ಇರಬಹುದು ಹುಡುಕಬೇಕು ಹಾಗಾಂತ ಪರ್ಯಾಯ ವ್ಯವಸ್ಥೆ ಇದೆ. ಡಿಜೆ ಬದಲು ಭಜನೆ ಪದ, ಇಲ್ಲವೇ ಕರಡಿ ಮಜಲು ಬಾರಿಸುವವರು ಹಾಡುವವರು ಕರೆದು ಮೆರವಣಿಗೆ ಮಾಡಿ ದೇವರ ಕೃಪೆಗೆ ಪಾತ್ರರಾಗಬಹುದು. ಈ ಬಗ್ಗೆ ಸಾರ್ವಜನಿಕರು ಸಲಹೆ ಸೂಚನೆ ನೀಡಬಹುದು ಅಷ್ಟೇ ಅದನ್ನು ನಿರ್ಧಾರ ಮಾಡಬೇಕಿರುವುದು ಕಾರ್ಯಕ್ರಮ ಆಯೋಜಕರಿಗೆ ಬಿಟ್ಟ ವಿಚಾರ.ವೀರೇಶ ಧೂಪದಮಠ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 