ಜಿಲ್ಲಾ ಕಾರಾಗೃಹ ಮೇಲ್ದಜರ್ೆಗೆ ವರದಿ ಸಲ್ಲಿಕೆಗೆ ಡಿಸಿ ಸೂಚನೆ

ಹಾವೇರಿ: ಹಾವೇರಿ ಕಾರಾಗೃಹ ಪ್ರಸ್ತುತ ಎರಡನೆಯ ದಜರ್ೆ ಕಾರಾಗೃಹವಾಗಿದ್ದು ಮೊದಲನೆಯ ದಜರ್ೆಗೆ ಉನ್ನತೀಕರಿಸುವ ಕುರಿತಂತೆ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮೂಲಸೌಕರ್ಯ, ಮಾನದಂಡ,  ಅಗತ್ಯತೆಗಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕಾರಾಗೃಹದ ಅಧೀಕ್ಷಕರಿಗೆ ಕಾರಾಗೃಹದ ಜಿಲ್ಲಾ ಸಂದರ್ಶಕ ಮಂಡಳಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚಿಸಿದರು.

ಕೆರೆಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಸಂಜೆ ಜರುಗಿದ ಎರಡನೆಯ ಸಂದರ್ಶಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಕಾರಾಗೃಹ ಎರಡನೆಯ ದಜರ್ೆಯ ಕಾರಾಗೃಹವಾಗಿದೆ. ಒಂದು ತಿಂಗಳಿಂದ ಆರು ತಿಂಗಳವರೆಗೆ ಶಿಕ್ಷೆಗೊಳಗಾದ ಬಂದಿಗಳನ್ನು ಮಾತ್ರ ಈ ಕಾರಾಗೃಹದಲ್ಲಿ ಇರಿಸಲು ಅವಕಾಶವಿದೆ.

    ಒಂದರಿಂದ ಹತ್ತು ವರ್ಷದೊಳಗಿನ ಶಿಕ್ಷಕೆಗೊಳಗಾದ ಕೈದಿಗಳನ್ನು ಇರಿಸಲು ಮೊದಲನೆಯ ದಜರ್ೆಗೆ ಉನ್ನತೀಕರಿಸುವುದು ಅಗತ್ಯವಾಗಿದೆ. ಮೊದಲನೆಯ ದಜರ್ೆಗೇರಿಸಲು ಈ ಕಾರಾಗೃಹದಲ್ಲಿ ಎಲ್ಲ ಸೌಲಭ್ಯಗಳು ಇವೆ. 

     ಮೊದಲನೆಯ ದಜರ್ೆಗೇರಿಸಿದರೆ ದೀಘರ್ಾವಧಿ ಶಿಕ್ಷೆಗೊಳಗಾದ ಕೈದಿಗಳ ಬಂಧುಗಳಿಗೆ ಅನುಕೂಲವಾಗಲಿದೆ ಎಂದು ಸಂದರ್ಶನ ಮಂಡಳಿಗೆ ಕಾರಾಗೃಹ ಅಧೀಕ್ಷಕರು ಬೇಡಿಕೆ ಸಲ್ಲಿಸಿದರು.

    ಮೊದಲ ದಜರ್ೆಗೆ ಉನ್ನತೀಕರಿಸಲು ಅಗತ್ಯವಾದ ಸೌಲಭ್ಯ ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸುವ ಕುರಿತಂತೆ ವಿವಿಧ ಅಧಿಕಾರಿಗಳ ತಂಡ ರಚಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

      ವೃತ್ತಿ ಕೌಶಲ್ಯ ತರಬೇತಿ: ಪ್ರಸ್ತುತ ಅತ್ಯಂತ ಬೇಡಿಕೆ ಇರುವ ಗಣಕಯಂತ್ರ, ಆಪರೇಟರ್, ಟ್ಯಾಲಿ ತರಬೇತಿ, ಕಟ್ಟಡ ನಿಮರ್ಾಣ, ಪೇಂಟಿಗ್, ಪ್ಲಂಬರ್, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಅಂತಹ ವೃತ್ತಿ ಕೌಶಲ್ಯ ತರಬೇತಿಗಳನ್ನು ಕೈದಿಗಳಿಗೆ ನೀಡುವಂತೆ ಸಲಹೆ ನೀಡಿದರು.

