ಕೃಷಿಕ ಸಮಾಜದ ಅಧ್ಯಕ್ಷರಾಗಿ ಡಿ.ನಾಗೇಶ್ ಅವಿರೋಧ ಆಯ್ಕೆ
D. Nagesh was elected unopposed as the president of the agricultural society
ಕೃಷಿಕ ಸಮಾಜದ ಅಧ್ಯಕ್ಷರಾಗಿ ಡಿ.ನಾಗೇಶ್ ಅವಿರೋಧ ಆಯ್ಕೆ
ಕೊಟ್ಟೂರು 02: ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕು ಕೃಷಿಕ ಸಮಾಜದ ಪ್ರಥಮ ಅಧ್ಯಕ್ಷರಾಗಿ ಮಲ್ಲನಾಯಕನಹಳ್ಳಿ ಗ್ರಾಮದ ಯುವಮುಖಂಡ ಡಿ.ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಚಪ್ಪರದಹಳ್ಳಿ ಗ್ರಾಮದ ಕೆ.ಕೊಟ್ರೇಶ್ ಅವಿರೋಧವಾಗಿ ಆಯ್ಕೆಗೊಂಡರು ಈ ಸಂಭಂಧ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಅಯ್ಕೆ ಪ್ರಕ್ರಿಯೆಯಲ್ಲಿ ಈ ಎರಡು ಸ್ಥಾನಗಳಿಗೆ ಈ ಇಬ್ಬರನ್ನು ಬಿಟ್ಟು ಯಾರು ನಾಮಪತ್ರ ಸಲ್ಲಿಸದ ಕಾರಣಕ್ಕಾಗಿ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ರೈತ ಸಂಪರ್ಕ ಕೇಂದ್ರದ ಶಾಮಸುಂದರ್ ಅಧಿಕೃತವಾಗಿ ಪ್ರಕಟಿಸಿದರು.
ಜಿಲ್ಲಾ ಸಮಿತಿಗೆ ತಾಲೂಕು ಸದಸ್ಯರಾಗಿ ಜೆ.ಮರುಳಸಿದ್ದಪ್ಪ ಸಹ ಅವಿರೋಧವಾಗಿ ಅಯ್ಕೆಗೊಂಡರು. ಸಭೆಯಲ್ಲಿ ಕೃಷಿಕ ಸಮಾಜಕ್ಕೆ ನೂತನವಾಗಿ ಅಯ್ಕೆಗೊಂಡಿದ್ದ 15 ಸದಸ್ಯರು ಸಭೆಯಲ್ಲಿ ಇದ್ದರು.
ಈ ಸಂಧರ್ಬದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಪಿ.ಹೆಚ್. ದೊಡ್ಡರಾಮಣ್ಣ , ರೈತ ಸಂಘದ ಮುಖಂಡರಾದ ಎನ್. ಭರಮಣ್ಣ, ಕೊಟ್ರೇಶ್, ಕೃಷ್ಣಪ್ಪ, ಲೊಟ್ಟನಕೇರಿ ಮಂಜುನಾಥ, ಗಿತ್ತ ಮಂಜುನಾಥ, ಕೆ.ತೋಪರಾಜ್, ಯಾಳ್ಯ ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಪಿ.ಹೆಚ್.ರಾಘವೇಂದ್ರ, ಯುವಮುಖಂಡ ಪಿ.ಕೆ. ಇಂದ್ರಜಿತ್, ವಿ.ಡಿ.ಅಂಜಿನೆಪ್ಪ, ನಾಗರಾಜಗೌಡ, ಸೇರಿದಂತೆ ಚಪ್ಪರದಹಳ್ಳಿ ಗ್ರಾಮದ ಅನೇಕ ಮುಖಂಡರು ಹಾಗೂ ಮಲ್ಲನಾಯಕನಹಳ್ಳಿ ಗ್ರಾಮದ ಅನೇಕ ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಶುಭ ಕೋರಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 