ಕಾಂಗ್ರೆಸ್ ಕಾರ‌್ಯಕರ್ತರ ಮನೆಗೆ ಭೇಟಿ ನೀಡಿದ ಡಿಸಿಎಂ ಡಿಕೆಶಿ
DCM DK visits Congress worker's house
ದೇವರಹಿಪ್ಪರಗಿ 12: ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲನಗೌಡ ಬಿರಾದಾರ(ಕೆಸರಟ್ಟಿ) ಅವರ ಬೆಳಗಾವಿ ನಿವಾಸದಲ್ಲಿ ಅತಿಥಿ ಸತ್ಕಾರ ಸ್ವೀಕರಿಸಿ, ಉತ್ತರ ಕರ್ನಾಟಕ ಶೈಲಿಯ ಹೋಳಿಗೆ ವಿಶೇಷ ಊಟ ಸವಿದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಬಿಡುವಿಲ್ಲದ ಸಮಯದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲನಗೌಡ ಬಿರಾದಾರ (ಕೆಸರಟ್ಟಿ) ಅವರ ಕುಟುಂಬದ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ, ರಾಜಕೀಯ ಕುಶಲೋಪರಿ ವಿಚಾರಿಸಿ ಅತಿಥಿ ಸತ್ಕಾರ ಸ್ವೀಕರಿಸುವ ಮೂಲಕ ಸರಳತೆ ಮೆರೆದ ಡಿಸಿಎಂ ಡಿ.ಕೆ. ಶಿವಕುಮಾರ.ಖಡಕ್ ರೊಟ್ಟಿ, ಶೇಂಗಾ ಹೋಳಿಗೆ ಡಿಕೆಶಿ ಮೆಚ್ಚುಗೆ:ಉತ್ತರ ಕರ್ನಾಟಕದಲ್ಲಿ ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಸವಿಯುವ ಖಡಕ್ ರೊಟ್ಟಿ ಕೆಂಪು ಚಟ್ನಿ, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿಯನ್ನು ಊಟಕ್ಕೆ ಸಿದ್ಧಪಡಿಸಲಾಗಿತ್ತು. ಜತೆಗೆ ಡೊಣ್ಣ ಮೆಣಸಿನಕಾಯಿ ಮತ್ತು ಮುಳಗಾಯಿ ಎಣಗಾಯಿ, ಪುಂಡಿಪಲ್ಯ, ಮಸಾಲೆ ಅನ್ನ ಸಿದ್ಧಪಡಿಸಲಾಗಿತ್ತು.
ಗೋಧಿ ಹುಗ್ಗಿ ,ಕೊಬ್ಬರಿ ಚಟ್ನಿ, ಕೋಸಂಬರಿ, ಉಪ್ಪಿನ ಕಾಯಿ,ಮಿರ್ಚಿ, ಹಪ್ಪಳ, ದಾಳಿಂಬೆ ಹಣ್ಣು, ಹಂಪಲು ಮಜ್ಜಿಗೆಯನ್ನು ಮಲ್ಲನಗೌಡ ಕುಟುಂಬಸ್ಥರಿಂದ ಡಿಸಿಎಂ ಡಿಕೆಶಿ ಅವರಿಗಾಗಿ ಓತಣ ಸಿದ್ಧಪಡಿಸಿ ಅತಿಥಿ ಸತ್ಕಾರ ನೀಡಿದ್ದು ವಿಶೇಷವಾಗಿತ್ತು.ಉತ್ತರ ಕರ್ನಾಟಕ ಶೈಲಿಯ ಬೊಂಬಾಟ್ ಭೋಜನವನ್ನು ಸವಿದ ಡಿಸಿಎಂ ಡಿಕೆಶಿ.ಬಿಳಿ ಜೋಳದ ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ಬಿಸಿ ಜೋಳದ ರೊಟ್ಟಿ, ಚಪಾತಿ, ದಪಾಟಿ, ಬದನೆಕಾಯಿ ಎಡಗಾಯಿ ಪಲ್ಯ, ನಾನಾ ಕಾಳುಗಳ ಪಲ್ಯ, ಬೆಣ್ಣಿ, ಕೆಂಪು ಮೆಣಸಿನಕಾಯಿ ಚಟ್ನಿ, ಮೊಸರು, ಮಜ್ಜಿಗೆ, ಶೆಂಗಾ ಹಿಂಡಿ, ಅಗಸಿ ಹಿಂಡಿ ಮಾವಿನಕಾಯಿ ಉಪ್ಪಿನಕಾಯಿ, ರುಚಿಕಟ್ಟಾದ ಸಿಹಿ ಶೇಂಗಾ ಹೋಳಿಗೆ, ಪ್ರೂಟ್ ಸಲಾಡ್ ಮೃಷ್ಟಾನ್ನ ಭೋಜನ ಸವಿದ ನಾಯಕರು ಸಂತೃಪ್ತರಾದರು.
ಉತ್ತರ ಕರ್ನಾಟಕ ಶೈಲಿಯ ಊಟಕ್ಕೆ ಡಿಕೆಶಿ ಮೆಚ್ಚುಗೆ:
ಉತ್ತರ ಕರ್ನಾಟಕ ಭಾಗದ ವಿಶಿಷ್ಟ ಶೈಲಿಯ ಊಟಕ್ಕೆ ಮನಸೋತ ಕೆಪಿಸಿಸಿ ರಾಜ್ಯಾಧ್ಯಕ್ಷರು ಹಾಗೂ ಡಿಸಿಎಂ ಡಿಕೆಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಊಟದ ಬಳಿಕ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡರು. ಡಿಸಿಎಂ ಡಿಕೆಶಿ ಅವರ ಸರಳತೆಗೆ ಕಾಂಗ್ರೆಸ್ ಮುಖಂಡ ಹಾಗೂ ಕಾರ್ಯಕರ್ತರರಿಂದ ಮೆಚ್ಚುಗೆ ವ್ಯಕ್ತವಾಯಿತು.ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಕಾರ್ಯಕರ್ತರ ಬಗ್ಗೆ ಡಿ.ಕೆ.ಶಿವಕುಮಾರ ಅವರಿಗೆ ಇರುವ ಗೌರವಕ್ಕೆ ಪಕ್ಷದ ಎಲ್ಲಾ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಿಎಂ, ಡಿಸಿಎಂ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ರೈತರು, ಯುವಕರು ಹಾಗೂ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ಸಬಲೀಕರಣಕ್ಕಾಗಿ ಕಾರಣಿಭೂತರಾಗಿದ್ದಾರೆ. ತಮ್ಮ ಬಿಜಿ ಶೆಡ್ಯೂಲ್ ನಲ್ಲಿ ನಮ್ಮ ಕುಟುಂಬದ ಕರೆಗೆ ಓಗೊಟ್ಟು ಮನೆಗೆ ಬಂದು ಆರೋಗ್ಯ, ರಾಜಕೀಯ ಕುಶಲೋಪರಿ, ಅತಿಥಿ ಸತ್ಕಾರ ಸ್ವೀಕರಿಸಿದ್ದು ಅವರ ಸರಳತೆಗೆ ನಮ್ಮ ಕುಟುಂಬಸ್ಥರು ಆಭಾರಿಯಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 