ಮೂಲಭೂತ ಸೌಕರ್ಯ: ಕಾರಾಗೃಹದಲ್ಲಿೆ ಹೆಚ್ಚುವರಿಯಾಗಿ ನಾಲ್ಕು ಬ್ಯಾರಕ್ಗಳನ್ನು ನಿಮರ್ಾಣ, ಯೋಗ, ವ್ಯಾಸಂಗ, ಸಾಂಸ್ಕೃತಿಕ ಚಟುವಟಿಕೆ ಅನುಕೂಲವಾಗುವಂತೆ ಸಭಾಂಗಣ ನಿಮರ್ಾಣ, ಜೈಲು  ಸಿಬ್ಬಂದಿಗಳಿಗೆ ವಸತಿ ಗೃಹಗಳ ನಿಮರ್ಾಣ, ಆವರಣಗೋಡೆ ನಿಮರ್ಾಣ ಹಾಗೂ ಕೈದಿಗಳ ಭೇಟಿಗೆ ಬಂದವರ ವಿಶ್ರಾಂತಿಗಾಗಿ ಶೆಡ್ ನಿಮರ್ಾಣ ಹಾಗೂ ಶೌಚಾಲಯ ನಿಮರ್ಾಣಮಾಡುವ ಕುರಿತಂತೆ ಅಂದಾಜು ಪತ್ರಿಕೆ ಸಿದ್ಧಪಡಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು.

      ಲಾಭಾಂಶ: ಕಾರಾಗೃಹ ಆವರಣದಲ್ಲಿ 12.08 ಎಕರೆ ಜಮೀನಿದ್ದು, ಈ ಪೈಕಿ 6.24 ಎಕರೆ ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಕೈಗೊಳ್ಳಲಾಗಿದೆ. 3.5 ಎಕರೆ ಜಮೀನಿನಲ್ಲಿ ಚಂಡು ಹೂ ಬೆಳೆಯಲಾಗಿದೆ. ತರಕಾರಿ ಬೆಳೆಯನ್ನು ಕಾರಾಗೃಹ ವಾಸಿಗಳ ಊಟಕ್ಕೆ ಬಳಸಿ ಉಳಿದ ತರಕಾರಿಯನ್ನು ಮಾರಾಟಮಾಡಿ 40,000 ರೂ. ಉಳಿಸಲಾಗಿದೆ. 

   ಹಾಗೆ ಹೂ ಬೆಳೆಯನ್ನು ಮಾರಾಟಮಾಡಿ  ಒಂದು ಲಕ್ಷ ರೂ. ಉಳಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ 1.40 ಲಕ್ಷ ರೂ. ಉಳಿತಾಯಮಾಡಿ ಸಕರ್ಾರಕ್ಕೆ ಜಮಾ ಮಾಡಲಾಗಿದೆ ಎಂದು ಅಧೀಕ್ಷಕರು ಸಭೆಗೆ ವಿವರಿಸಿದರು. ಈ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂದರ್ಶಕ ಮಂಡಳಿಯ ಎಲ್ಲ ಸದಸ್ಯರು ಅಭಿನಂದಿಸಿದರು. 

ಇದೇ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳವಣಿಗೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಕಾರಾಗೃಹ ಸಿಬ್ಬಂದಿಗಳನ್ನು ಅಭಿನಂದಿಸಿ ಪ್ರಮಾಣಪತ್ರ ನೀಡಲಾಯಿತು.

   ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಶ್ರೀಮತಿ ವೈ.ಎಲ್.ಲಾಡಖಾನ್, ಜಿ.ಪಂ.ಉಪಕಾರ್ಯದಶರ್ಿ ಗೋವಿಂದಸ್ವಾಮಿ, ಕಾರಾಗೃಹದ ಅಧೀಕ್ಷಕ ಟಿ.ಬಿ.ಭಜಂತ್ರಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅಧಿಕಾರೇತರ ಸದಸ್ಯರಾದ ಸತೀಶ ಕುಲಕಣರ್ಿ, ನಿವೃತ್ತ ಶಿಕ್ಷಕಿ ರೇಣುಕಾ ಗುಡಿಮನಿ ಇತರರು ಉಪಸ್ಥಿತರಿದ್ದರು.